ಡಾ.ನವೀನಕುಮಾರ ಅವರ “ಇಂಗಿತ” ಕವನ
ಸಂಕಲನಕ್ಕೆ ಡಾ.ಸರ್ಪ್ ರಾಜ್ ಚಂದ್ರಗುತ್ತಿ ಅವರ ಮುನ್ನುಡಿಯ ಕುಂದಣವಿದೆ. ಕವಯತ್ರಿ ಶಿವಲೀಲಾ ಹುಣಸಗಿ ಅವರ ಬೆನ್ನುಡಿಯ ಚೆಲುವಿನ ಸೊಗಸಿದೆ. ಅಗಸ್ಟ್ ೨೦೨೧ರಲ್ಲಿ ಬೆಳಕು ಕಂಡ ಕೃತಿ. ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ನಾನು ಭಾಗಿಯಾಗಿದ್ದೆ. ಯಾವುದೇ ಒಂದು ಸಾಹಿತ್ಯದ ಕೃತಿ ನನಗಿಷ್ಟ ವಾದರೆ ಹೃದಯದ ನಾಲ್ಕು ಮಾತು ಹೇಳಿ ಕೊಂಡಾಗಲೇ ಸಮಾಧಾನ. ಒಳಗಿನಿಂದ ಬಂದ ಮಾತಿಗೆ ಬಣ್ಣನೆಯ ಬೆಡಗು ಇರಲಾರದು. ಏನೋ ಹೇಳಬೇಕೋ ಅದು ನೇರವಾಗಿದ್ದರೆ ಸಾಕು. ಹಾಗೆ ಹೇಳುವಾಗ ಮುನ್ನುಡಿ .. ಬೆನ್ನುಡಿ ಯಾಗಲಿ ಪ್ರಭಾವ ಬೀರಬಾರದು, ಅದು ನನ್ನ ಜಾಯಮಾನ.
ಪ್ರಸ್ತುತ ಸಂಕಲದಲ್ಲಿ ಎಪ್ಪತ್ತೆಂಟು ಕವನಗಳಿವೆ. ಸೃಜನಶೀಲ ಬರಹಗಾರರ ಮನೋ ಇಂಗಿತವೇ
ಕಾವ್ಯ ಧ್ವನಿ. ಸಾಹಿತ್ಯದ ಇತರ ಪ್ರಕಾರದ ಬರಹ ಗಳಲ್ಲೂ ಕಾವ್ಯಧ್ವನಿಯನ್ನು ಗುರುತಿಸ ಬಹುದಾಗಿದೆ. ಕಾವ್ಯ ಮೀಮಾಂಸೆ ಎಂಬುದು ಕಾವ್ಯ ಮೊದಲಾದವನ್ನು ವಿಮರ್ಶಿಸುವ ಶಾಸ್ತ್ರ. ಅದು ಗಂಭೀರ ಚಿಂತನೆಗೆ ಒಳಪಟ್ಟ ದ್ದು. ಬದುಕಿನ ಕಾವೇ ಕಾವ್ಯ ಸ್ಫುರಣೆಗೆ ಕಾರಣ. ಅನುಭಾವಿಕ ನುಡಿಗಳೇ ಸಾಹಿತ್ಯ ವನ್ನು ಶಕ್ತಿಯುತಗೊಳಿಸುತ್ತವೆ. ಜೀವಂತ ವಿದ್ಯುತ್ ಸ್ಪರ್ಶಕ್ಕೆ ಕಾರಣವಾ ದುದು. ಅಲ್ಲಿ ಪ್ರದರ್ಶನ ಕ್ಕಿಂತ ದರ್ಶನವೇ ಪ್ರಧಾನವಾ ದುದು. ಓದುಗರನ್ನು ತಾದಾತ್ಮ್ಯ ಗೊಳಿಸುವ ಕೃತಿಯೇ ಚಿರಕಾಲ ಬಾಳಬಲ್ಲವು. ಬದುಕು ಯಾವ ಕಾಲಕ್ಕೂ ಒಂದೇ.
ಮನುಷ್ಯ ಸ್ವಭಾವಕ್ಕನುಗುಣವಾದದ್ದು. ಈ ನಿಟ್ಟಿನಲ್ಲಿ “ಇಂಗಿತ” ಸಂಕಲನದಲ್ಲಿಯ ಕವನ ಗಳು ಸತ್ವಯುತವಾಗಿದೆಯೆಂದೇ ನನ್ನ
ಅರಿವಿನ ಅಭಿಪ್ರಾಯ. ಒಟ್ಟರೆ ಇಲ್ಲಿಯ ಕವನ ಗಳ ವಿಹಂಗಮ ನೋಟದಿಂದ ಹೃದ್ಗತವಾದು ದನ್ನು ಸಾದರ ಪಡಿಸಲು ಪ್ರಯತ್ನಿಸಿದ್ದೇನೆ. “ಕಟ್ಟೋಣ ಮತ್ತೆ ಕರುನಾಡು” ಜಾತಿ..ಮತ.. ಪಂಥಗಳಿಂದ ಮತ್ತು ಉಗ್ರತೆ ಮತಾಂಧತೆಗ ಳಿಂದ ನರಳುತ್ತಿರುವ ಚಿತ್ರಣದ ಕವನವಿದು. ಇಂಥ ಅರಿಷ್ಟಗಳಿಂದ ಮುಕ್ತವಾಗುವ ಆಶಯ ಕವಿಯದು. ಪ್ರಕೃತಿಯ ಮೇಲೆ ಮಾನವ ನಡೆಸುತ್ತಿರುವ ಕ್ರೌರ್ಯ ಕಂಡು ಕವಿಹೃದಯ ತಲ್ಲಣಗೊಂಡಿದೆ. “ತಾಯಿ ದೇವರು” ಹೃದಯ ತುಂಬಿಸಿದ ಕವನ. ಅಮ್ಮನ ಎಂಬ ಪದವೇ ರೋಮಾಂಚನ. ಕಾವ್ಯಕ್ಕೆ ಅದುವೇ ಲಾಂಛನ. ಜಡ್ಡು ಕಟ್ಟಿದ ವ್ಯವಸ್ಥೆಯಲ್ಲಿ ಹೊಸ ಬೆಳಕು ಕಾಣುವ ಆಶಯವೇ ಭರವಸೆಯ ಕ್ಷಣಗಳು. ಕಾವ್ಯದ ಅಭಿವ್ಯಕ್ತಿಯೇ ಒಂದು ಸುಂದರವಾದ ರಂಗೋಲಿ.
“ನಿನ್ನ ತುದಿ ಬೆರಳಿನಲಿ… ಜಾರುವ ಹಿಟ್ಟಿನಲಿ.. ಎಳೆಗಳ ಎಳೆದು ಬಂಧವ ಸಂಬಂಧಕ್ಕೆ ಬಂಧಿಸಿ ಬಣ್ಣ ಹಾಕುವೆಯಾ ಒಲವೆ?
ರಂಗೋಲಿ ಕವನದಲ್ಲಿಯ ಸಾಲುಗಳು ಇವು. ಸಂಬಂಧವೇ ಹಾಗೆ.. ಬಂಧಿಸಿ ಒಲವಿನ ಬಣ್ಣ ಹಾಕುವ ಹಾಗೆ. ಇಂಥ ಬಾಳ ಬಣ್ಣ ಅನುಬಂಧ ಕ್ಕೆ ಕಾರಣ. ಕವಿ ಪ್ರಾಸಕ್ಕಾಗಿ.. ಛಂದಸ್ಸಿಗಾಗಿ ಕಾವ್ಯವನ್ನು ಹಿಂಡಿದವರಲ್ಲ. ಅದೊಂದು ಅವರಿಗೆ ಒಲಿದ ಸಹಜ ಪ್ರತಿಕ್ರಿಯೆಯ ಅಭಿವ್ಯಕ್ತಿ ಮಾಧ್ಯಮ. ಕಾವ್ಯಕ್ಕೆ ಕಿರೀಟವಾದ ಅನುಭಾವಿಕ ನುಡಿಗಳ ಪಕ್ವತೆಯ ಸಾಲುಗಳು.”ಕಾಡಬೇಡ ಒಲವಿನ ಗೆಳತಿ”ಯಲ್ಲಿ ಕಡಲಿನಷ್ಟು ಹಂಬಲ ವಿದೆ ನನ್ನೊಳಗೆ …ಎನ್ನುವುದು ಕವಿಯ ಅಂತರಂಗದ ತುಡಿತ.
ಇಲ್ಲಿಯ ಒಟ್ಟಾರೆ ಎಪ್ಪತ್ತೆಂಟು ಕವನಗಳಲ್ಲಿ
ಕವಿಯ ನೂರೆಂಟು ಚಿಂತನೆ ವಿವಿಧ ಪ್ರಾಕಾರ ಗಳಲ್ಲಿ ಆಕಾರ ಪಡೆದಿವೆ. ಕವಿ ಮನದ ಇಂಗಿತ ವ್ಯಕ್ತವಾಗಿದೆ. ಪ್ರಬುದ್ಧವಾದ ಶೈಲಿ.. ಭಾಷೆಯ ಪರಿಶುದ್ಧತೆ…ಕಾವ್ಯದ ಹೃದಯ ಮಿಡಿತ…ಹದವರಿತ “ಇಂಗಿತ” ವ್ಯಕ್ತ ಅನುಭಾವಿಕ ಕನ್ನಡಿ ಯಾಗಿದೆ. ಇಂಗಿ ಹೋಗದ ಪ್ರೀತಿಗೆ ಬಾಳ ಗೆಳತಿ ಯೇ ಕಾರಣವೆನ್ನುತ್ತಾರೆ. ಆ ಗೆಳತಿಯೇ ಬಾಳ ಕೀರ್ತಿ..ಬಾಳ ಸ್ಫೂರ್ತಿ! ಈ ಕವನ ಸಂಕಲನ ಡಾ.ನವೀನಕುಮಾರ ಅವರ ಚೊಚ್ಚಲ ಕೃತಿ ಎಂದೆನಿಸಲಾರದು. ಅನುಭಾವಿಕ ನುಡಿಗಳ ಉತ್ತಮ ಕವನ ಸಂಕಲನವಿದು.“ಕಾಡು ಪಾಡು” ಕವನದಲ್ಲಿ ಕವಿಯೇ ಹೇಳಿಕೊಂಡಿ ದ್ದಾರೆ.
“ಗುರುಬಲವು ಸೋಲಿನ ಅನುಭಾವವು.. ಮಾತ ಪಿತೃಗಳ ಕರ್ಮಫಲವು..ಒಡನಾಟದ ಪುಣ್ಯವು.. ಜೊತೆ ಜೊತೆಗೆ ಜೀವಂತ ಹಾಡು ಪಾಡು ನನ್ನ ಬಾಳಿಗೆ”
ಕಾವ್ಯದ ಜೀವಂತಿಕೆಗೆ ಇಂಥ ಒಡನಾಟದ ಪುಣ್ಯದ ಫಲವೇ ಕಾವ್ಯ ಚೇತನದ ಉಸಿರಾಗಿದೆ. ಡಾ.ನವೀನ ಕುಮಾರ ಸಾಹಿತ್ಯಾಸಕ್ತರು.. ಅಧ್ಯಯನಶೀಲರು.. ಬದುಕಿನ ಅನುಭದ ನೆಲೆಯಲ್ಲಿ ಬದುಕನ್ನು ಕಟ್ಟಿಕೊಂಡವರು. ಇಂಥ ಅಮೂಲ್ಯವಾದ ಸಾಹಿತ್ಯ ಕೃತಿಗಳು ಅವರಿಂದ ರಚನೆಗೊಂಡು ಸಾಹಿತ್ಯ ಸರಸ್ವತಿಯ ಮುಡಿಗೇರಲಿ ಎಂದೇ ನನ್ನ ಶುಭ ಹಾರೈಕೆ.
✍️ಡಿ.ಎಸ್.ನಾಯ್ಕ
ಶಿರಸಿ
ಪುಸ್ತಕ ಪರಿಚಯ ಹಾಗೂ ವಿಮರ್ಶೆ ಸುಂದರವಾಗಿ ಮೂಡಿಬಂದಿದೆ
ಸುಜಾತಾ ರವೀಶ್
LikeLike
ಇಂಗಿತ ಭಾವಾನುವಾದ ಸುಂದರವಾಗಿ ಮೂಡಿ ಬಂದಿದೆ…
LikeLike