ರಂಗ ಸಂಘಟನೆ ಮತ್ತು ಸೃಜನಶೀಲತೆಯ ಬಗ್ಗೆ ವಿಚಾರ ಮಾಡುತ್ತ ಕುಳಿತಾಗ ಈಗ ಕೋವಿಡ್19 ರ ಮೂರನೆಯ ಅಲೆ ಒಮಿಕ್ರಾನ ರೂಪದಲ್ಲಿಯೋ ಅಥವಾ ಮತ್ತಾವದೋ ರೂಪದಲ್ಲಿ ನಮ್ಮ ಭಾರತದ ಹಲವು ರಾಜ್ಯಗಳ ಲ್ಲಿ ಒಕ್ಕರಿಸುತ್ತ ಇರುವಾಗ ಹಾಗೂ ಮಾಧ್ಯಮ ದವರ ಮಂತ್ರ ಘೋಷ ಗಳು ಎಗ್ಗಿಲ್ಲದೆ ಸಾಗು ತ್ತಿರುವಾಗ ನಮ್ಮ ರಂಗಭೂಮಿ ಕಲಾವಿದರು, ರಂಗ ಮಂದಿರ ನಡೆಸುವರು ಎಲ್ಲರೂ ಒಂದು ಅನಿಶ್ಚಿತತೆಯ, ಸಾವು ಯಾವ ರೂಪದಲ್ಲಿ ಯಾವಾಗ ಬರುತ್ತದೆ ಅನ್ನೋ ಭಯತುಂಬಿದ ವಾತಾವರ ಣದಲ್ಲಿದ್ದಾಗ, ಏನೂ ಮಾಡಲೂ ತೋಚದ ಸ್ಥಿತಿಯಲ್ಲಿದ್ದಾಗ ರಂಗಭೂಮಿ ನಂಬಿ ಕೊಂಡ ಕಲಾವಿದರು ಸಂಘಟನೆಗಳು ಏನು ಮಾಡ ಬೇಕೆಂದು ಇದ್ದಾಗ ಹೊಳೆದ ಒಂದಿಷ್ಟು ವಿಚಾರ ಮಾಡಬಹುದಾದ ಅಂಶಗಳು:
1.ಪ್ರತಿಯೊಂದು ಸಂಕಟ ಸಮಯ ಒಂದು ಹೊಸ ಅವಕಾಶ ಕಲ್ಪಿಸುತ್ತದೆ ಅನ್ನುವ ಮಾತಿನಲ್ಲಿ ನಂಬಿಕೆ ಇಡುವದು.
2.ಧುರೀಣತ್ವದ ಬೀಜ ಮೊಳಕೆ ಒಡೆದು ಸಸಿ ಆಗುವದು ಸಂಕಟ ಸಮಯದಲ್ಲಿ ಎಲ್ಲ ಧುರೀಣರು ಮಹಾಭಾರತದಿಂದ ಹಿಡಿದು ವರ್ತಮಾನದವರೆಗೆ ಹಲವು ಉದಾಹರಣೆ ನೋಡಬಹುದು.

3.ಲಾಕಡೌನ್ ಸಮಯದಲ್ಲಿ ಅಭಿನಯ ಭಾರತಿ ಅಂತಹ ಸಂಸ್ಥೆ ಹೇಗೆ ಮೇಲೆ ಎದ್ದು ಏನೆಲ್ಲಾ ಹೊಸ ವಿಕ್ರಮ ಸಾಧಿಸತಾ ಇದೆ ಅನ್ನೋದು ಒಂದು ಉದಾಹರಣೆ ಇಲ್ಲಿಯೇ ಸಂಘಟನೆಯ ಸೃಜನಶೀಲತೆ ಹುಟ್ಟುವದು.
4.ಹೊಸತನಾ ಅನ್ನೋದು ಸ್ವಲ್ಪ ಸ್ವಲ್ಪವಾಗಿ ಮೈಗೂಡಿಸುತ್ತ ಅದು ತನ್ನತಾನೆ ಸ್ಥಿರವಾಗತಾ ಮತ್ತೆ ಹೊಸತನಕ್ಕೆ ಮೈಯೊಡ್ಡುವದು ಒಂದು ಸ್ವಾಭಾವಿಕವಾದ ಸಾವಯವ ಬೆಳವಣಿಗೆ.

5.ಜನ ಅಂದರೆ ಪ್ರೇಕ್ಷಕರು ಮನೆಯಲ್ಲಿಯೇ ಕರ್ಫ್ಯೂ ಕಾರಣಕ್ಕಾಗಿ ಮನೆ ಒಳಗೆ ಕೂಡುವ ಪ್ರಸಂಗದ ಸದುಪಯೋಗ ಹೇಗೆ ಪಡೆಯಬ ಹುದು ಅಂತ ವಿಚಾರಮಾಡಿ ಕ್ರಿಯಾಶಾಲಿ ಆಗುವದೇ ಸೃಜನಶೀಲತೆಯ ಒಂದು ಗುಣ. ಈ ರೀತಿ ವಿಚಾರ ಅನುಭವ, ಶಿಕ್ಷಣ ಮತ್ತು ಅಭಿ ವ್ಯಕ್ತಿಯನ್ನು ಮಾಡುವ ಮೂಲ ಪ್ರೇರಣೆ ಮತ್ತು ತುಡಿತ ಮಿಡಿತಗಳನ್ನು ಅವಲಂಬಿಸಿರು ತ್ತದೆ.

6.ಕರ್ಫ್ಯೂ ಬಗ್ಗೆ ಅದು ಮಾಡಬಹುದಾದ ಆವಾಂತರಗಳ ಬಗ್ಗೆ ನಾಟಕ ರಚನೆ, ಆಶು ನಾಟಕ ಉಪನ್ಯಾಸ, ನೃತ್ಯ, ಸಂಗೀತ ಪ್ರಹಸನ ಏನನ್ನಾದರೂ ಮಾಡುವದು ಅದು ಫೆಸ್ಬುಕ್, ಇನ್ಸ್ಟಾಗ್ರಾಮ್ ಟ್ವಿಟರ್ ಏನೇ ಆಗಿರಬಹುದು.

7.ಗೂಗಲ್ ಫಾರ್ಮೇಟ್ನಲ್ಲಿ ರಿಹರ್ಸಲ್ಸ್, ಮಾತುಕತೆ , ಸರ್ವೇಕ್ಷಣ ಯಾವದೇ ದತ್ತಾಂಶ ಕಲೆ ಹಾಕುವ ಕೆಲಸ ಮಾಡಬಹುದು.
8.ಇಂದು ಪ್ರಚಾರಕ್ಕೆ ಬೇಕಾಗುವ ಫೋಟೋ, ಫೋಟೋಶಾಪ್, ವಿಡಿಯೋ ಬಳಕೆ ಏನೆಲ್ಲಾ ಮಾಡಬಹುದು.
9.ಅಂತರಜಾಲದ ಮೂಲಕ ಕ್ರೌಡ್ ಧನ ಸಂಚಯ ಒಳ್ಳೆಯ ರಂಗಭೂಮಿ ಚಟುವಟಿಕೆ ಗಳಿಗಾಗಿ ಮಾಡಬಹುದು.
10.ಆನ್ಲೈನ್ನಲ್ಲಿ ತಾಲೀಮು ಮಾಡುವದು.
11.ಆನಲೈನಿನಲ್ಲಿ ನಾಟಕ ವಾಚನಮತ್ತು ಆಶು ನಾಟಕ ಪ್ರದರ್ಶನ ಸಹ ಮಾಡಬಹುದು.

12.ಓಟಿಟಿ ಫಾರ್ಮದಲ್ಲಿ ನಾಟಕ ನೋಡಲು ಅನುಕೂಲ ಮಾಡಿಕೊಡಬಹುದು.
13. ಬೇರೆ ಬೇರೆ ನಾಟಕಗಳಿಗೆ ರಂಗ ಮಂದಿರ ದಲ್ಲಿ ಮುಂಗಡ ಬುಕ್ ಮಾಡುವ ಪದ್ಧತಿ ಆರಂಭಿಸಬಹುದು.
14.ನಾಟಕ ರಚನೆಯ ಕರಡು ಪ್ರತಿಗಳ ಸಂಗ್ರಹ ಮಾಡಿ ಬೇಕೆನ್ನುವರಿಗೆ ನೀಡುವ ಸೌಲಭ್ಯ ಕಲ್ಪಿಸಬಹುದು.
15.ನಾಟಕ ಉತ್ಸವಗಳನ್ನು ಸಹ ಆನ್ಲೈನ್ನಲ್ಲಿ ಮಾಡಬಹುದಾಗಿದೆ.

✍️ಅರವಿಂದ ಕುಲಕರ್ಣಿ
ರಂಗಭೂಮಿ ಚಿಂತಕರು, ಧಾರವಾಡ