ಆಟದಲ್ಲೊಂದು ಕ್ಷಣ ಎಂಥ ಆತ್ಮೀಯತೆ ಕಾಲಿಗೂ ಕಾಲ್ಚೆಂಡಿಗೂ
ಪ್ರೀತಿ ರೋಷದ ನಡುವೆ ಉರುಳಿ ಹೊರಳುವ ಬದುಕ
ನೋಡಿ ನಿಡುಸುಯ್ಯುವೆನು ನಾನೆಂದಿಗೂ

ಎಂದು ಆತ್ಮೀಯತೆಯನ್ನು ಚುಟುಕಾಗಿ ಬಣ್ಣಿಸಿ ದರು ಶಿವರುದ್ರಪ್ಪನವರು ಒಲವು ಚೆಲುವುಗಳ ತುಂಬು ಬದುಕು ಕಂಡವರು ಅನುಭವಿಸಿದ ವರು. ತಮ್ಮ ಆತ್ಮೀಯತೆಯ ಪರಿಧಿಯೊಳಗೆ ಬಂದವರನ್ನು ತಮ್ಮ ವಾತ್ಸಲ್ಯ ವಿಶ್ವಾಸದ ವರ್ಷ ದಲ್ಲಿ ಮೀಯಿಸಿದವರು. ತಮ್ಮ ಪ್ರೀತಿ ಪಾತ್ರರನ್ನು ಮಾರ್ಗದರ್ಶಿ ಗುರುಗಳೆಂದು ಭಾವಿಸಿ ಗೌರವಿ ಸುವ ಇತರ ಕವಿಗಳನ್ನು ಅವರ ಕಾವ್ಯ ಸೃಷ್ಟಿ ಯಲ್ಲಿ ಹೇಗೆ ಪರಿಚಯಿಸಿ ದ್ದಾರೆ ನೋಡೋಣ ಬನ್ನಿ.
ಅವರ ಗೋಡೆ ಸಂಕಲನದ ತೀನಂಶ್ರೀ ಕವನ
ಕವಿಮಿತ್ರ ತೀ.ನಂ.ಶ್ರೀಕಂಠಯ್ಯ ಅವರನ್ನು ಕಂಡರೆ ಜಿಎಸ್ಸೆಸ್ ಅವರಿಗೆ ಇದ್ದ ಆದರದ ಭಾವನೆಯ ಸುಮಗಳು ಕವನದ ಮಾಲಿಕೆ ಯಲ್ಲಿ ಕೋಯ್ದುಕೊಂಡಿರುವುದು ಹೀಗೆ ….
ನೋಡಿದರೆ ನೋಡಿದಷ್ಟೂ ಇಷ್ಟ
ಮಾತೊ ಮಿತ ಖಚಿತ ನಿಷ್ಕೃಷ್ಟ

ಖಂಡಿತವಾದ ಮಾತನ್ನು ಮಿತ ಶಬ್ದಗಳಲ್ಲಿ ಅರುಹುವ ಇವರನ್ನು ನೋಡಿದಷ್ಟೂ ಇಷ್ಟವಾ ಗುತ್ತಾ ಹೋಗುತ್ತಾರಂತೆ. ಕೆಲವರು ಮೊದಲ ನೋಟಕ್ಕೆ ಇಷ್ಟವಾಗಿ ನಂತರದಲ್ಲಿ ಸ್ವಲ್ಪ ಬೇಸರ ದ ಇರಸರಿಕೆ ಅನ್ನಿಸಿದರೂ ಕೆಲವರು ಮೊದಲಿ ಗೂ ಇಷ್ಟವಾಗಿ ನಂತರ ಅವರ ಗುಣಸ್ವಭಾವ ಗಳಿಂದ ಮತ್ತಷ್ಟು ಹೃದಯಕ್ಕೆ ಹತ್ತಿರವಾಗುತ್ತಾ ಹೋಗುತ್ತಾರೆ. ಕವಿಗಳಿಗೆ ತೀನಂಶ್ರೀ ಅವರೆಂದರೆ ಅದೇ ಭಾವ.
ಅಚ್ಚುಕಟ್ಟಿನ ಸ್ವಚ್ಛತೆಯ ಸಂಕೇತ ಮೂಡಿದೊಂದೊಂದು ಕೃತಿಯೂ ಕೃತಾರ್ಥ
ಹಿಂದೆ ಕೆಎಸ್ ನ ಅವರು ಸಹ ಇದೇ ಮಾತನ್ನು ಹೇಳುತ್ತಾರೆ ತಲೆಗೆ ಮೈಸೂರುಪೇಟ ವಿಲ್ಲದೆ ಹೊರಡುತ್ತಿರಲಿಲ್ಲ ಎಂಬ ತೀನಂಶ್ರೀ ಅವರ ಉಡುಪಿನ ಅಚ್ಚುಕಟ್ಟುತನವನ್ನು ಬಣ್ಣಿಸಿದ್ದಾ ರೆ. ಜಿಎಸ್ಸೆಸ್ ಅವರು ಅದನ್ನೇ ಹೇಳುತ್ತಾರೆ, ಹೊರ ಗಿನ ಬಟ್ಟೆಯ ಅಚ್ಚುಕಟ್ಟುತನ ಹೀಗಾದರೆ ಅವರು ರಚಿಸಿದ ಕೃತಿಗಳು ಅದೆಷ್ಟು ಮೌಲಿಕವಾ ದದ್ದು ಒಂದೊಂದು ಕೃತಾರ್ಥ ಭಾವನೆ ತರುವಂತ ಹುದು ಎಂದು ಹೇಳುತ್ತಾರೆ.
ಈ ಸಾಲುಗಳು ಎಷ್ಟು ಸಾರ್ವಕಾಲಿಕ ಸತ್ಯ ಅಲ್ಲವೇ? ಅಂತಹ ನರಾಧಮ ಬುದ್ಧಿಗಳನ್ನು ಬಿಟ್ಟು ತನ್ನ ಸುತ್ತಲಿನ ಸಮಾಜದಲ್ಲಿ ಸತ್ಯವಾದು ದನ್ನು ಸುಂದರವಾದುದನ್ನು ಶಿವವಾದುದನ್ನೂ ರಸಚೇತನದಿಂದ ಆರಾಧಿಸಿದಾಗ ಸಾಹಿತ್ಯಕ್ಕೆ ನಿಜವಾದ ನೆಲೆ ಬೆಲೆ ದೊರಕಿದಂತೆ ಅಲ್ಲವೇ?
ಪರಿಪೂರ್ಣತೆಯ ಅತೃಪ್ತ ಅನ್ವೇಷಕ
ಪ್ರತಿಭೆ ಪಾಂಡಿತ್ಯಗಳ ಹದವಾದ ಪಾಕ

ಇದಂತೂ ಖಂಡಿತವಾದ ಮಾತು. ಯಾವ ಕವಿಗೂ ತನ್ನ ಕವನ ಅಥವಾ ರಚನೆ ಪೂರ್ತಿ ತೃಪ್ತಿ ಕೊಡುವುದಿಲ್ಲ. ಪರಿಪೂರ್ಣತೆಗೆ ಇನ್ನಷ್ಟು ಮೆಟ್ಟಿಲುಗಳು ಇದ್ದೇ ಇದೆ ಎನ್ನುವ ಅಭಿಮತ. ಆ ರೀತಿ ತೀನಂಶ್ರೀ ಅವರು ಪರಿಪೂರ್ಣತೆ ಯನ್ನು ಅನ್ವೇಷಿಸುತ್ತಾ ಹೊರಟಿರುವವರು ಎಂದು ಕವಿಯ ಭಾವನೆ. ಅವರ ಒಡನಾಟ ದಲ್ಲಿದ್ದ ಕವಿಗೆ ಆ ಅನ್ವೇಷಣೆಯಲ್ಲಿ ಎಂದೂ ಅವರಿಗೆ ತೃಪ್ತಿ ಸಿಕ್ಕಿಲ್ಲ ಎಂಬ ಅಭಿಪ್ರಾಯವೂ ಇದೆ. ಹೇಗೆ ತೀನಂಶ್ರೀ ಎಂದರೆ ಪ್ರತಿಭೆ ಹಾಗೂ ಪಾಂಡಿತ್ಯ ಗಳನ್ನು ಬೆರೆಸಿದ ಹದವಾದ ಪಾಕದಂತೆ ಎಂದು ಬಣ್ಣಿಸುತ್ತಾರೆ.
ಸಂಶಯದ ಕಡಲಲ್ಲಿ ಗೋಪುರದ ದೀಪ
ಸದ್ದಿರದ ಸಾಧನೆಗೆ ಜೀವಂತ ರೂಪ
ಅಗಾಧ ಪಾಂಡಿತ್ಯದ ಮೇರುವಾಗಿದ್ದ ತೀನಂಶ್ರೀ ಅವರ ಬಳಿ ಎಲ್ಲ ಸಂಶಯಗಳಿಗೂ ಉತ್ತರ ವಿತ್ತು. ಆದರೂ ಅವರು ಮೌನ ಸಾಧನೆಗೆ ಉದಾಹರಣೆಯಾಗಿದ್ದರು ಎನ್ನುತ್ತಾರೆ. ಇಂದು ಒಂದೆರೆಡು ಕೃತಿ ರಚಿಸಿ ತಾವೇ ಮಹಾನ್ ಪಂಡಿತರೆಂದು ಮೆರೆಯು ವವರ ಮಧ್ಯೆ ಈ ಹಿಂದಿನ ಪ್ರಕಾಂಡ ಪಂಡಿತರ ಸಾಧನೆ ಮಂಕು ತಿಮ್ಮನ ಕಗ್ಗದ ಕೆಲಸಾಲುಗಳ ನ್ನು ನೆನಪಿಸುತ್ತದೆ.
ಕಡೆಯಲ್ಲಿ “ಕವಿಗಳು ಕನ್ನಡಮ್ಮನ ಕೊರಳಿನ ಲ್ಲಿನ ಕಂಠಿಕೆ ಅಂದರೆ ಕಂಠಿ ಹಾರವಾಗಿ ಶೋಭಿಸುತ್ತಾರೆ ತೀನಂಶ್ರೀಯವರು” ಎಂದು ಹೇಳುತ್ತಾ ಅವರು ಸಾಧಿಸಿದ ಔನ್ಯತ್ಯವನ್ನು ನೆನೆಯುತ್ತಾರೆ.
ಇನ್ನಾರು ಬೆಳೆದಾರು ನಿಮ್ಮ ಎತ್ತರಕೆ
ಕನ್ನಡದ ಕೊರಳಲ್ಲಿ ಶ್ರೀಕಂಠಿಕೆ
ಸರಳ ಶಬ್ದಗಳಲ್ಲಿ ತಮ್ಮ ಸಮಕಾಲೀನ ಕವಿಗಳ ನ್ನು ಹೊಗಳಿ ಬರೆದಿರುವ ಈ ವಿನಮ್ರತೆಗೆ ಅವರಿಗೆ ಅವರೇ ಸಾಟಿ.

ಮುಂದೆ ಜಿಎಸ್ಎಸ್ ಅವರು ಕಾಡಿನ ಕತ್ತಲಲ್ಲಿ ಕವನ ಸಂಗ್ರಹದಲ್ಲಿ ಶ್ರೀಕುವೆಂಪು ಅವರಿಗೆ ಎಂಬ ತಮ್ಮ ಕವನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ತಮ್ಮ ಮನಸ್ಸಿನ ಭಾವನೆಗಳನ್ನು ಹೀಗೆ ಬಿಚ್ಚಿಡುತ್ತಾರೆ. ತಮ್ಮ ಮೇಲಾದ ಕುವೆಂಪು ಅವರ ಪ್ರಭಾವವನ್ನು ಅವರಿಂದ ತಾವು ಗಳಿಸಿದ ಜ್ಞಾನ-ಅನುಭವ ಗಳ ಸಾರವನ್ನು ಮೊಗೆಯು ತ್ತಾರೆ.
ನಿಶ್ಶಬ್ದದಲಿ ನಿಂತು ನೆನೆಯುತ್ತೇನೆ
ನಿಮ್ಮಿಂದ ನಾ ಪಡೆದ ಹೊಸ ಹುಟ್ಟುಗಳ ಗುಟ್ಟುಗಳ
ಎಂದು ಹೇಳುತ್ತಾ ಹೊರಟು,
ನೀವು ಕಲಿಸಿದಿರಿ ನನಗೆ ತಲೆ ಎತ್ತಿ ನಿಲ್ಲುವುದನ್ನು ಕಿರುಕುಳಗಳಿಗೆ ಜಗ್ಗದೆ ನಿರ್ಭಯವಾಗಿ ನಡೆಯುವುದನ್ನು ಸದ್ದಿರದೆ ಬದುಕುವುದನ್ನು

ಕುವೆಂಪು ಅವರ ನಡೆಯೇ ಜೀವನವೇ ತಮಗೆ ಗುರುವಾಗಿ ಮಾರ್ಗದರ್ಶಕವಾಗಿದೆ ಎಂಬುದನ್ನು ಹೇಳುತ್ತಾರೆ. ಅವರಿಂದ ಕಲಿತ ನಿರ್ಭೀತಿ, ಕಿರುಕು ಳಗಳಿಗೆ ಜಗ್ಗದ ಗಟ್ಟಿತನವ ನ್ನು ಸ್ಮರಿಸುತ್ತಾರೆ.
ಎಷ್ಟೊಂದು ಕೀಲಿ ಕೈಗಳನು ದಾನ ಮಾಡಿದ್ದೀರಿ
ವಾತ್ಸಲ್ಯದಿಂದ ನಾನರಿಯದನೇಕ ಬಾಗಿಲುಗಳನ್ನು ತೆರೆದಿದ್ದೀರಿ ನನ್ನೊಳಗೆ
ಕಟ್ಟಿ ಹರಸಿದ್ದೀರಿ ಕನ್ನಡದ ಕಂಕಣವನ್ನು ಕೈಗೆ
ಕನ್ನಡದ ಸೇವೆಗಾಗಿ ಹೋರಾಡು ಎಂಬ ವೀರ ಕಂಕಣವನ್ನು ಕುವೆಂಪು ಅವರು ಜಿಎಸ್ಸೆಸ್ ಅವರಿಗೆ ಕಟ್ಟಿದ್ದಾರೆ ಎಂಬುದನ್ನು ಸಾಂಕೇತಿಕ ವಾಗಿ ಹೇಳುತ್ತಾರೆ .ಇವರಿಂದ ಸ್ಫೂರ್ತಿ ಪಡೆದು ಸಾಹಿತ್ಯ ಸೇವೆಯಲ್ಲಿ ಮುನ್ನಡೆಯುವ ತಮಗೆ ತಮಗೆ ತಿಳಿಯದ ಅದೆಷ್ಟೋ ವಿಷಯಗಳನ್ನು ಅವರಿಂದ ಅರಿತು ಮುಂದಡಿಯಿಟ್ಟಿದ್ದೇನೆ ನನ್ನೊಳಗಿನ ಅರಿವು ಕೆಲವೊಮ್ಮೆ ಬಂಧಿಯಾ ಗಿದ್ದಾಗ ನಿಮ್ಮ ಸ್ಫೂರ್ತಿ ಎಂಬ ಕೀಲಿಕೈಯಿಂದ ಅದನ್ನು ತೆಗೆದು ಮುನ್ನಡೆಸಿದ್ದೀರಿ ಎಂದೇ ಹೇಳುತ್ತಾರೆ.
ಇವರದು ಆಡಂಬರದ, ಡಂಬಾಚಾರದ, ಡೌಲಿ ನ, ಬರೀ ಬಹಿರಾಡಂಬರದ ಮಾತುಗಳಲ್ಲ. ಮನ ದಾಳದಿಂದ ನಿಶ್ಯಬ್ದದಲ್ಲಿ ಅಂತರಂಗದ ಮೌನ ಧ್ಯಾನದಲ್ಲಿ ನಿಮ್ಮನ್ನು ನೆನೆಯುತ್ತೇನೆ ಎಂದು ತಮ್ಮ ಅಸದೃಶ ಅಪರಿಮಿತ ಗೌರವವ ನ್ನು ತೋರುತ್ತಾರೆ.
ಸದ್ದುಗದ್ದಲದ ತುತ್ತೂರಿ ದನಿಗಳಾಚೆಗೆ ನಿಂತು
ನಿಶ್ಶಬ್ದದಲ್ಲಿ ನೆನೆಯುತ್ತೇನೆ
ಗೌರವದಿಂದ
ಕಡೆಯ ಸಾಲುಗಳಲ್ಲಿ
ಆಕಾಶ ಎಂದರೆ ನಮ್ಮ ಮೇಲಿರುವ ಭರವಸೆ ಯ ಚಪ್ಪರ. ಕುವೆಂಪು ಅವರು ಆ ರೀತಿ ನಕ್ಷತ್ರ ಭರಿತವಾದ ಆಕಾಶವಾಗಿ ರಕ್ಷಣೆಯ ಹಂದರ ವಾಗಿ ಬೆಂಬಲದ ಹಚ್ಚಡವಾಗಿ ತನ್ನ ಸುತ್ತ ಆವರಿ ಸಿಕೊಂಡಿದ್ದಾರೆ ಎನ್ನುತ್ತಾರೆ ಕವಿ. ಈ ಸಾಹಿತ್ಯ ಸೇವೆ ಎಂಬ ಬದುಕಿನ ಕಡಲಲ್ಲಿ ತಾವು ಕುಳಿತಿ ರುವ ದೋಣಿಗೆ ಕುವೆಂಪು ಅವರೇ ಕೊಟ್ಟ ಧೈರ್ಯವೇ ಹುಟ್ಟುಗಳು ಎಂದು ಧನ್ಯತಾ ಪೂರ್ವಕವಾಗಿ ಸ್ಮರಿಸಿಕೊಳ್ಳು ತ್ತಾರೆ.

ನಕ್ಷತ್ರ ಖಚಿತ ನಭವಾಗಿ ತಬ್ಬಿಕೊಂಡಿದ್ದೀರಿ ನನ್ನ ಸುತ್ತ
ಪಟ ಬಿಚ್ಚಿ ದೋಣಿಯನ್ನೇರಿ ಕುಳಿತಿದ್ದೇನೆ
ನೀವಿತ್ತ ಹೊಸ ಹುಟ್ಟುಗಳ ಹಾಕುತ್ತ
ಇಲ್ಲಿರುವ ಅರಿವಿನ ಕೀಲಿಕೈ, ಕನ್ನಡದ ಕಂಕಣ, ಸದ್ದುಗದ್ದಲದ ತುತ್ತೂರಿ ದನಿಗಳಾಚೆಗೆ, ನಕ್ಷತ್ರ ಖಚಿತ ನಭ, ದೋಣಿಯ ಹೊಸಹುಟ್ಟು ಈ ಎಲ್ಲಾ ಉಪಮೆಗಳು ಪ್ರತಿಮೆಗಳು ಮನಸ್ಸಿನ ಗೌರವದ ಪ್ರತೀಕವಾಗಿ ಆದರದ ದ್ಯೋತಕವಾ ಗಿ ಧನ್ಯತೆಯ ಭಾವವನ್ನು ಸ್ಫುರಿಸುತ್ತದೆ. ಕವಿ ಯೊಬ್ಬ ತನ್ನ ಸಮಕಾಲೀನ ಕವಿಗೆ ತೋರಿಸುವ ವಿಶ್ವಾಸ ಕ್ಕೆ ನಿದರ್ಶನವಾಗುತ್ತದೆ.

ತಮ್ಮ ಚಕ್ರಗತಿ ಕಾವ್ಯ ಸಂಕಲನದ ಒಂದು ಪುಟ್ಟ ಚುಟುಕಿನಲ್ಲಿ ಬಿ.ಎಂ.ಶ್ರೀಯವರನ್ನು ಹೀಗೆ ವರ್ಣಿಸುತ್ತಾರೆ ಜಿ.ಎಸ್.ಎಸ್ ಅವರು
ನಾಡಿನುದ್ದಕೂ ಕಿರಣವ ಹರಡಿತು ಬೆಳ್ಳೂರಿನ ಬೆಳಗು ಶ್ರೀ ಪ್ರಭೆಯಲಿ ಕಣ್ತೆರೆದವು ಕೋಟಿ ಕಂಠಗಳು ನವೋದಯದ ಮೊಳಗು

ಬಿಎಂಶ್ರೀ ಅವರ ಹೆಸರಿನ ಊರಿನ ಪದಗಳ ನ್ನು ಬೆಳೆಸಿಕೊಳ್ಳುತ್ತಾ ಅವರು ಕನ್ನಡ ನಾಡಿನು ದ್ದಕ್ಕೂ ಬೆಳಗಿಸಿದ ಪ್ರಭೆಯನ್ನು ಕನ್ನಡಕ್ಕಾಗಿ ಕಂಚಿನ ಕಂಠದಲ್ಲಿ ಎತ್ತಿದ ದನಿಯನ್ನು ಸಮರ್ಪಕವಾಗಿ ಪ್ರತಿನಿಧಿಸುತ್ತಾರೆ. ಚಿಕ್ಕದಾದರೂ ಚೊಕ್ಕವಾದ ಈ ಸಾಲುಗಳು ಬಿಎಂಶ್ರೀ ಅವರ ವ್ಯಕ್ತಿತ್ವವನ್ನು ತುಂಬಾ ಸೂಕ್ತವಾಗಿ ಹಾಗೂ ಸಮಂಜಸವಾಗಿ ನಿರೂಪಿ ಸುತ್ತದೆ.

ಸಾಮಗಾನ ಕವನ ಸಂಕಲನಕ್ಕೆ ಮುನ್ನುಡಿಯ ನ್ನು ಬರೆಯುತ್ತ ಕುವೆಂಪು ಅವರು ಹೇಳಿದ್ದೆಂದ ರೆ “ಅತಿಯಾದ ಲೌಕಿಕತೆ, ಪಶುವೂ ನಾಚಿಕೊ- ಳ್ಳಬಹುದಾದ ಸ್ವಾರ್ಥತೆ, ಶ್ರೇಯಸ್ಸನ್ನು ನಿರ್ಲಕ್ಷಿ ಸುವ ಇಂದ್ರಿಯ ಭೋಗಾಸಕ್ತಿ, ತನಗಿಂತ ಉತ್ತಮವಾದುದನ್ನು ಅವಹೇಳನಮಾಡಿ ಕೆಳ ಗೆಳೆಯುವುದರಿಂದಲೆ ಅದರೊಡನೆ ತನ್ನ ಸಮಾ ನತೆಯನ್ನು ಸ್ಥಾಪಿಸುತ್ತೇನೆಂಬ ದಂಭದ ಅಸುರೀ ಚಾಪಲ್ಯ ಇತ್ಯಾದಿ ಲಕ್ಷಣಗಳಿಂದ ನೀಚವಾಗು ವಂತೆ ತೋರುತ್ತಿರುವ ನಮ್ಮ ಸುತ್ತಣ ಜನಜೀವ ನದ ಮಧ್ಯೆ ಯಾವುದಾದ ರೂ ಜೀವ ಆಕಾಶದ ಕಡೆಗೆ ಕಣ್ಣೆತ್ತಿ ನೋಡಿದ ರೆ, ಆದರ್ಶದ ಕಡೆಗೆ ಅರಕೆಯ ದಿಟ್ಟಿಯನ್ನಾ ದರೂ ಬೀರಿದರೆ, ಉತ್ತಮವಾದುದನ್ನು ಆಶಿಸಿದರೆ, ಆರಾಧಿಸಿದ ರೆ, ಅನುಕರಿಸಿದರೆ, ಅನುಸರಿಸಿದರೆ ಅದು ನಿಜ ವಾಗಿಯೂ ಅಭಿನಂದನೀಯ.”

✍️ಸುಜಾತಾ ರವೀಶ್
ಮೈಸೂರು
ತುಂಬ ಸುಂದರವಾಗಿ ಪ್ರಸ್ತುತ ಪಡಿಸಿದ್ದೀರಿ .ನನ್ನ ಬರಹ ಬರೀ ಅಸ್ತಿಪಂಜರ ವಾದರೆ ಅದಕ್ಕೆ ರಕ್ತಮಾಂಸ ಜೀವ ತುಂಬಿದಂತಿದೆ ನಿಮ್ಮ ಜೋಡಣೆ . ಅವಕಾಶಕ್ಕೆ ಹಾಗೂ ಅಂದದ ಸೂಕ್ತ ಪಟಗಳ ಅಲಂಕಾರಕ್ಕೆ ತುಂಬಾ ತುಂಬಾ ಧನ್ಯವಾದಗಳು ರವಿಶಂಕರ್ ಸರ್ .
LikeLiked by 1 person