ಗಾಣದೆತ್ತಾದರೂ ಅಲ್ಲಿ ಬೆಳಕಿನ ಕಿರಣವೊಂದಿತ್ತು

ನಿಜವಾಗಿಯೂ ಹೇಳಬೇಕೆಂದರೆ ನನ್ನ ಕಾಲೇಜು ದಿನಗಳಿಂದಲೂ ನನ್ನನ್ನು ಕಾಡಿದ ಪುಸ್ತಕ ಎಂದರೆಗೋರೂರು ರಾಮಸ್ವಾಮಿ ಐಯ್ಯಂಗಾರರ ‘ನಮ್ಮ ಊರಿನ ರಸಿಕರು’. ಅಲ್ಲಿಯ ಪ್ರತೀ ಪುಟಗಳನ್ನೂ ಕಾಲೇಜಿನಲ್ಲಿ ರಸವತ್ತಾಗಿ ಪಾಠ ಮಾಡುತ್ತಿದ್ದ ಗೋಕರ್ಣದ ಪ್ರೊ.ಜಿ.ವಿ.ಹೆಗಡೆ ಅವರ ವಾಕ್ಚಾತುರ್ಯತೆಗೆ ಬೆರಗಾಗಿ – ಮರುಳಾಗಿ ನಾನೂ ಸಹ ಇದೇ ತರಹ ನಮ್ಮೂರಿನ ಮಂಜಮ್ಮ, ಮೊನ್ನ, ತಕ್ಕು, ಬೂಶಿನಾಗೇಶ, ಬುದವಂತ, ತಿಪ್ಪು, ಹೊನ್ನಪ್ಪ, ರಮಾಕಾಂತ, ದತ್ತು, ಚಂದ್ರಾಸ, ಕಮಲಾ, ಕಟ್ಟೆಂಗ್ಡಿ, ಪೊಮ್ಮ,‌ದಾಸ, ಹೀಗೆ ಹತ್ತು ಹಲವರ ಬದುಕಿನ ವಿನೋದ ಪ್ರಸಂಗಗಳನ್ನು ಬರೆಯು ವ ಹಂಬಲ ಆಗಾಗ ಕೆಣಕುತ್ತಲೇ ಇರುತಿತ್ತು. ಮತ್ತೆ ಮನುಷ್ಯ ಪ್ರೀತಿಯ ಎಕ್ಕುಂಡಿ ಯವರು ನೆನಪಾ ಗುವರು; ಅದೇ ಬೆಳ್ಳಕ್ಕಿ, ಬಕುಲದ ಹೂವು, ಮೀನು ಪೇಟೆಯ ಮತ್ಸ್ಯಗಂಧಿ ಯರು, ಗುಮಟೆ ಪಾಂಗು, ಗಂಗಾವಳಿ, ಯಕ್ಷಗಾನ. ಉಪ್ಪಿನಾಗರ – ಮತ್ತಲ್ಲಿ ಬೆವರಲಿ ದುಡಿಯು ವ ಆಗೇರರು. ಗುರು ಗೌರೀಶ್ ಕಾಯ್ಕಿಣಿ ಅವರ ವಿಚಾರ ಪ್ರಚೋದ ಕ ಒಳ ನೋಟ, ಹಾಸ್ಯ ಪ್ರಜ್ಞೆ, ಚಾಳೀಸಿನ ಮೇಲೊಂದು ರಾವ್ಗನ್ನಡಿ, ಕೋಟೀತೀರ್ಥ, ಘಟಗಿಯ ಕೆಂಪು ಮಣ್ಣಿನ ಹಾದಿ ಮತ್ತು ‘ಪ್ರತಿಜ್ಞಾ ಯೌಗಂಧರಾಯಣಂ ಹೀಗೆ ಕೌಟುಂಬಿಕವಾಗಿ ಯಾವುದೇ ಸಾಹಿತ್ಯಿಕ ಹಿನ್ನೆಲೆ-ಮುನ್ನೆಲೆ-ಓದು ಇಲ್ಲದಿದ್ದರೂ ಬದುಕಿನ ತುಡಿತ-ಮಿಡಿತಗಳಿಗೆ ಒಳಗಾಗಿ ಬರೆಯಲೇ ಬೇಕೆಂಬ ಅನಿವಾರ್ಯತೆಗೆ ಒಳಗಾದೆ.

ಎಂಬತ್ತರ ದಶಕದ ಸಮಯದಲ್ಲಿ ಹಸಿವು ಹೆಚ್ಚಾಗಿ ಅಂಕೋಲೆಗೆ ಬಂದು ಕವಿತೆ ಕಟ್ಟಲು, ಬದುಕು ಕಟ್ಟಿಕೊಳ್ಳಲು ಹೆಣಗಾಡಿದೆ. ತಂಗು- ದಾಣವೊಂದು ಲಭಿಸಿತು; ಬಲವಾಗಿ ಅಪ್ಪಿ- ಕೊಂಡೆ. ಅನುಭವಿಸಿದ ಅನುಭವಗಳೇ ಕವಿತೆ ಯ ಸಾಲಾದವು. ಈ ನಡುವೆ ಸಮಯ ಸಿಕ್ಕಾಗ ಸಾಹಿತ್ಯಿಕ ಸಂಘಟನೆಗಳು ಕೈ ಹಿಡಿದು ಮೇಲಕ್ಕೆ ತ್ತಿ ಮಾನವೀಯತೆಯ ಬದುಕಿನ ಖುಷಿಯ ಪಾಠ ಕಲಿಸಿಕೊಟ್ಟವು. ವಿಶ್ವಾಸ, ಪ್ರೀತಿ ಮಾನವೀಯ ಸಂಬಂಧ, ಮನುಷ್ಯತ್ವ, ಸಮಾನತೆಯ ಪಾಠಗ ಳನ್ನು ಕಂಡುಂಡು, ಕಂಡೂ ಕಾಣದ ವಿಶಾಲವಾದ ಅಕ್ಷರ ಲೋಕದ ಪ್ರಜೆಯಾದೆ. ಸುಮಾರು ಒಂದು ದಶಕಗಳ ಕಾಲ ಇಲ್ಲೇ ನೆಲೆಸಿದೆ. ಇಲ್ಲಿಂದ ಬಿಡು ಗಡೆ ಬೇಕಿತ್ತು; ಆದರೊಂದು ಗುರಿ ಇತ್ತು. ಗುರಿ ತಲುಪಲು ನಾನೂ ಗಾಣದೆತ್ತಾದೆ. ಗಾಣದೆತ್ತಾ ದರೂ ಅಲ್ಲೊಂದು ಬೆಳಕಿನ ಕಿರಣವಿತ್ತು, ಆ ಬಂಧನದಿಂದ ಬಿಡಿಸಿಕೊಳ್ಳುವ ಛಲ ನನ್ನಲ್ಲಿತ್ತು. ಬಿಡಿಸಿ ಕೊಂಡೆ. ಹಲವರ ಕಣ್ಣಿಗೆ ಮುಗ್ಧನಾಗಿ ಕಂಡೆ; ಕೆಲವರಂತೂ ಕೊನೆತನಕ ಸಂಶಯದ ದೃಷ್ಟಿ ಯಿಂದಲೇ ಕಂಡರು. “ಇವನದು ಗುರಿ ಇಲ್ಲದ ದಾರಿ, ಇಲ್ಲೇ ಹತ್ತರೊಳಗೆ ಹನ್ನೊಂದಾಗಿ ಈ ಬಂಧನ ದಿಂದ ಬಿಡುಗಡೆಯೇ ಇಲ್ಲ” ಎಂದು ಹುಬ್ಬೇರಿಸಿದವ ರೂ ಕೆಲವರಿದ್ದರು; ಅನುಮಾ ನದ ಬೆಂಕಿಯ ಸುತ್ತ ಕಣ್ಗಾವಲು ಪಡೆಗಳೂ ಕಾರ್ಯನಿರ್ವ ಹಿಸಿ ತಣ್ಣಗಾದವು.

ಮನನೊಂದು ಅಕ್ಷರಗಳ ಗೀಚತೊಡಗಿದೆ. ಅದು ರಕ್ತ ಮಾಂಸದ ಸಾಲಾಗಿತ್ತು. ದುಡಿಯು ವ ಕೈ ಗಳ ಹೋರಾಟದ ಬದುಕಾಗಿತ್ತು. ಬೆವರಿನ ಉಸಿರಿನ ಬೇಗುದಿಯಾಗಿತ್ತು. ಕುಹಕಿ ಗಳ ಮನಕೆ ಕೆಟ್ಟ ಕನಸಾಗಿತ್ತು. ಅಧಿಕಾರ ಚಲಾಯಿ ಸುವವರ ದರ್ಪಕ್ಕೆ ಅಕ್ಷರವಾದೆ. ಅಲ್ಲಲ್ಲಿ ಯುವ ಶಕ್ತಿಯ ನಾಶಕ್ಕೆ ಮರುಗಿದೆ. ಬಡತನಕ್ಕೆ ಕಟು ಮಾತು, ನಿಂದನೆ ಕೇಳಿದ ಅಮ್ಮನ ಮುಖ ಕಂಡು ಮೌನಿಯಾದೆ. ಅತಿವೃಷ್ಟಿ-ಅನಾವೃಷ್ಟಿಯ ಜನರ ಮಳೆಗಾಲಕ್ಕೆ ಕಣ್ಣೀರಾದೆ. ಜಾತ್ರೆಯ ಬಡವ – ಶ್ರೀಮಂತನ ಕಂದಕಕ್ಕೆ ಕಣ್ಣಾದೆ. ಚಹದಂಗಡಿ ಯ ಹುಡುಗ ರ ಹಗಲು ವೇಶಕೆ ಪಾಲುದಾರನಾಗಿ ಅವರೊಡನೆ ಕಾಲಿನಲಿ ಕೈ ಹೊಕ್ಕಿಸಿ ಕೆಲ ಸಮ ಯ ಕಳೆದೆ. ಮಂತ್ರಿಯಾಗುವ ಅರ್ಹತೆಯನ್ನೂ ಮನ ಗಂಡೆ. ಸೋಗಿನ ಸಮಾಜವಾದಿಗಳ ಸೋಷಿಯಾಲೀಸಂ ಚೆನ್ನಾಗಿ ಅರ್ಥೈಸಿಕೊಂಡೆ. ಗೂಡಂಗಡಿಗಳ ಹಿಂದಿನ ಸಂಸಾರದ ಬದುಕನ್ನು ವರ್ಣಿಸಿದೆ. ಸುಗ್ಗಿಯ ಕರಡಿ ಮತ್ತು ನಿಜ ಜೀವನ ದಲ್ಲಿ ಜನ ಸಾಮಾನ್ಯನನ್ನು ಸುಲಿಯುವ ಕರಡಿ ಗಳ ಕುರಿತಾಗಿ ಏನೋ ಒಂದೆರಡಕ್ಷರ ಬರೆದೆ. ಬಿ.ಎ ಬೇಕ್ರಿ ಬಿ.ಎ ಗೆ ಬಹುಮಾನ ಪಡದು, “ಬಿಟ್ಟಿ ಕೆಲಸಾ ಹೇಳ ಬೇಡಿ, ನಾವೂ ಸ್ವಾಭಿ ಮಾನಿಗಳೇ” ಎಂದು ತಿಳಿಸಿದೆ. ಮೊನ್ನನ ಮುಗ್ಧತೆ, ಅವನನ್ನು ಬಳಸಿ ಕೊಂಡ ಜನ ದೂರ ಮಾಡುವಾಗ ಶೋಷಣೆಗೆ ರೋಸಿಹೋದೆ. ಲಕ್ಷೀ ಪೂಜೆಯಲ್ಲೂ ಒಬ್ಬರ ಸಮೃದ್ಧಿ ಇನ್ನೊಬ್ಬರ ಬಡ ತನದ ಕಂದಕಕ್ಕೆ ಬಡಬಡಿಸಿದೆ. ಇಪ್ಪತ್ತೈದರಂಚಿ ನ ಬಡಹುಡುಗಿ ಯ ಒಡಲಾಳಕ್ಕೆ ನೊಂದು ಬೆಂದೆ. ಯುವ ವರ್ಷದಲ್ಲೇ ಅನ್ಯಾಯಕ್ಕೆ ಒಳ ಗಾದ ಯುವಕ ರಿಗಾಗೆ ಮರುಗಿದೆ. ಕಾಲು ಶತ ಮಾನಗಳ ಕಾಲ ಗಾಣದೆತ್ತಾಗಿ ದುಡಿದುಡಿದ ಅಪ್ಪನನ್ನು ಮುದಿ ಎತ್ತಿನಂತೆ ಅಟ್ಟೋಡಿಸುವಾಗ ಮೂಕ ವೇದನೆಯ ಮೌನ ಕವಿತೆಯ ಸಾಲಿಗೆ ಪ್ರೇಕ್ಷಕನಾದೆ. ನನ್ನ ಬದುಕಿಗೆ ನಾನೇ ಮನ ನೊಂದು ಬಂಧನದ ಬಿಡುಗಡೆಗೆ ಮನಸ್ಸನ್ನು ಅಣಿಗೊಳಿಸಿದೆ………ಹೀಗೇ ಕವಿತೆಯ ಸಾಲುಗಳು ಕೈ ಹಿಡಿದು ಬೆಳಕಿನಡೆ ಮುನ್ನಡೆ ಸಿತು.

ಎದೆಯಂತರಾಳ ಅಕ್ಷರಗಳಿಗೆ ಬೆಳಕ ನೀಡಿದ
ವಿದ್ಯಾಗುರುಗಳಾದ ಸು.ರಂ.ಎಕ್ಕುಂಡಿಯವರು ನನ್ನ ಕವಿತೆ ಎನ್ನುವ ಸಾಲುಗಳಿಗೆ “ಮುನ್ನುಡಿ” ಬರೆಯುತ್ತಾ “ಪ್ರಕಾಶ ಶೆಟ್ಟಿ, ಕಡಮೆಯವರನ್ನು ವಿದ್ಯಾರ್ಥಿದೆಸೆಯಿಂದಲೂ ಬಲ್ಲ ನನಗೆ, ಅವರು ಒಬ್ಬ ಶಾಂತ, ಸಮಾಧಾನಿ ಹಾಗೂ ತುಂಬ ಬುದ್ಧಿ ವಂತ ಹುಡುಗನಾಗಿಯೇ ಕಂಡರು. ಸದ್ದಿಲ್ಲದೇ ಒಳ್ಳೆಯ ವಿದ್ಯಾರ್ಥಿಯಾ ಗಿ, ಚೆನ್ನಾಗಿ ಓದಿ ತಮ್ಮ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುತ್ತಾ ನಡೆಯು ತ್ತಿದ್ದರು. ಇವರಿದ್ದ ‘ಕಡಮೆ’ ಎಂಬ ಪುಟ್ಟದಾದ ಪ್ರಶಾಂತ ಊರನ್ನು ನೋಡಬಲ್ಲ ನನಗೆ ಆ ಸುಂದರ ಹತ್ತಾರು ಮನೆಗಳ ಪುಟ್ಟ ಹಳ್ಳಿಗೂ, ಈ ಹುಡುಗನ ಅಲೆಗಳಿಲ್ಲದ ಶಾಂತ ಸತ್ವಕ್ಕೂ ಎಷ್ಟೊಂದು ಸಾಮರಸ್ಯ ಎನಿಸಿತು. ಆದರೆ ಕಾವ್ಯ ಸತ್ವ ಇದೆಯಲ್ಲ ಅದು ತುಂಬಾ ಅದ್ಭುತ ವಾದದ್ದು. ಅದು ಪ್ರಕಟವಾಗುವ ರೀತಿಯೂ ಕೂಡ ಬೆರಗಿನದೆ. ಚಿಕ್ಕಂದಿನಿಂದ ಲೂ ತುಂಬ ಕ್ಷುಬ್ಧ, ಅಶಾಂತ, ಹೋರಾಟ ತುಂಬಿದ ಬದುಕು ಗಳಿಂದ ನಿಧಾನದ ಹೊಳೆಯಂತೆ ಹರಿಯ ಬಲ್ಲದು. ಶಾಂತಹೃದಯ ಗಳಿಂದ, ಒಮ್ಮೆಲೇ ಜ್ವಾಲಾ – ಮುಖಿಯಂತೆ ತನ್ನ ಎಲ್ಲಾ ಬಚ್ಚಿಟ್ಟ ರೋಷ, ಆವೇಶಗಳ ಲಾವಾದ ಹೊಳೆ ಯನ್ನೇ ಹರಿಬಿಡುತ್ತದೆ. ಇವರ ಕವಿತೆಗಳ ನೋವು ಈ ಬಗೆಯದು. ಇವರು ಕ್ರದ್ಧ ಯುವ ಪೀಳಿಗೆಯ ವರು. ನಡೆ ಮತ್ತು ನುಡಿಗಳ ನಡುವಿನ ದೊಡ್ಡ ಕಂದಕವನ್ನು ಹುಟ್ಟಿಸಿದ ಸಮಕಾಲೀನ ಬದುಕಿ ನ ಅನ್ಯಾಯದ ಅನಾಹು ತಗಳನ್ನು ಕಂಡು ರೋಸಿ ಹೋದವರು. ಹೀಗಾಗಿ ಇವರ ಕವಿತೆ ಗಳಲ್ಲಿ ಬಂಡಾಯದ ಶಿಲಾರಸ ಹರಿಯುತ್ತಿದೆ” ಎಂದು ಹಾರೈಸಿದರು.

ಮತ್ತೊಬ್ಬ ಗುರು ವಿಷ್ಣು ನಾಯ್ಕರು “ಗಾಣದೆತ್ತು ಮತ್ತು ತೆಂಗಿನ ಮರ”ವನ್ನು ಪ್ರಕಟಿಸಿದರು.

ಇತ್ತೀಚಿಗೆ, ಮೊನ್ನೆ ಮೊನ್ನೆ ಮಗಳು ಊರಿಗೆ ಬಂದಾಗ 1987ರಲ್ಲಿ ಬಂದ ಈ ನನ್ನ “ಗಾಣದೆತ್ತು …” ಕವನ ಸಂಕಲನದ ಪುಟತೆಗೆ ದಂತೆ, ಪುಸ್ತಕದ ಅರ್ಪಣೆಯ ಸಾಲು:

ಕಂಡಾಗ ಬೆರಗು ಮತ್ತು ಆಶ್ಚರ್ಯ ಚಕಿತಳಾಗಿ,
ಅರ್ಪಣೆ ಮಾಡಿಸಿಕೊಳ್ಳುವಂತಹ ಇವರು ಯಾರು? ಮೊದಲ ಪುಸ್ತಕವಾದ್ದರಿಂದ ನಿಮ್ಮ ಅಪ್ಪ- ಅಮ್ಮರಿಗೆ, ಇಲ್ಲಾ ನಿಮಗೆ ವಿದ್ಯೆಯನ್ನು ಕಲಿಸಿದ ಗುರುಗಳಿಗೆ, ನಿಮಗಿಷ್ಟವಾದ ಕಾಡು- ಕಡಲಿಗೆ, ಇಲ್ಲಿಯ ಪರಿಸರಕ್ಕೆ, ಒಡ ಹುಟ್ಟಿದವ ರಿಗೆ ಅಥವಾ ಅಂದಿನ ನಿಮ್ಮ ಪ್ರೇಯಸಿ ಅಂದರೆ ನನ್ನ ಅಮ್ಮನಿಗೆ ಅರ್ಪಿಸುವದನ್ನು ಬಿಟ್ಟು ನಾನು ಎಂದೂ ಕಾಣದ-ಕೇಳದ ಇವರ್ಯಾರು, ಪಪ್ಪಾ? ಪ್ರಶ್ನೆಗೆ ಒಮ್ಮೆಲೇ ಉತ್ತರಿಸಲಾಗದೇ ಮೌನಿಯಾ ಗಿದ್ದೆ.

ಬದುಕಿನ ದುರಿತಕಾಲದ ದಿನಗಳವು. ಮನುಷ್ಯ ಪ್ರೀತಿ ಎಂದರೇನು ಎಂಬುದನ್ನು ಕಂಡರಿಯದ ಆ ದಿನಗಳಲ್ಲಿ ವಿಜು ನನಗೆ ಪ್ರೀತಿ, ವಿಶ್ವಾಸ, ಸ್ನೇಹ, ವಾತ್ಸಲ್ಯ, ಅಕ್ಕರತೆಯ ಬಲ ನೀಡಿದಳು. ನನಗಿಂತ ಐದಾರು ವರ್ಷ ಹಿರಿಯಳಾದ ಇವಳು ನನ್ನ ದೂರದ ಸಂಬಂಧಿ ಮತ್ತು ನನಗೆ ಆಶ್ರಯ ಕೊಟ್ಟ ಮನೆಯ ಮಗಳು.ಅನಾಥ ಪ್ರಜ್ಞೆ ಕಾಡುವ ನನಗಂದು ಮಮತೆಯ ಕಡಲಾದವಳು. ಆ ದಿನಗಳಲ್ಲಿ ತಡಹಗಲಲಿ ಎಷ್ಟೊತ್ತಿಗೆ ಬಂದರೂ ಹಸಿದ ಹೊಟ್ಟೆಗೆ ಅಮ್ಮನಂತೆ ಅನ್ನ ನೀಡಿದಳು; ನನ್ನ ಅಕ್ಷರಗಳಿಗೆ ಬೆಂಗಾವಲಿನ ಬೆಳಕಾದಳು; ಬಿದ್ದಾಗ ಹಿಡಿದೆಬ್ಬಿಸಿ ಧೈರ್ಯದ ದೇವತೆಯಾದ ವಳಿವಳು. ಸದಾ ನನ್ನ ಏಳ್ಗೆಯನ್ನೇ ಬಯಸುವ ಇವಳ ಪ್ರೀತಿಗೆ ನನ್ನಲ್ಲಿ ಪದಗಳೇ ಇರಲಿಲ್ಲ.

ನೋಡು ನೋಡುತಿದ್ದಂತೆ ಮದುವೆಯಾಗಿ ಗಂಡನ ಮನೆ ಸೇರಿ ಮಗನನ್ನೂ ಪಡೆದಳು. ಎಲ್ಲವೂ ಸುಖಮಯ ಎನ್ನುವಾಗಲೇ ಅನಾ ರೋಗ್ಯದಿಂದಲೋ ವಂಶವಾಹಿನಿಯ ಕಾರಣ ದಿಂದಲೋ ತನ್ನೆರಡೂ ಮೂತ್ರಪಿಂಡಗಳನ್ನು ಕಳಕೊಂಡು ಸಾವು ಬದುಕಿನ ನಡುವೆ ವಿಲಿವಿಲಿ ಒದ್ದಾಡಿ ಯಾವ ಚಿಕಿತ್ಸೆಗೂ ಸ್ಪಂದಿಸದೇ ನನ್ನ ಕಣ್ಣೆದುರೇ ಕಣ್ಮುಚ್ಚಿಕೊಂಡು ಇಂದಿಗೆ ಸುಮಾರು ೩೫ ವರ್ಷಗಳೇ ಉರುಳಿದವು.

ಪಾಪೂ, ಈಗ ಹೇಳು; ನಾನು ಇನ್ನಾರಿಗೆ, ನನ್ನ ಬದುಕಿನ ಬಿಡಿಬಿಡಿಯಾದ ಅಕ್ಷರ ಮಾಲೆಯ ಈ “ಗಾಣದೆತ್ತು ಮತ್ತು ತೆಂಗಿನ ಮರ” ವನ್ನು ಅರ್ಪಿಸಲಿ?

✍️ಪ್ರಕಾಶ ಕಡಮೆ
ನಾಗಸುಧೆ, ಹುಬ್ಬಳ್ಳಿ