ನಾಡಿನಲ್ಲಿ ಹಲವು ಕಡೆ ವೆಂಕಟರಮಣ ದೇವಾಲಯಗಳು ಕಾಣ ಸಿಗಲಿದ್ದು ಆಂದ್ರಪ್ರ ದೇಶಕ್ಕೆ ಹೊಂದಿಕೊಂಡಿರುವ ಕೋಲಾರ ಹಾಗು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹಲವು ದೇವಾಲ ಯಗಳಿದ್ದು ಅವುಗಳಲ್ಲಿ ಬಹುತೇಕ ಪ್ರಸಿದ್ದ ದೇವಾಲಯಗಳೇ. ಅಂತಹ ಸುಂದರ ಹಾಗು ವಿಶಾಲವಾದ ದೇವಾಲಯವೊಂದು ಚಿಕ್ಕಬಳ್ಳಾ ಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿನ ಆಲಂಬಗಿರಿಯಲ್ಲಿದೆ.
ಇತಿಹಾಸ ಪುಟದಲ್ಲಿ ಸುಮಾರು 11 ಶಾಸನ ಗಳು ಇಲ್ಲಿ ದಾಖಲಾಗಿದ್ದು ಶಾಸನ ಗಳಲ್ಲಿ ಅವಲಂಬ ಗಿರಿ–ಹಾಲಂಬಗಿರಿ ಎಂದು ಉಲ್ಲೇಖ ಗೊಂಡಿದೆ. ಇಲ್ಲಿನ 1330ರ ತಮಿಳು ಶಾಸನದಲ್ಲಿ ಮಹಾ ಮಂಡಲೇಶ್ವರ ತ್ರಿಭುವನ ಮಲ್ಲ ತಿರುವೆಂಗಳ ನಾಥ ದೇವರಿಗೆ ದತ್ತಿ ನೀಡಿದ ಉಲ್ಲೇಖವಿದೆ. ಇನ್ನು 1522ರ ಶಾಸನ ದಲ್ಲಿ ದೊಡ್ಡಜನ್ನಪ್ಪ ನಾಯಕ ದೇವಾಲಯಕ್ಕೆ ಭೂದಾನ ನೀಡಿದ ಉಲ್ಲೇಖವಿದೆ. 1532 ರ ಶಾಸನದಲ್ಲಿ ವಿಜಯನಗರ ಅಚ್ಯುತರಾಯನ ಕಾಲದಲ್ಲಿ ಇಲ್ಲಿನ ಮಾಂಡಲೀಕನಾಗಿದ್ದ ತಿಮ್ಮಪ್ಪ ನಾಯಕ ಗೋಕುಲಾಷ್ಟಾಮಿ ಯಂದು ತಿರುವೆಂಗಳನಾಥನಿಗೆ ದತ್ತಿ ನೀಡಿದ ಉಲ್ಲೇಖ ವಿದೆ. 1685 ರಲ್ಲಿ ಮರಾಠ ದೊರೆ ಸಾಂಬಾಜಿ ಯ ಮಗ ಮಲಕೋಜಿ ದೇವಾಲಯಕ್ಕೆ ದತ್ತಿ ನೀಡಿದ ಉಲ್ಲೇಖವಿದೆ.

ಹಲವು ಕಾಲದಲ್ಲಿ ವಿಸ್ತರಣೆಗೊಂಡ ಈ ದೇವಾ ಲಯ ಗರ್ಭಗುಡಿ, ಅಂತರಾಳ, ನವರಂಗ, ರಂಗಮಂಟಪ, ವಸಂತಮಂಟಪ ಹಾಗು ವಿಶಾಲವಾದ ಪ್ರಾಕಾರವನ್ನು ಹೊಂದಿದ್ದು ಪ್ರವೇಶದ್ವಾರ ಹಾಗು ದೊಡ್ಡ ರಾಜಗೋಪುರ ವನ್ನು ಹೊಂದಿದೆ. ಗರ್ಭಗುಡಿಯಲ್ಲಿ ಶ್ರೀದೇವಿ ಹಾಗು ಭೂದೇವಿ ಸಹಿತನದ ಸುಮಾರು ಐದು ಅಡಿ ಎತ್ತರದ ಶ್ರೀವೆಂಕಟೇಶ್ವರ ಸ್ವಾಮಿಯ ಸುಂದರ ಶಿಲ್ಪವಿದೆ, ಚಕ್ರ, ಶಂಖ, ಕಟಿ ಹಸ್ತ ಹಾಗು ವರದ ಹಸ್ತಧಾರಿಯಾಗಿದ್ದಾನೆ. ಮೂಲ ದೇವರನ್ನು ಕೆಳಭಾಗದಲ್ಲಿ ಇಡಲಾಗಿದ್ದು ನಿರಾಕಾ ರವಾದ ಮೂರು ಶಿಲೆಗಳ ಸ್ವರೂಪ ದಲ್ಲಿದೆ. ಗರ್ಭಗುಡಿಯ ಬಲ ಭಾಗದಲ್ಲಿ ನವನೀತ ಕೃಷ್ಣನ ಶಿಲ್ಪವಿದೆ.

ನವರಂಗದಲ್ಲಿ ನಾಲ್ಕು ಕಂಭಗಳಿದ್ದು ಇಲ್ಲಿನ ಉಬ್ಬು ಶಿಲ್ಪಗಳು ಗಮನ ಸೆಳೆಯುತ್ತದೆ, ಇವುಗ ಳಲ್ಲಿ ಗಣಪತಿ, ವೇಣುಗೋಪಾಲ, ಚನ್ನಕೇಶವ, ಕಾಳಿಂಗಮರ್ಧನ, ಲಕ್ಷ್ಮೀನರ ಸಿಂಹ, ರಾಮ ಲಕ್ಷ್ಮಣ, ಸೇರಿದಂತೆ ಸುಮಾರು 32 ಶಿಲ್ಪಗಳ ಕೆತ್ತನೆ ನೋಡಬಹುದು. ನವರಂಗದ ಬಾಗಿಲು ವಾಡದ ಮೇಲಿನ ಸುಂದರ ಶೇಷ ಶಯನ ಅನಂತಪದ್ಮ ನಾಭನ ಕೆತ್ತನೆ ಗಮನ ಸೆಳೆಯು ತ್ತದೆ.

ರಂಗಮಂಟಪದಲ್ಲಿ ಆಳ್ವಾರ ಶಿಲ್ಪಗಳು ಹಾಗು ಉತ್ಸವ ಮೂರ್ತಿಗಳನ್ನು ಇಡಲಾಗಿದೆ. ಇಲ್ಲಿ ಯೂ ಸುಮಾರು ಆರು ಕಂಭಗಳಿದ್ದಿ ಇಲ್ಲಿನ ಉಬ್ಬು ಶಿಲ್ಪಗಳ ಕೆತ್ತನೆ ಸಹ ಸುಂದರವಾಗಿದೆ. ಇಲ್ಲಿಯೂ ಬಲಿ – ತ್ರಿವಿಕ್ರಮ, ಯೋಗಾನರ ಸಿಂಹ, ಕೃಷ್ಣನ ಹಲವು ಶಿಲ್ಪಗಳು, ರಾಮಾಯ ಣದ ಕಥನಕಗಳು. ಲಕ್ಷ್ಮೀನರಸಿಂಹ, ಲಕ್ಷ್ಮೀ ನಾರಾಯಣ ಸುಂದರವಾಗಿದೆ. ಮುಖಮಂಟಪ ದಲ್ಲಿ ನಂತರ ಕಾಲದ ಸೇರ್ಪಡೆಯಾಗಿದ್ದು ಇಲ್ಲಿನ ಕಂಭಗಳಲ್ಲಿಯೂ ಉಬ್ಬು ಶಿಲ್ಪಗಳಿದ್ದು ಸ್ಥಾನಿಕ ದಶಾವತಾರಗಳ ಕೆತ್ತನೆ ಇದೆ. ದೇವಾಲಯಕ್ಕೆ ಹೊಸದಾದ ಶಿಖರವಿದೆ. ದೇವಾಲಯದ ಆವರಣದಲ್ಲಿ ಶ್ರೀ ಲಕ್ಷ್ಮೀದೇವರಿಗೆ ಪ್ರತ್ಯೇಕ ದೇವಾಲಯವಿದೆ.
ದೇವಾಲಯದ ಮುಂಭಾಗದಲ್ಲಿ ಗರುಡ ಮಂದಿರವಿದ್ದು ಸ್ಥಾನಿಕ ಅಂಜಲಿಬದ್ದ ಸ್ವರೂಪ ದಲ್ಲಿನ ಗರುಡನ ಶಿಲ್ಪವಿದೆ. ದೇವಾಲಯದ ಆವರಣ ದಲ್ಲಿ ಬಲಿಪೀಠ ಹಾಗು ಉಯ್ಯಾಲೆ ಮಂಟಪ ವಿದೆ. ದೇವಾಲಯಕ್ಕೆ ನೂತನವಾಗಿ ದೊಡ್ಡದಾದ ರಾಜಗೋಪುರವನ್ನು ನಿರ್ಮಿಸ ಲಾಗಿದ್ದು ಇಲ್ಲಿನ ಕೆತ್ತನೆಗಳು ಗಮನ ಸೆಳೆಯು ತ್ತದೆ.
ವಿನಾಶದತ್ತ ಸಾಗಿದ್ದ ದೇವಾಲಯವನ್ನು ಕೈವಾರ ದ ಯೋಗಿನಾರಾಯಣ ಮಠದವವು ಜೀರ್ಣೋ ದ್ದಾರ ಮಾಡಿದ್ದಾರೆ. ಇಲ್ಲಿ ಚೈತ್ರಮಾಸದ ರಾಮ ನವಮಿಯ ದಿನದಿಂದ ಆರಂಭವಾಗಿ ಸುಮಾರು ಏಳು ದಿನ ಬ್ರಹ್ಮ ರಥೋತ್ಸವ ನಡೆಯಲಿದೆ. ಆ ಸಮಯದಲ್ಲಿ ಇಲ್ಲಿ ಸುತ್ತ ಮುತ್ತಲಿನ ಹಲವು ಭಕ್ತರು ಸೇರಲಿದ್ದಾರೆ. ಶ್ರಾವಣ ಮಾಸ ಹಾಗು ನವರಾತ್ರಿಯಲ್ಲಿ ಇಲ್ಲಿ ವಿಶೇಷ ಪೂಜೆಗಳು ನಡೆ ಯಲಿದ್ದು ವೈಕುಂಠ ಏಕಾದಶಿಯಂದು ವಿಶೇಷ ಅಲಂಕಾರ ಹಾಗು ಪೂಜೆಗಳು ನಡೆಯಲಿದೆ. ಇನ್ನು ಇಲ್ಲಿ ಕ್ಷೇತ್ರಪಾಲ ಅಂಜನೇಯನ ದೇವಾಲ ಯವಿದೆ.
ತಲುಪುವ ಬಗ್ಗೆ : ಚಿಂತಾಮಣಿ – ಬೆಂಗಳೂರು ದಾರಿಯಲ್ಲಿ ಚಿಂತಾಮಣಿಗೆ ಸುಮಾರು 06 ಕಿ.ಮೀ ದೂರದಲ್ಲಿ ಆಲಂಬಗಿರಿ ತಿರುವಿನಲ್ಲಿ ತಿರುಗಿ ಸುಮಾರು 3 ಕಿ ಮೀ ದೂರದಲ್ಲಿ ಆಲಂಬಗಿರಿ ತಲುಪಬಹುದು. ಇನ್ನು ಕೈವಾರ್ ಕ್ರಾಸ್ ನಿಂದ ಸುಮಾರು 14 ಕಿ ಮೀ ದೂರದ ಲ್ಲಿದೆ.
✍️ಶ್ರೀನಿವಾಸಮೂರ್ತಿ ಎನ್.ಎಸ್.
ಬೆಂಗಳೂರು