“ಡಾ.ಪ್ರಹ್ಲಾದ ಅಗಸನಕಟ್ಟೆಯವರ ಕಥೆ ಗಳು ತೀವ್ರವಾದ ಸಮುದಾಯಿಕ ಚಿಂತನೆ ಗಳನ್ನು ಒಳಗೊಂಡಿದ್ದವು” ಎಂದು ಬಂಡಾ ಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಅಭಿಪ್ರಾಯಪಟ್ಟರು. ದಿ:26/06/2022 ರಂದು ಹುಬ್ಬಳ್ಳಿಯ ಕಿಮ್ಸ್ ನ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ನಡೆದ “ಡಾ.ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾ ರಂಭ” ದಲ್ಲಿ ಹಂಪಿ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ನಾಗರಾಜ ಕೋರಿ ಯವರ “ಕಳವಳದ ದೀಗಿ ಕುಣಿದಿತ್ತವ್ವ” ಎಂಬ ಕತೆಗೆ ಪುರಸ್ಕಾರ ನೀಡುತ್ತ ಬೆಟ್ಟದೂರ ಮಾತನಾಡಿದರು.

“ವಿದ್ಯಾರ್ಥಿ ಕಥೆಗಾರರನ್ನು ಗುರುತಿಸುವ ಈ ಕಾರ್ಯ ಮಹತ್ತರವಾದುದು, ಉತ್ತರ ಕರ್ನಾಟಕ ಭಾಗದ ಬರಹಗಾರರಲ್ಲಿ ಅಪ್ಪಟ ದೇಸಿ ಸಂವೇದ ನೆಯಿದ್ದು, ತನ್ನದೇ ಆದ ವಿಶಿಷ್ಟ ಪ್ರಾದೇಶಿಕತೆ ಯಿಂದ ಅದು ಕನ್ನಡ ಸಾಹಿತ್ಯದಲ್ಲಿ ಗಟ್ಟಿಯಾಗಿ ನೆಲೆಗೊಂಡಿದೆ” ಅಂದರು. ಅಕ್ಷರ ಸಾಹಿತ್ಯ ವೇದಿಕೆ, ಹುಬ್ಬಳ್ಳಿ ಮತ್ತು ಕಿಮ್ಸ್ , ಹುಬ್ಬಳ್ಳಿ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಪ್ರಶಸ್ತಿ ವಿಜೇತ ಕಥೆಯ ಕುರಿತು ನಿರ್ಣಾಯಕ ರಾದ ಡಾ.ಚಿದಾನಂದ ಕಮ್ಮಾರ ಮಾತನಾಡಿ ದರು, ಪುರಸ್ಕಾರ ಸ್ವೀಕರಿಸಿದ ನಾಗರಾಜ ಕೋರಿ ತಮ್ಮ ಸಂತಸ ಹಂಚಿಕೊಂಡರು.

ಕಿಮ್ಸ್ ನಿರ್ದೇಶಕರಾದ ಡಾ. ರಾಮಲಿಂಗಪ್ಪ ಅಂಟರತಾನಿ ಅತಿಥಿಗಳಾಗಿ ಆಗಮಿಸಿದ್ದರು, ಎಂ.ಬಿ ಅಡ್ನೂರ ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ವಿಜಯಾ ಪ್ರಹ್ಲಾದ ಅಗಸನಕಟ್ಟೆ ಉಪಸ್ಥಿತರಿದ್ದ ರು. ಡಾ.ಅಕ್ಷತಾ ಅಗಸನಕಟ್ಟೆ ತಮ್ಮ ತಂದೆಯವರ ನೆನಪುಗಳನ್ನು ಹಂಚಿ ಕೊಂಡರು.

ರೂಪಾ ಜೋಶಿ ಪ್ರಾರ್ಥಿಸಿದರು, ಸುನಂದಾ ಕಡಮೆ ಸ್ವಾಗತಿಸಿದರು, ಸಿ.ಎಂ ಚನ್ನಬಸಪ್ಪ ಪ್ರಾಸ್ತಾವಿಕ ಮಾತಾಡಿ ದರು, ಮಹಾಂತಪ್ಪ ನಂದೂರ ಅತಿಥಿಗಳನ್ನು ಪರಿಚಯಿಸಿದರು, ಸಿ.ಎಂ ಮುನಿಸ್ವಾಮಿ ಪ್ರಮಾಣ ಪತ್ರ ವಾಚಿಸಿ ದರು, ವಿರುಪಾಕ್ಷ ಕಟ್ಟಿಮನಿ ನಿರೂಪಿಸಿದರು, ಡಾ. ಸಿದ್ದೇಶ್ವರ ಕಟ್ಕೋಳ ವಂದಿಸಿದರು.

ಚನ್ನಪ್ಪ ಅಂಗಡಿ, ಪ್ರಕಾಶ ಕಡಮೆ, ನಿರ್ಮಲಾ ಶೆಟ್ಟರ್, ಶ್ಯಾಮಸುಂದರ ಬಿದರಕುಂದಿ, ಲಿಂಗರಾಜ ಅಂಗಡಿ, ಕೌಜಲಗಿ, ಭಾರತಿ ಹಿರೇ ಮಠ, ಮರೇಗುದ್ದಿ , ಡಾ.ಮುಲ್ಕಿಪಾಟೀಲ ಮತ್ತು ಅಕ್ಷರ ಸಾಹಿತ್ಯ ವೇದಿಕೆಯ ಸದಸ್ಯರು ಹಾಗೂ ಕಿಮ್ಸ್ ನ ಡಾ.ಪ್ರಹ್ಲಾದ ಸ್ನೇಹ ಬಳಗ ದವರು ಉಪಸ್ಥಿತರಿದ್ದರು.

ಪ್ರಕಾಶ‌ ಕಡಮೆ, 
ನಾಗಸುಧೆ,‌ಹುಬ್ಬಳ್ಳಿ