ರಂಗ ಸಂಘಟನೆಯ ವಿಷಯದಲ್ಲಿ ಅದು ಆಫ್ ಲೈನ್ ಅಥವಾ ಆನ್ಲೈನ್ ಮಾರ್ಗದಲ್ಲಿ ಯೇ ಇರಲಿ ಪ್ರೇಕ್ಷಕರನ್ನು ಹೇಗೆ ರಂಗಮಂದಿರ ಕ್ಕೆ ಅಥವಾ ಟೆಲಿವಿಷನ್ ಕಂಪ್ಯೂಟರ್ ಮಾನಿಟರ್ ಮುಂದೆ ಅಥವಾ ಅವರ ಅವರ ಮೊಬೈಲ್ ಮುಂದೆ ಪ್ರದರ್ಶನ ನೋಡುವಂತೆ ಮಾಡುವದು ಅನ್ನುವ ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ಕಾಡುತ್ತಿದೆ. ಕೆಲವು ಹಾಸ್ಯ ರಸ ಪ್ರಧಾನವಿದ್ದ, ಕಚಗುಳಿ ಇಡುವ ಲೈಂಗಿಕ ಪ್ರಚೋದನೆಯುಳ್ಳ, ನೃತ್ಯ ಪ್ರದರ್ಶನ, ಸ್ವಾಮಿಗಳ ಹಿತವಚನದ, ನೀತಿ ಪಾಠಗಳ ವಿಡಿಯೋ ಕಾರ್ಯಕ್ರಮಗಳು ಚೆನ್ನಾಗಿ ಓಡುತ್ತಿ ರುವದು ಹೆಚ್ಚುಜನ ನೋಡುತ್ತಿರುವದು ಎಲ್ಲರ ಗಮನಕ್ಕೆ ಬಂದಿರಬಹುದು ಮತ್ತು ಅವರು ಸಹಾ ಅದರ ಒಂದು ಭಾಗವಾಗಿರಲೂ ಬಹುದು. ಹಾಗಾದರೆ ನಾಟಕ ಮತ್ತು ಇತರೆ ಶಿಕ್ಷಣ ಉಪನ್ಯಾಸಗಳಿಗೆ ಯಾಕೆ ಹೆಚ್ಚಿನ ಸಂಖ್ಯೆ ಯಲ್ಲಿ ಜನ ನೋಡುವದಿಲ್ಲ ಅನ್ನುವ ಪ್ರಶ್ನೆ ಮತ್ತೆ ಕಾಡು ವದು. ಅದರಲ್ಲಿ ಕಲಾವಿದರು ಸಹ ಮತ್ತೊಬ್ಬ ಕಲಾವಿದರು ಮಾಡುವ ಕಾರ್ಯಕ್ರಮ ನೋಡುವದಿಲ್ಲ.

ಕಲಾವಿದರು ಹೀಗೇಕೆ ಮಾಡುತ್ತಾರೆ ಅನ್ನುವ ದಕ್ಕೆ ಸರಿಯಾದ ಉತ್ತರ ಸಿಗುವದೇ ಇಲ್ಲ. ಪ್ರಾಯಶಃ ಅವರಿಗೆ:

1.ಹೆಚ್ಚು ಕಲಿಯಬೇಕು ಅಥವಾ ತಿಳಿದುಕೊಳ್ಳ ಬೇಕೆಂಬ ಇಚ್ಛೆ ಇರುವದಿಲ್ಲ.
2.ನನಗೆ ಏನೂ ಕಲಿಯುವದಿಲ್ಲ ಅನ್ನೋ ಭಾವನೆ. 3.ಇದನ್ನು ನೋಡಿದರೆ ಕೇಳಿದರೆ ನನಗೇನು ಸಿಗುತ್ತದೆ?
4.ಎಲ್ಲೋ ಒಂದು ಕಡೆ ಮನದ ಮುಲೆಯಲ್ಲಿ ವ್ರತ್ತಿ ಮತ್ಸರ ಅಡಗಿ ಕುಳಿತುಕೊಂಡಿದ್ದುನ್ನ ಒಪ್ಪಿಕೊಳ್ಳಲು ಮನಸ್ಸು ತಯಾರು ಇರುವದಿಲ್ಲ.
5.ಪ್ರದರ್ಶನ ದ ಸಮಯ ನಮಗೆ ಹೊಂದುವ ದಿಲ್ಲ.


6.ಮನೆಗೆ ಯಾರೋ ಅತಿಥಿಗಳು ಬಂದು ಬಿಟ್ಟರು ಅನ್ನುವ ಪ್ರಸಂಗಗಳು.
7.ನನಗೆ ಪ್ರದರ್ಶನದ ವಿಷಯ ಆಸಕ್ತಿ ಇಲ್ಲ.
8.ಅಂದೇ ನಾನು ಊರಿಗೆ ಹೋಗುವದಿತ್ತು.
9.ಅಂದು ನನಗೆ ಆರಾಮ ಇರಲಿಲ್ಲ.
10.ಆನ್ಲೈನ್ ದಲ್ಲಿ ಯಾವಾಗ ಆದರೂ ನೋಡ ಬಹುದು ಅನ್ನುವ ಭಾವನೆ ಇದ್ದರೂ ಸಹ ನೋಡುವದೇ ಆಗುವದಿಲ್ಲ.


11.ಪ್ರದರ್ಶನ ಸ್ಥಳಕ್ಕೆ ಹೋಗುವದು ಬರುವದು ತೊಂದರೆ ಹಾಗೆ ನನ್ನ ಹತ್ತಿರ ಸ್ಮಾರ್ಟ್ ಫೋನು, ಫೇಸ್ಬುಕ್ ಖಾತೆ ಇಲ್ಲ, ಇನ್ಸ್ಟಾಗ್ರಾಮ್ , ಟೆಲಿಗ್ರಾಮ್, ಟ್ವಿಟರ್ ಗೊತ್ತೇ ಇಲ್ಲ.
12.ನಮಗೆ ಕಾರ್ಯಕ್ರಮ ಇದ್ದುದೇ ಗೊತ್ತಿದ್ದಿದ್ದಿಲ್ಲ
13.ಟೀಕಿಟ್ ಇದ್ದರೆ.. ಉಚಿತ ಇದೆಯಾ, ಜತೆ ಯಾರೂ ಇಲ್ಲ.
14.ನಾನು ನೋಡಲೇ ಬೇಕೆಂಬ ಕಾನೂನು ನಿಯಮ ಇದೆಯಾ?
15.ನನ್ನ ದೈನಂದಿನ ಕಾರ್ಯಕ್ರಮದಲ್ಲಿ ಆದ್ಯತೆ ಇದು ಪಡೆಯುವದಿಲ್ಲ.
16.ನನಗೆ ಉತ್ತಮ ಯಾವದು ಅಂತ ತಿಳಿಯೋ ದಿಲ್ಲ.
17.ನಿಯಮಿತವಾಗಿ ನೋಡಲು ಕೇಳಲು ಆಗುವದಿಲ್ಲ, ಅದಕ್ಕಾಗಿ ಬಿಟ್ಟೆ ಬಿಟ್ಟಿದ್ದೇನೆ.
18.ಬೇರೆ ಬೇರೆ ಆಕರ್ಷಣೆಗಳು ಅದು ಯಾವ ದೂ ಆಗಿರಬಹುದು ಏಕೆಂದರೆ ಮನಸು ಚಂಚಲ
19.ನನಗೆ ಆಶೆ ಇದೆ ಆದ್ರೆ ಆಗ್ತಾಯಿಲ್ಲ ಅಭ್ಯಾಸ ಬಲ ರೂ ಢಿಸಿಕೊಳ್ಲಬೇಕಿದೆ.
20.ಸಮಯವೇ ಸಿಗುವದಿಲ್ಲ ಆ ಕೆಲಸ ಈ ಕೆಲಸ ಅಂತ ಸಮಯ ಹೋದದ್ದು ಗೊತ್ತಾಗು ವದಿಲ್ಲ.

21.ಹೆಚ್ಚಿನ ಕಲಾವಿದರಿಗೆ ಬೌದ್ಧಿಕ ಚಿಂತನೆಯ ಅರಿವು ಇರುವದಿಲ್ಲ ಅವರಿಗೆ ಅವರ ಪಾತ್ರ ಕೆಲಸ ಮಾತ್ರ.
22.ಪ್ರತಿ ಕಲಾವಿದ ಅದು ಯಾವದೇ ಕ್ಷೇತ್ರದಲ್ಲಿ ಇರಲಿ ಅವನದೇ ಆದ ಸಿದ್ಧತೆ ಕಲಿಕೆ ಅನ್ನೋದನ್ನ ಗಂಭೀರವಾಗಿ ತೆಗೆದುಕೊಳ್ಳುವದಿಲ್ಲ.
23.ಸಹಜವಾದ ಆಲಸಿತನ ಕಾರ್ಯಕ್ರಮ ಮಾಡುವವರ ಬಗ್ಗೆ ಏನೇನೋ ಕಾರಣಗಳಿಗಾಗಿ ಪ್ರೀತಿ, ಲವಲವಿಕೆ ಇರುವದಿಲ್ಲ.
24.ತಾಂತ್ರಿಕ ಕಾರಣಗಳು ಅನಾರೋಗ್ಯದ ಕಾರಣಗಳು.

✍️ಅರವಿಂದ ಕುಲಕರ್ಣಿ
ರಂಗಭೂಮಿ ಚಿಂತಕರು,ಧಾರವಾಡ