ಎಂತಹ ಚೆಂದವೋ ಸುಂದರ ಪ್ರಕೃತಿ
ನಿಸರ್ಗದ ಮೇಲಿರಲಿ ಪ್ರೀತಿ

ಜುಳು ಜುಳು ಹರಿಯುವ ಜಲ
ಸುಯಿನೇ ಬೀಸುವ ಗಾಳಿಯು
ಹಕ್ಕಿ ಪಕ್ಷಿಗಳ ಕಲರವ
ಕೇಳುತಿದೇ ಕೋಗಿಲೆಯ ಧ್ವನಿಯು

ವನ್ಯ ಮೃಗಗಳ ರಂಪಾಟ
ಅಳಿಲು ನವಿಲುಗಳ ಚಿನ್ನಾಟ
ಸರಿಸೃಪಗಳ ಚೆಲ್ಲಾಟ
ಕಾಮನಬಿಲ್ಲಿನ ಕಿರು ನೋಟ

ಹಚ್ಚ ಹಸಿರಿನ ಕಾಡು
ನಿತ್ಯ ಉತ್ಸವದ ಬೀಡು
ನಾನಾ ಹೂವುಗಳ ಚೆಲವು
ಸುವಾಸೆನೆಯಲ್ಲಿದೆ ಜೀವವು

ಮಂಜು ಹನಿಗಳ ಇಬ್ಬನಿ
ವರ್ಣಿಸಲಾಗದ ರಮಣಿ
ಹಣ್ಣು ಹಂಪಲಗಳ ರುಚಿಯು
ಚಿಟ್ಟೆ ಚಿತ್ತಾರಗಳ ಸೌಂದರ್ಯವು

ಸೃಷ್ಟಿಯ ಕಣ ಕಣ
ಬಣ್ಣಿಸಲಾಗದ ಹೂರಣ
ಸಾರ್ಥಕವಾಯಿತು ಜೀವನ
ಪರಿಸರ ಉಳಿಸಿ ಬೆಳಸೋನ

ಶ್ರೀಮತಿ ಭಾಗ್ಯಶ್ರೀ ಗ ಹಳ್ಳಿಕೇರಿಮಠ ಸಾ-ಜಂತಲಿ ಶಿರೂರು ತಾ-ಮುಂಡರಗಿ ಜಿ-ಗದಗ