ಬರುತಿಲ್ಲ ಬಳೆಗಾರ ಚೆನ್ನಯ್ಯ,ಚೆನ್ನಯ್ಯsss
ಮರುದಿನ ಬರತೇನಿ ಅಂತೇಳಿ ಹೋದಾಂವ
ಊರಸುದ್ದಿಯ ಹೊತ್ತ ಸುಳಿಯಾಂವsss
ಬಂಧಗಳ ಜೊತೆ ತಾ ಭಾವಗಳ ಬೆಸೆಯಾಂವ

ರಾಯರಿಲ್ಲದ ಮನಿಯ ರಾಸವಿಲ್ಲದ ಸುಳಿಯ
ಎಳೆ ಎಳೆಯ ಬಿಡಿಸಿ ತಾ ಹೇಳಾಂವsss
ಮಲ್ಲಿಗೆಯ ಮುಡಿಯೇರಿ ಪ್ರೀತಿಯ ಬೆಸೆದವನ
ಚಿತ್ರಗಳ ಸರಮಾಲೆ ತಂದಾಂವsss

ಅತ್ತೆಮಾವರ ಚಿತ್ತ ನಿನ್ನ ಮನಸಿನ ಸುತ್ತ
ಸೊಸೆಯಲ್ಲ ಮಗಳು ತಾ ಅಂದಾವss
ಹುಸಿಗೋಪ ಮುನಿಸಿನಲಿ ಕೈ ಕೈ ಹೊಸೆಯುತ್ತ
ನೊಂದವನ ಕತೆಯ ತಂದಾಂವsss

ಮನೆಯ ಅಂಗಳದಲ್ಲಿ ರಂಗೋಲಿ ಕಳೆಯಿಲ್ಲ
ರಾಯರ ಮೊಗದಲ್ಲಿ ನಗೆಯಿಲ್ಲ sss
ನವಿಲೂರ ಕೇರಿಯಲಿ ಗೆಳತಿಯರ ಸುಳಿವಿಲ್ಲ
ಮೌನದ ಮಾತದ ಅಂದಾವsss

ಸಿಟ್ಯಾಕ ಸೆಡುವ್ಯಾಕ ಅವರಿವರ ಮಾತ್ಯಾಕ
ಶಾಶ್ವತ ನಿನ್ನವನು ಅಂದಾಂವssss
ಕೈ ಮುಗಿದು ಬೇಡುವೇನು ಬಂದು ಬಿಡು ನನ್ನವ್ವ
ಸಾಗಿಸು ನೌಕೆಯ ಅಂದಾಂವsss

✍️ಶ್ರೀಧರ ಗಸ್ತಿ,
ಧಾರವಾಡ