ಜಗದ ಬಯಲಿನಲಿ
ಬದುಕಿನ ಸಂತೆಯಲಿ
ನಿಂತ ಶಿಲೆ ನಾನು..!

ಸದಾ ಕಾಲ ಕಾಲಕ್ಕೆ
ಕಂಡ ಕಂಡವರೆಲ್ಲ
ಅರಿವಿನ ಉಳಿಯಿಂದ
ಕೆತ್ತುತ್ತಲೇ ಇದ್ದಾರೆ…..

ಬಾಳಪಾಠ ಬೋಧಿಸುತ್ತ
ಶಿಲೆಯಾದ ನನ್ನನ್ನು
ಶಿಲ್ಪವಾಗಿ ಬದಲಾಯಿಸುತ್ತ.!!

✍️ಎ.ಎನ್.ರಮೇಶ್. ಗುಬ್ಬಿ.