ಶಿಶುವಿನಾಳದ ಸಂತ
ಗುರುಗೋವಿಂದನ ಬಂಟ
ಸಾಮರಸ್ಯಕೆ ನೆಂಟ.

ಮಾನವೀಯತೆಯ ಸಾಕಾರ
ತಿಳಿಸಿದ ಜೀವನ ಸಾರ
ಸೂಫಿ ಸಂತರ ಮಂದಾರ.

ಅಲ್ಲಾ ಅಲ್ಲಮನು ಒಂದೆಂದು ಸ್ಮರಿಸಿ
ಜಗಕೆಲ್ಲಾ ಜ್ಞಾನದ ಬೆಳಕ ಹರಿಸಿ
ಮೋಹದ ಜೀವನದ ತಿರುಳ ಸರಿಸಿ.

ಭವ ಬಂಧನವ ಸಮೀಕರಿಸಿ
ಅನುಭವ ಅನುಭಾವವ ಪುರಸ್ಕರಿಸಿ
ಜೀವ ಭಾವದ ನಂಟನು ಸತ್ಕರಿಸಿ.

ತತ್ವಪದಗಳ ಹಾಡಿ
ಜಡದ ಜೀವಕೆ ಬಾನಾಡಿ
ಮನೆ ಮನವ ಸೇರಿಸಿದ ಕೊಂಡಿ.

ಗುರು ಶಿಷ್ಯರ ಬಂಬಂಧಕೆ ನವ ಭಾಷ್ಯ
ಜಾತಿ ಧರ್ಮಗಳ ಮೀರಿದ ಸಾಮಿಪ್ಯ
ಸುಮತಿ ಸ್ಥಿತಿಯ ಸಾನಿಧ್ಯ.

ಶಿಷ್ಯೋತ್ತಮ ಜಗಕೆಲ್ಲ
ಅದ್ವೈತ ತತ್ವಕೆ ಮನಸೆಲ್ಲ
ನೀತಿ ನಿಯಮಗಳೆ ಬದುಕೆಲ್ಲ.

ಶರೀಫನೆಂಬ ನಾಭಧ್ಯೇಯ
ಹರುಷ ತುಂಬುವ ಮನೋಧ್ಯೇಯ
ಜೀವ ಸೌಗಂಧಕೆ ವಿಧೇಯ.

✍️ರೇಷ್ಮಾ ಕಂದಕೂರ
ಶಿಕ್ಷಕಿ, ಸಿಂಧನೂರು