ಉಳಿಸಿರಿ ಬೆಳಸಿರಿ ಪರಿಸರ
ಬದುಕಲು ಬೇಕ ಉಸಿರ

ವಾಯು ಮಾಲಿನ್ಯ ಕಡಿಮೆಯಾಗಲಿ
ಹೊಗೆ ರಹಿತ ಜೀವನ ನಮ್ಮದಾಗಲಿ
ಅತಿಯಾದ ಪ್ಲಾಸ್ಟಿಕ್ ಬಳಕೆ ದೂರವಾಗಲಿ
ಆಕ್ರಮ ಗಣಿಗಾರಿಕೆ ಕೊನೆಗೊಳ್ಳಲಿ

ದಯೆವಿರಲಿ ಸಕಲ ಪ್ರಾಣಿಗಳಲಿ
ಶಬ್ದ ಮಾಲಿನ್ಯ ಅಂತ್ಯವಾಗಲಿ
ಸಾವಯುವ ಕೃಷಿ ಹೆಚ್ಚಾಗಲಿ
ಜನಪದ ಬದುಕು ಮುಂದುವರೆಯಲಿ

ಜ್ಞಾನವು ಸೃಷ್ಟಿಗೆ ಪೂರಕವಾಗಲಿ
ನವಯುಗದ ಕಲೆ ನೆಲೆಯಾಗಲಿ
ಮದ್ಧು ಗುಂಡುಗಳೆಲ್ಲಾ ನಾಶವಾಗಲಿ
ಕೂಡಿ ಉಣ್ಣುವ ಔದಾರ್ಯ ನಮ್ಮದಾಗಲಿ

ಬೀಜದುಂಡಿ ತಯಾರಿಸಿ ಸೂರು ಮಾಡಲಿ
ಪರಿಸರ ಉತ್ಸವಗಳು ಮಾರ್ಧನಿಸಲಿ
ಇದ್ಧಲಿಯೇ ಸ್ವರ್ಗವಿದೆ ಮುಕ್ತಿ ಹೊಂದುವ
ನಿಸರ್ಗದ ರಕ್ಷಣೆಗೆ ಹೋರಾಡುವ

ಎಲ್ಲರು ಗಿಡಗಳ ನೆಡಲು ಬೇಕು
ಪಾಲನೆ ಪೋಷಣೆ ಮಾಡಲೇಬೇಕು
ವಿಕೃತಿಯಾಗದಿರಲಿ ಪರಿಸರ ತೊಡುಗೆ
ಪ್ರಕೃತಿಯೇ ನಮಗೆ ಸುಂದರ ಕೊಡುಗೆ

✍️ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ   ಜನಪದಕಲಾವಿದರು 
ಸಾ-ಜಂತಲಿ ಶಿರೂರು