ಸಿದ್ದಿಗಳ ನೀ ಗುರುವೇ
ರೂಢ ನೀನು ಅರಿವೇ
ಗುರುಪಾದಕೆ ನಾ ಶರಣನು
ಬೇಡುವೆ ನಿನ್ನ ಕರುಣೆಯನು
ಭವದ ಬಿಂದು ಮಾತ್ರ ನಾನು
ಬೆಳಕ ಸಿಂಧು ಗಾತ್ರನು ನೀನು
ಗುರು ನೀನು ಸಿದ್ಧಾರೂಢ
ನಿನ್ನರಿಯದ ನಾ ಮೂಢ
ಹರಸುತ ನನ್ನನು ನೋಡ
ಜೀವದಾರಿ ಆಗಿದೆ ನಿಗೂಢ
ಶ್ರೀ ಪಾದ ಸೇವೆ ಕೇಳುವೆನು
ಕಾಲಪ್ರಜ್ಞನಿಗೆ ಹೇಳುವೆನು
ಅಂತರಂಗದ ಗುರು ಎಂದು
ನನ್ನ ಕಾಯೋ ದೈವ ಬಂಧು
ಕೈಯ ಹಿಡಿದು ನಡೆಸೆನ್ನ
ಸುದೈವನು ಗುರುಚೇತನ
ಕೊರಗು ಕರಗಿದ ಚಿಂತನ
ಗುರುನಂಬಿಗೆ ಅನಿಕೇತನ
✍️ಕಾವ್ಯಸುತ
ಷಣ್ಮುಗಂ ವಿವೇಕಾನಂದ