ರಂಗ ಸಂಘಟನೆ ಮತ್ತು ಸ್ರಜನಶೀಲತೆ 2020 ಜನೆವರಿ 22 TOIದಿನ ಪತ್ರಿಕೆಯಲ್ಲಿ ಬಂದ ಸುದ್ದಿ “ಸರ್ಕಾರ ಕೋವಿಡ್ ಕಾರಣಗಳಿಗಾಗಿ ಸಾಹಿತ್ಯ ಸಂಭ್ರಮ ಮೂರು ದಿನಗಳ ಕಾರ್ಯಕ್ರಮಕ್ಕೆ ಸಂಘಟಕರು ಅಂದಾಜಿಸಿದ್ದ 30 ಲಕ್ಷ ನೀಡಲು ಆಗುತ್ತಿಲ್ಲ ಅನ್ನುವದಾಗಿತ್ತು. ಆದರೆ ಈ ಹಿಂದೆ ಧಾರವಾಡದಲ್ಲಿ ನಡೆದ ಪ್ರಥಮ ಸಾಹಿತ್ಯ ಸಮ್ಮೇಳನ ಮಾಡಲು ದುಡ್ಡೇ ಇಲ್ಲದಾಗ, ಆಗಂತೂ ಆಗಿನ ಸರ್ಕಾರ ಏನೂ ಒಂದು ಪೈಸಾ ಕೂಡ ಕೊಡದಿರು ವಾಗ ಸಕ್ಕರಿ ಬಾಳಾಚಾರ್ಯ ಅನ್ನುವ ಸಾಹಿತಿ, ನಾಟಕಕಾರ, ಕನ್ನಡ ಭಾಷೆ ಯನ್ನ ಅತೀವ ವಾಗಿ ಪ್ರೀತಿಸುವ ಕೀರ್ತನಕಾರ ರು ಮನೆ ಮನೆ ಬಾಗಿಲು ಬಡಿಯುತ್ತ, ಹಾಡುತ್ತ ತಿರುಗುತ್ತಾ ಧನ ಸಂಗ್ರಹಮಾಡಿ ಸಾಹಿತ್ಯ ಸಮ್ಮೇಳನ ಯಶಸ್ವಿ ಆಗುವಂತೆ ನೋಡಿಕೊಂಡದ್ದು ಈಗ ಮರೆತ ಇತಿಹಾಸ.

ಸಕ್ರಿ ಬಾಳಾಚಾರ್ಯ

ಹಾಗೆಯೇ ಮನೋಹರ ಗ್ರಂಥಮಾಲೆಜಡಭರತರು ತಮ್ಮ ಮೇಲೆ ಎಲ್ಲ ಹಾಕಿಕೊಂಡು ಅವರ ವಿವಿಧ ಉತ್ಸವ ಗಳನ್ನು ಮಾಡಿದ್ದು ಕೂಡಾ ಮರೆಯ ಲಾಗದ ಸಂಗತಿ. ಮೋಹನ್ ಆಳ್ವಾ ಅವರ ನುಡಿಸಿರಿ ಗಳು ಹಾಗೆ ನೀನಾಸಂ ಸಂಸ್ಕೃತಿ ಶಿಬಿರಗಳು ಎಲ್ಲವೂ ಕೂಡಾ ಸಂಘಟಕರ ಪ್ಯಾಶನ್ ಅಥವಾ ಉತ್ಕಟವಾದ ಪ್ರಭಲವಾದ ಮನೋ ಬಲ ಆತ್ಮವಿಶ್ವಾಸಗಳ ಪ್ರತೀಕ. ಆ ಗುಣಗಳು ಇದ್ದ ಸಂಘಟಕರು ಸಾಹಿತಿಗಳು ಈಗ ಎಲ್ಲಿದ್ದಾರೆ?

ಸರ್ಕಾರ ಎಲ್ಲವನ್ನು ಮಾಡಲು ಸಾಧ್ಯವೇ? ಮತ್ತು ಸರ್ಕಾರದಮುಂದೆ ಇರುವ ಆದ್ಯತೆಗಳೇ ನು ಮತ್ತು ಸಾಹಿತ್ಯ, ರಂಗಭೂಮಿ ಸಂಗೀತ ಎಲ್ಲವೂ ಎಷ್ಟನೆಯ ಆದ್ಯತೆಗಳಲ್ಲಿ ಬರುತ್ತವೆ ಅನ್ನುವದು ವಿಚಾರ ಮಾಡುವ ವಿಷಯವೇ. ಸಾರ್ವಜನಿಕ ರಿಂದ ಭಿಕ್ಷೆ ಬೇಡಿ, ಪ್ರಾಯೋಜಕ ರಿಂದ ಧನ ಸಹಾಯ ಪಡೆಯಲು,ಉದ್ದಿಮೆ ಗಳ ಸಾಮಾಜಿಕ ಜವಾಬುದಾರಿಯ ಧನ ಸಂಚಯಮಾಡಿಕೊಳ್ಳುವದು ಬಿಡುವದು ಆಯಾ ಸಂಘಟಕರ ಉತ್ಕಟ ಇಚ್ಛೆ, ಮನೋ ಬಲಗಳನ್ನೇ ಅವಲಂಬಿಸಿರುತ್ತದೆ. ಪ್ರತಿಯೊಂದು ಸಂಘಟನೆಯಲ್ಲಿ ಜಡಭರತರು, ಸಕ್ರಿ ಬಾಳಾಚಾರ್ಯರಂಥವರು ಎಷ್ಟು ಜನ ಇರ್ತಾರೆ?

ಜಡ ಭರತ

ಇನ್ನೂ ಸಾರ್ವಜನಿಕವಾಗಿ ಜನಪ್ರಿಯತೆ ಪಡೆದ ವರು, ಎಲ್ಲ ಪಕ್ಷಗಳ ರಾಜಕಾರಣಿಗಳು ಭೇಟಿ ಯಾಗಲು ಮಾತನಾ ಡಲು, ಸಹಾಯ ಮಾಡುವ ಇಚ್ಛೆ ಇರುವ ಎಷ್ಟು ಜನ ಸಾಹಿತಿ, ರಂಗಭೂಮಿ ಸಂಘಟಕರು ಇರುತ್ತಾರೆ? ಪ್ರತಿಯೊಬ್ಬರಿಗೂ ಅವರ ಅವರವೇ ಆದ ಪೊಲಿಟಿಕಲ್ ಐಡಿಯಾ ಲಾಜಿಗಳು ಇದ್ದು ಕೆಲವರಿಗೆ ಬೇಕು ಕೆಲವರಿಗೆ ಬೇಡಾ ಅನ್ನುವ ಸ್ಥಿತಿಯಲ್ಲಿರುತ್ತಾರೆ ಇಷ್ಟೇ ಇರದೇ ಜಾತಿಯ ಧರ್ಮದ ಮತಾಂಧರ, ಪ್ರಾದೇಶಿಕ ಒಲವು, ಬಲವುಗಳ ಮೇಲೆ ನಿಂತಿರುತ್ತವೆ.

ಈ ಸಂಕೀರ್ಣ ವ್ಯವಸ್ಥೆಯಲ್ಲಿ ಸರ್ಕಾರಗಳನ್ನ ಪಕ್ಷಗಳನ್ನ ರಾಜಕೀಯ ಧುರೀಣರನ್ನು ಹೇಗೆ, ಎಷ್ಟು ನಂಬುವದು?

ಪ್ರತಿ ಸಂಘಟನೆಗೂ ಒಬ್ಬ ಛೇರಿಷ್ಮಮ್ಯಾಟಿಕ್ ವ್ಯಕ್ತಿ, ಪಕ್ಷಾತೀತವಾದ ಜನಪ್ರಿಯತೆ ಪಡೆದ ವ್ಯಕ್ತಿ, ಅವನು ಅಥವಾ ಅವಳು ನಟ, ನಟಿ ಅಥವಾ ಪತ್ರಿಕೋದ್ಯಮದಲ್ಲಿ ಒಳ್ಳೆಯ ಹೆಸರು ಮಾಡಿದ ಅಥವಾ ಚುನಾಯಿತ ಪ್ರತಿನಿಧಿಗಳು ಹೆಸರಾಂತ ಡಾಕ್ಟ್ರು ಗಳು ಇದ್ದರೆ ಅವರಿಗೆ ಆದ್ಯತೆಯ ದಾರಿಗಳು ತೆರೆಯುತ್ತವೆ.

ಅದಕ್ಕಾಗಿ ಪ್ರತಿ ಸಂಘಟನೆಗಳಲ್ಲಿ ಒಬ್ಬ ವ್ಯಕ್ತಿ ಮೇಲಿನ ಗುಣಗಳನ್ನು ಹೊಂದಿದವನೊಬ್ಬ ಇರಬೇಕಾಗುವದು ಅನಿವಾರ್ಯ. ಅಕಸ್ಮಾತ್ ಅವನೊಬ್ಬ ನಟನಾಗಿದ್ದರೆ ಮುಗಿದೆ ಹೋತು. ಅವನು ಕಾಲಕ್ರಮೇಣ ನಟನೆ ಬಿಟ್ಟು ಸಂಘಟ ನೆಗೆ ಬೀಳಬೇಕಾಗುತ್ತ ದೆ ಅನ್ನೋದು ದುರಂತ.

✍️ ಅರವಿಂದ ಕುಲಕರ್ಣಿ
ರಂಗಭೂಮಿ ಚಿಂತಕರು, ಧಾರವಾಡ