ಅರಿಷಡ್ವರ್ಗಗಳಾದ ಮದ,ಮತ್ಸರಗಳ ಸಮ್ಮಿಶ್ರ ಭಾವವಾದ ‘ಹಗೆ’ ಹಿಂದಿನಿಂದಲೂ ಮಾನವ ಸಂಕುಲಕ್ಕೆ ಆತನ ಬೆಳವಣಿಗೆಯ ದಾರಿಗೆ ಮುಳ್ಳಾಗುತ್ತಲೆ ಬಂದಿದೆ, ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಇದು ಸ್ಪಷ್ಟ ವಾಗಿ ಗೋಚರಿಸುತ್ತಿದೆ. ಈ ಯುದ್ಧದಿಂದ ರಷ್ಯಾ ಸಾಧಿಸಿದ್ದು ಏನು ಎಂಬುದನ್ನು ಪ್ರಶ್ನಿಸಿ ದರೆ ಉತ್ತರವನ್ನು ಶೂನ್ಯ ಎನ್ನಬಹುದು. ಏಕೆಂದರೆ ರಷ್ಯಾ ಪಡೆದುಕೊಂಡಿದ್ದು ಇತರೆ ರಾಷ್ಟ್ರಗಳಿಂದ ನಿರ್ಭಂದನೆ ಮತ್ತು ನಾಗರಿಕರ ಶಾಪಮಾತ್ರ. ಎರಡೂ ದೇಶಗಳಲ್ಲಿ ಸಾವುಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಮತ್ತಷ್ಟು ರಾಷ್ಟ್ರಗಳು ಅವರೊಂದಿಗೆ ಸೇರಿ ನರಮೇಧ ನಡೆಸಲು ಹಾತೊರೆಯುತ್ತಿದೆ.

ಆದರೆ ಭಾರತ ಅಲಿಪ್ತ ನೀತಿಯನ್ನು ಅನುಸರಿಸಿ, ತನ್ನ ನಾಗರಿಕರ ರಕ್ಷಣಾ ಕಾರ್ಯ ಮಾಡಿದಲ್ಲದೆ ಬಾಂಗ್ಲಾದೇಶದ 9 ಜನ ನಾಗರಿಕರು ಮತ್ತು ಪಾಕಿಸ್ತಾನದ ಬಾಲಕಿ ಸೇರಿ ದಂತೆ ಶತ್ರುರಾಷ್ಟ್ರ ಗಳಿಗೂ ಸಹಾಯವನ್ನು ಮಾಡಿ ಭಾರತ ಜಾಗತಿ ಕವಾಗಿ ತನ್ನ ಸ್ಥಾನ ಮಾತೃರೂಪಿಯಾದದ್ದು ಎನ್ನುವುದನ್ನು ನಿರೂಪಿ ಸಿದೆ. ಈ ಶಾಂತಚಿತ್ತ ಜಗತ್ತಿಗೆ ಮಾದರಿಯಾಗಬೇಕಿದೆ, ಯುದ್ಧ ವಿನಾಶದ ಪ್ರತಿರೂಪ ಎಂಬು ದನ್ನು ಎಲ್ಲಾ ದೇಶಗಳು ಅರಿತುಕೊಳ್ಳಬೇಕು, ಎರಡು ರಾಷ್ಟ್ರ ಗಳು ಹಗೆತನ ಸಾಧಿಸುತ್ತಿದ್ದರೆ ಅದನ್ನು ಶಾಂತಿ ಯುತವಾಗಿ ಬಗೆಹರಿಸಲು ಪ್ರಯತ್ನಿಸಬೇಕು. ಆದರೆ ಇಂದು ಅಮೆರಿಕಾ ಮತ್ತು ನ್ಯಾಟೋ ರಾಷ್ಟ್ರಗಳು ಮಾಡುತ್ತಿರುವ ಯುದ್ಧಕ್ಕೆ ಬೆಂಬಲ ವನ್ನು ನೀಡುವ ಕಾರ್ಯ ನಿಜಕ್ಕೂ ಖಂಡನೀಯ.

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಕೊನೆ ಗೊಳ್ಳಬೇಕಿದೆ, ಜಾಗತಿಕ ಹಿತದೃಷ್ಟಿಯಿಂ ದಲಾದ ರೂ ಹಗೆತನವನ್ನು ಬಿಟ್ಟು ಶಾಂತಿ ಸಂಧಾನ ನಡೆಯಬೇಕಿದೆ, ವಿಧಿಯ ಕಾಲಗರ್ಭ ಕ್ಕೆ ನಮ್ಮಲ್ಲಿ ನ ಹಗೆತನವೇ ಮಾನವ ಸಂಕುಲವನ್ನು ಆಹಾರ ವನ್ನಾಗಿ ಮಾಡಲಿದೆ ಎನ್ನುವ ಸತ್ಯವನ್ನು ಎಲ್ಲರೂ ಅರಿಯಬೇಕಿದೆ. ಹಿಂದೆ ಜಗತ್ತು ಎರಡು ಮಹಾ ಯುದ್ಧಗಳನ್ನು ಕಂಡಿದೆ, ಬ್ಯಾರಲ್ ಗಟ್ಟಲೆ ರಕ್ತ ಹರಿದಿದೆ, ಆದರು ತಾನು ಪ್ರಭಲ ಎನ್ನುವ ಮದ ವಿನಾಶ ವನ್ನು ಗೌಣವಾಗಿಸಿ ಯುದ್ಧೋನ್ಮಾದ ವನ್ನು ಹೆಚ್ಚಿಸುತ್ತಲೆ ಇದೆ. ಇಂದಿನ ಆಧುನಿಕ ಜಗತ್ತಿನಲ್ಲಿ ಶಸ್ತ್ರಾಸ್ತ್ರಗಳು ಕೂಡಾ ಅಧುನಿಕ ರೂಪ ಪಡೆದಿದ್ದು ಹೆಚ್ಚು ಅಪಾರ ಪ್ರಮಾಣದಲ್ಲಿ ಹಾನಿಯುಂಟುಮಾಡಬಲ್ಲವು. ಈಗ ಮತ್ತೆ ಮಹಾಯುದ್ಧ ನಡೆದರೆ ಭೂಮಿ ನರಕವಾಗಿ ಬದಲಾಗುವು ದಂತೂ ಸತ್ಯ.

✍️ಪ್ರಸಿದ್ ಭಟ್
ಎಸ್.ಡಿ.ಎಮ್ ಸ್ನಾತಕೋತ್ತರ ಕೇಂದ್ರ ಉಜಿರೆ