ಕಾಡುವದು ವರ್ಷಕೊಮ್ಮೆ
ಅಪ್ಪಂದಿರ ದಿನ-
ದಲ್ಲಷ್ಟೇ ಅಲ್ಲ.ವರ್ಷದ ಪ್ರತಿ-
ದಿನ ಸ್ಮ್ರತಿಪಠಲದಲ್ಲಿ,ಅಪ್ಪ
ಜೀವಂತ;ನೆನಪಾಗುತ್ತಾರೆ……
ಕಾಸಿಲ್ಲದೇ ಕೈಚೆಲ್ಲಿಕುಳಿತ
ನನ್ನನ್ನು,ಕಾಸು ಕೊಡೆಂದು
ಮಗ ಪೀಡಿಸಿದಾಗ…..
ಅಪ್ಪನ ನಿರ್ಭಾವುಕ
ಮುಖ ಮುದ್ರೆ….… .
ದಿನಸಿ ಖಾಲಿಯೇಂದು
ಅಮ್ಮ,ಅಲವತ್ತು ಗೊಂಡಾಗ
ಉಟ್ಟಸಣ್ಣಪಂಚೆ,ತೊಟ್ಟ
ಬನಿಯನ್ನಿನಲೆ ಅಂಗಡಿಗೆ
ಹೋಗುವ ಅಪ್ಪನ ವೇದಾಂ-
ತಿಯ ಮುಗುಳ್ನಗೆ…… .
ಇಳಿವಯಸ್ಸಿನಲ್ಲೂ,ಮೂಢ-
ನಂಬಿಕೆ,ಮಡಿ,ಮೈಲಿಗೆ,
ಕಂದಾಚಾರಗಳನ್ನು
ಟೀಕಿಸುವ,ಧೈರ್ಯ……. .
ಅಪ್ಪನಾಗುವ ಹಂತದ
ಮಕ್ಕಳೊಡನೆ ಕುಳಿತು,
ಗೆಳೆಯರಂತೇ ಹರಟುವ,
ಅಪ್ಪಂದಿರನ್ನು,ಕಂಡಾಗ…… .
ಬಿಡುವಿನ ವೇಳೆಯಲ್ಲಿ,
ಕನ್ನಡಕವೇರಿಸಿ,ಪ್ರೀತಿಯಿಂದ
ಪುಸ್ತಕ ಓದುವ,ಸುಸಂಕ್ರತ
ವ್ರಧ್ಧರನ್ನು ಕಂಡಾಗ……. .
ಮುಗಿಲೆತ್ತರ ಬೆಳೆದು
ಫಲಕೊಡುವ,ಅಪ್ಪ
ನೆಟ್ಟು,ಪೋಷಿಸಿದ,ತೆಂಗು,
ಕಂಗುಗಳು ಕಣ್ತುಂಬಿದಾಗ…
ಇತಿ,ಮಿತಿಯರಿತು ಖರ್ಚು
ಮಾಡುತ್ತಾ,ಇದ್ದುದರಲ್ಲೆ
ಖುಷಿಪಟ್ಟು,ಸಂಬ್ರಮಿಸಿ,
ಬದುಕ ಪ್ರೀತಿಸುವವರನ್ನು
ಕಂಡಾಗ…….
ಅಂಗಳದಲ್ಲಿ ಮೊಮ್ಮಕ್ಕ-
ಳೊಡನೆ ಆಡುವ,ರಾತ್ರಿ
ಕೂರಿಸಿ,ಕತೆಹೇಳುವ,
ಅಜ್ಜಂದಿರನ್ನು ಕಂಡಾಗ…… .
ಅಪ್ಪ,ನೆನಪಾಗುತ್ತಾರೆ…
ನೆನಪಾಗುತ್ತಲೇ ಇರುತ್ತಾರೆ….
ನಾನೀಗ ‘ಅಪ್ಪ’ ನಾಗಿದ್ದಕ್ಕೆ…
ಬಹುಶಃ ಅಜ್ಜ
ನಾನಾಗುವವರೆಗೂ..
ನಾನು ನಾನಗಿಯೇ
. ಇರುವವರೆಗೂ…..!!!
✍️ಅಬ್ಳಿ ಹೆಗಡೆ
ಹೊನ್ನಾವರ
ಸುಂದರ ಭಾವಾಭಿವ್ಯಕ್ತಿಯ ಕವನ ಮನ ಮುಟ್ಟಿತು
ಸುಜಾತಾ ರವೀಶ್
LikeLike