ಜನದಟ್ಟನೆಯ ಮಧ್ಯದಲೊಂದು
        ವಿಶಾಲವಾದ ಕಡಲು
        ಆ ಸುಂದರ ಕಡಲ ಅಲೆಗಳು ತನ್ನೆಡೆಗೆ
        ನನ್ನನ್ನು ಸೆಳೆಯುತ್ತಿದೆ

        ಕಡಲು ನನ್ನ ನೋವನ್ನೆಲ್ಲ
        ತನ್ನೊಳಗೆ ಎಳೆದುಕೊಂಡು
        ಸಂತೋಷದ  ಅಲೆಗಳನ್ನು ಹೊತ್ತು
        ತರುತ್ತಿರುವುದು

        ತಂಪಾದ ಗಾಳಿ ಮನದ
        ದುಃಖದ ಬಿಸಿಯನ್ನ
        ಅಡಗಿಸಿ ನೆಮ್ಮದಿಯನ್ನು
        ಹೊತ್ತು ತರುವಂತಿದೆ

        ಸುತ್ತಲು ಬಾನೆತ್ತರದ
        ಸುಂದರ  ಕಟ್ಟಡಗಳು
        ತಾ ಬೆಳೆದು ನಿಂತ ಕಥೆಯನ್ನು
        ನನಗೆ ವಿವರಿಸುವಂತಿದೆ

        ಮೋಡದ ಮರೆಯಲ್ಲಿ
        ಸೂರ್ಯನು ಕಣ್ಣಾಮುಚ್ಚಾಲೆ
        ಆಟ ಆಡಿ ಮೆಲ್ಲನೆ ಜಾರಿ ಕಡಲೊಳಗೆ
        ಅಡಗಿ ಮಾಯವಾದಂತಿದೆ

        ಸೂರ್ಯಮಾಯವಾದೊಡನೆ ಕಟ್ಟಡಗಳು
        ಬಣ್ಣ ಬಣ್ಣದ ದೀಪಗಳಿಂದ
        ಅಲಂಕೃತಗೊಂಡು ಮದುವಣಗಿತ್ತಿಯಂತೆ
        ನಾಚಿ ನಿರಾಗುವದು

ನೆಮ್ಮದಿಯ ಅರಸಿ ಬಂದವರಿಗೆ
        ನೆಮ್ಮದಿಯ ನೀಡೋ ಕಡಲ
        ಸುಂದರ ನೆನಪುಗಳನ್ನ ಭದ್ರವಾಗಿ
        ನನ್ನೊಡನೆ ಹೊತ್ತು ತಂದಿದೆ

✍️ಪಲ್ಲವಿ ಶೆಟ್ಟಿ
ಅಂಕೋಲ