ಗಂಡಸಿಗೆ ಸಮಾಜದಲ್ಲಿ ಬಹು ಪ್ರಧಾನ ಸ್ಥಾನ. ಕುಟುಂಬಕ್ಕೆ ಆತನೇ ಪ್ರಧಾನ. ಅದು ಗಂಡನಿ ರಲಿ, ತಂದೆಯಿರಲಿ, ಮಗನಿರಲಿ, ಸೋದರನಿ ರಲಿ ಇತರೆ ಕುಟುಂಬ ಸದಸ್ಯರು ಅವರು ಅವ ರಿಂದ ಆಶಿಸುವುದು ಬಹಳ. ಭಾರತೀಯ ಸಮಾಜದಲ್ಲಿರಲಿ ಇತರೆ ಸಮಾಜಗಳಲ್ಲೂ ಇದು ನಿಜ. ಕುಟುಂಬದ ದುಡಿಮೆ, ರಕ್ಷಣೆ, ನಾಯಕ ತ್ವದ ಹೊಣೆ ಆತನ ಮೇಲೆ. ದೇವರು ದೈಹಿಕ ಬಲವನ್ನು ಗಂಡಸರಿಗೆ ಹೆಚ್ಚು ಕೊಟ್ಟಿ ದ್ದಾನೆ. ಹಾಗಾಗಿ ಸಮಾಜದಲ್ಲಿನ ಕಷ್ಟಕರ ಕೆಲಸಗಳು ಸಹಜವಾಗಿ  ಆತನ ಮೇಲಿರುತ್ತವೆ.

ಆದರೆ ತನ್ನ ಆರೋಗ್ಯದ ವಿಚಾರಕ್ಕೆ ಬಂದಾಗ ತನ್ನನ್ನು ತಾನು ನೋಡಿಕೊಳ್ಳುವುದರಲ್ಲಿ ಆತ ಅಸಹಾಯಕ. ತಾನು ಗಂಡಸು ಎಂಬ ಕಾರಣ ಕ್ಕೆ ತನ್ನ ಆರೋಗ್ಯದ ಬಗ್ಗೆ ವೈದ್ಯರಲ್ಲಿ  ಹೇಳಿ- ಕೊಳ್ಳುವುದರಲ್ಲಿ ಅವನಿಗೆ ಸಂಕೋಚ. ಮಾತು ಕಡಿಮೆಯಾದ್ದರಿಂದ ಮನದಲ್ಲಿ ಅಡಗಿರುವ ದುಗುಡಗಳನ್ನು ಹೊರಹಾಕುವುದು ಕೂಡ ಕಡಿಮೆ. ಜಗತ್ತಿನ ವಿದ್ಯಮಾನಗಳ ಪ್ರಕಾರ ಗಂಡಸು ಹೆಂಗಸಿಗಿಂತ ಅರ್ಧದಷ್ಟು ಬಾರಿ ಮಾತ್ರ ವೈದ್ಯರನ್ನು ನೋಡುತ್ತಾನೆ. ಆತ್ಮಹತ್ಯೆ ವಿಚಾರ ಬಂದರೆ, ಅದರಲ್ಲೂ ಗಂಡಸರದೇ ಮೇಲುಗೈ!. ಶಾರೀರಿಕವಾಗಿ ಸದೃಢನಾದ ಗಂಡಸಿನಲ್ಲಿ, ವೈದ್ಯರನ್ನು ಕಾಣುವ ಬಗ್ಗೆ ಇರುವ ಸಂಕೋಚ, ಎಲ್ಲಿ ತಮ್ಮ ದುರ್ಬಲತೆ ಯ ವಿಚಾರ ಹೊರ ಬೀಳುವುದೋ ಎಂಬ ಹಿಂಜರಿಕೆ, ಸಮಾಜದಲ್ಲಿ ಹೊರುವ ಹಲವು ಹೊರೆಗಳ ಮಾನಸಿಕ ಒತ್ತಡ, ರೂಢಿಸಿಕೊಳ್ಳು ವ ಅಭ್ಯಾಸ ಗಳು, ಊಟದ ಆಯ್ಕೆ, ವ್ಯಾಯಾಮದ ಕೊರತೆ ಇವೆಲ್ಲದರ ಕಾರಣ ಅವರ ಅಕಾಲಿಕ ಮರಣದ ಸಂಖ್ಯೆ ಏರುತ್ತಿದೆ. ಗಂಡಸರ ಆರೋಗ್ಯದಲ್ಲಿ ಆಗುವ ಬದಲಾವ ಣೆಗಳನ್ನು ಅವರು ಹಾಗೆಯೇ ಮುಚ್ಚಿಟ್ಟು ಕೊಂಡು ಬಿಡುತ್ತಾರೆ. ವೈದ್ಯರಲ್ಲಿ ಬರುವ ವೇಳೆಗೆ ಈ ಖಾಯಿಲೆಗಳು ಉಲ್ಬಣಾವ ಸ್ಥೆಗೆ ಹೋಗಿರು ತ್ತವೆ. ಇದು ಭಾರತೀಯ ಸಮಾಜ ದಲ್ಲಷ್ಟೇ ಅಲ್ಲದೆ, ಪಾಶ್ಚಿಮಾತ್ಯ ಸಮಾಜಗಳ ಲ್ಲೂ ಸಾಬೀತಾಗಿರುವ ವಿಚಾರ!.

ಮೂರರಲ್ಲಿ ಒಂದು ಭಾಗದಷ್ಟು ಗಂಡಸರು, ಆಧುನಿಕ ಮನೋಭಾವ ತೋರಿ ತಮ್ಮ ಹೆಂಡತಿ, ತಾಯಿ, ಸಹೋದರಿ ಅಥವಾ ಗೆಳೆಯರು ಮತ್ತು ಸಹೋದ್ಯೋಗಿಗಳ ಉತ್ತೇಜನದಿಂದ ವೈದ್ಯರನ್ನು ಕಾಣಲು ಬಂದದ್ದನ್ನು ನಿಸ್ಸಂಕೋಚದಿಂದ ಒಪ್ಪಿಕೊಳ್ಳು ತ್ತಾರೆ. ಅಲ್ಪ ಸಂಖ್ಯೆಯ ಗಂಡಸರು ತಮ್ಮ ಆರೋಗ್ಯ ಹಾಳಾಗಲು ಹೆಂಗಸರೇ ಕಾರಣ ಎಂದು ದೂಷಿಸಲೂಬಹುದು! ಆಧ್ಯಯನಗಳ ಪ್ರಕಾರ ಹೆಂಗಸು, ಗಂಡಸಿನ ಆರೋಗ್ಯ ಕಾಪಾ ಡುವಲ್ಲಿ ಪ್ರಧಾನ ಪಾತ್ರ ವಹಿಸುತ್ತಾಳೆ. ಆದು ಮನೆಯ ಶುಚಿಯನ್ನು ಕಾಪಾಡುವಲ್ಲಿ, ಆರೋಗ್ಯಕರ ಅಡುಗೆ ಮಾಡುವಲ್ಲಿ, ಪುರುಷನ ಮಾನಸಿಕ ಮತ್ತು ದೈಹಿಕ ಬದಲಾ ವಣೆಗಳನ್ನು ಗಮನಿಸಿ ವೈದ್ಯರಲ್ಲಿ ಹೋಗಲು ಸಲಹೆ ನೀಡು ವುದರಲ್ಲಿ, ಬದುಕಿನ ಜಂಜಾಟ ಗಳನ್ನು ಮುಕ್ತ ವಾಗಿ ಮಾತಾಡಿ ಹಲವು ಕ್ಲೇಷಗಳನ್ನು ಕಳೆಯು ವಲ್ಲಿ ಇವಳ ಪಾತ್ರ ಮುಖ್ಯ.

ಗಂಡಸರಲ್ಲಿ ಮಾನಸಿಕ ಒತ್ತಡ

ಬದುಕಿನಲ್ಲಿ ಅಲ್ಪ-ಸ್ವಲ್ಪ ಒತ್ತಡಗಳಿದ್ದಲ್ಲಿ, ಅದು ಬದುಕನ್ನು ಒಂದು ಹದದಲ್ಲಿ ನಡೆಸುತ್ತದೆ. ಆತಿಯಾದ ಒತ್ತಡವಿದ್ದಲ್ಲಿ  ಬಲಶಾಲಿಯಾದ ಪುರುಷನೂ ಕೂಡ ಅದಕ್ಕೆ ಬಲಿಯಾಗುತ್ತಾನೆ. ಆ ಕಾರಣ ದೈಹಿಕ ಬಲದ ಯಾವುದೇ ಮಾಪನ ಗಳಿಗೆ ಒಳಗಾಗದೆ, ಸಂಕೋಚಗಳಿ ಲ್ಲದೆ, ವೈದ್ಯರನ್ನು ಅದರಲ್ಲೂ ಮಾನಸಿಕ ತಜ್ಞರನ್ನು ಅಗತ್ಯಕ್ಕೆ ತಕ್ಕಂತೆ ಕಾಣುವುದರಲ್ಲಿ ಜಾಣತನ ವಿದೆ.

ಮಾನಸಿಕ ಸಮಸ್ಯೆಗಳನ್ನು ಗಂಡಸರು ಹೆಂಗಸ ರಂತೆ ನಾಲ್ವರಲ್ಲಿ ಹೇಳಿಕೊಂಡು ಹಗುರಾಗದ ಕಾರಣ, ಅಂತರ್ಮುಖಿಗಳಾಗಿ ಖಿನ್ನತೆಗೆ  ಒಳಗಾಗುತ್ತಾರೆ.

ಮಾನಸಿಕ ಒತ್ತಡದ ತೀವ್ರತೆಗೆ ಒಳಗಾಗುವ ದೇಹದಲ್ಲಿ ಕಾರ್ಟಿಸೋಲ್ ಎಂಬ ರಾಸಾಯ ನಿಕ ದ್ರವ ಹೆಚ್ಚು ಉತ್ಪತ್ತಿಯಾಗುತ್ತದೆ. ಇದು ರೋಗ ನಿಧಾನಕ ಶಕ್ತಿಯನ್ನು ಬಲಹೀನಗೊ ಳಿಸಿ ಮತ್ತಷ್ಟು ಖಾಯಿಲೆಗಳಿಗೆ ದೇಹವನ್ನು ಅಣಿಗೊಳಿಸುತ್ತದೆ. ಹೆಚ್ಚು ಕಾಲ ಅತಿ ಒತ್ತಡಕ್ಕೆ ಒಳಗಾ ದರೆ ಅವರಲ್ಲಿ ಸಕ್ಕರೆ ಖಾಯಿಲೆ, ಪಾರ್ಶ್ವ ವಾಯು, ಖಿನ್ನತೆ ಮತ್ತು ಹೃದಯಕ್ಕೆ ಸಂಭಂದ ಪಟ್ಟ ತೊಂದರೆಗಳು ಕಾಣಿಸಿಕೊಳ್ಳ ಬಹುದು.

ಮುನ್ಸೂಚನೆಗಳು-

ಹೆಚ್ಚುಕಾಲದ ನಿದ್ರಾಹೀನತೆ, ಅತಿಯಾಗಿ ತಿನ್ನು ವುದು, ಕುಡಿಯುವುದು, ಬಳಲಿಕೆ, ಕೆಲಸದಲ್ಲಿ ನಿರಾಸಕ್ತಿ, ಗಮನ ಕೇಂದ್ರೀಕರಿಸುವಲ್ಲಿ ಸೋಲು, ಬದುಕನ್ನು ಕೊನೆಗೊಳಿಸಿಕೊಳ್ಳುವ ಇಚ್ಚೆ, ಸುಮ್ಮ ಸುಮ್ಮನೆ ಅಳುವಂತಾಗುವುದು, ಇತ್ಯಾದಿ ಲಕ್ಷಣಗಳು ಕಾಣಿಸಿಕೊಂಡಲ್ಲಿ ವೈದ್ಯರನ್ನು ಹೋಗಿ ಕಾಣಿರಿ.

ಅದರ ಜೊತೆ, ಮನೆಗೆ ಬಂದಾಗ ಕೆಲಸವನ್ನು ಮರೆಯಿರಿ. ಮಲಗುವ ಮುನ್ನ ತಮ್ಮ ಫೋನು ಗಳನ್ನು, ಕಂಪ್ಯೂಟರುಗಳನ್ನು ಬಂದು ಮಾಡಿ. ಒಂದಿಷ್ಟು ವ್ಯಾಯಾಮ ಬಹಳ ಪರಿಣಾಮ ಕಾರಿ. ನಗೆಬರಿಸುವ ಕಾರ್ಯಕ್ರಮ ಗಳಲ್ಲಿ 20 ನಿಮಿಷ ತೊಡಗಿಕೊಂಡರೆ (ಟಿ,ವಿ.,ಓದು, ಬರಹ) ಇದು ದೇಹದ 40% ಭಾಗ ಕಾರ್ಟಿ ಸೋಲ್ ನ ಸ್ರವಿಸುವಿಕೆಯನ್ನು ಕಡಿಮೆ ಮಾಡಬಲ್ಲದು.

ಊಟ-ತಿಂಡಿ-ವ್ಯಾಯಾಮ

ಹೆಂಗಸು-ಮಕ್ಕಳರ ಜೊತೆ ಗಂಡಸರ ಮೈತೂಕ ಹೆಚ್ಚಾಗುತ್ತಿರುವ ಕಾಲವಿದು. ಒಂದೇ ದಿನದಲ್ಲ ಲ್ಲ ದಿದ್ದರೂ ಗಂಡಸರು ಊಟ ತಿಂಡಿಯ ಬದಲಾವಣೆಗೆ ಬಹಳ ಸುಲಭವಾಗಿ ಒಗ್ಗಿಕೊ ಳ್ಳುತ್ತಾರೆ. ನಂಬುವುದಿಲ್ಲವಾದರೆ, ಆರೋಗ್ಯ ಕರ ವಾದ ತಿನಿಸುಗಳನ್ನು ಪಕ್ಕದ ಮನೆಯ ಸುಂದರಿ ಮಾಡಿ ಕಳಿಸಿದ್ದೆಂದು ಹೇಳಿ ಬಡಿಸಿ ನೋಡಿ!! ಗಂಡಸರು ಹುಡುಕಾಡುವ, ಕೈಯಾಡಿಸುವ ತಿನಿಸುಗಳ ಜಾಗದಲ್ಲಿ ಆರೋಗ್ಯಕರವಾದ ಖಾದ್ಯಗಳನ್ನು ಮಾತ್ರ ಸಿಗುವಂತೆ ಮಾಡಿ!.

ದಿನಕ್ಕೆ30 ನಿಮಿಷ ಗಳ ವ್ಯಾಯಾಮವಿಲ್ಲದಿ ದ್ದರೆ,ಸಕ್ಕರೆ ಖಾಯಿಲೆಯ ಉಪದ್ರವ 112% ಜಾಸ್ತಿಯಾಗಬಲ್ಲದು. ಪಾರ್ಶ್ವವಾಯುವಿನ ಅಪಾಯ 147% ಹೆಚ್ಚಾಗಬಲ್ಲದು. ಅಧ್ಯಯ ನಗಳ ಪ್ರಕಾರ, ಮನೆಯೊಡತಿಗೆ ವ್ಯಾಯಾಮ ದ ಅಭ್ಯಾಸವಿದ್ದಲ್ಲಿ ಅಂತಹ ಮನೆಗಳಲ್ಲಿ 70% ಗಂಡಸರು ತಾವೂ ವ್ಯಾಯಾಮದಲ್ಲಿ ತೊಡಗು ವುದು ಸಾಬೀತಾಗಿದೆ. ಮದುವೆಗೆ ಮುನ್ನ ಚಟು ವಟಿಕೆಯ ಬದುಕನ್ನು ನಡೆಸುವ ಗಂಡಸರು ಮದುವೆಯ ನಂತರ ಸಂಸಾರದ ಜಂಜಾಟ ದಲ್ಲಿ ವ್ಯಾಯಾಮವನ್ನು ಮರೆತು ಬಿಡುವುದು ಬಹಳ. ಅದನ್ನು ಬದುಕಿನಲ್ಲಿ ಮತ್ತೆ ಒಂದು ಗೂಡಿಸಲು ಅವನಿಗೆ ಕುಟುಂಬದ ಎಲ್ಲರ ಸಹಾಯದ ಅಗತ್ಯವಿದೆ.

ಸಿಗರೇಟು/ತಂಬಾಕು ಸೇವನೆ

ತಂಬಾಕು ಸೇವನೆ ನಿಲ್ಲಿಸಿದರೆ 50% ರಷ್ಟು ಅಕಾಲಿಕ ಮರಣಗಳನ್ನು ತಡೆಗಟ್ಟಬಹುದು!!

ಬೀಡಿ, ಸಿಗರೇಟು, ನಶ್ಯಾ, ಎಲೆ-ಅಡಿಕೆಯಲ್ಲಿ ತಂಬಾಕಿನ ಪುಡಿಯ ಬಳಕೆ ನಿಂತರೆ, ಆರೋಗ್ಯ ವೂ ಸುಧಾರಿಸುತ್ತದೆ,‌ ಹಣವೂ ಉಳಿಯು ತ್ತದೆ.

ಗಂಡಸು ಮತ್ತು ಹೆಂಗಸರು ಇಬ್ಬರನ್ನೂ ಗಣನೆಗೆ ತೆಗೆದುಕೊಂಡಾಗ  ಇದು 19% ಮಾತ್ರ!!!

ಇಂತಹ ಚಟಗಳನ್ನು ಕಡಿಮೆ ಮಾಡಲು ಕುಟುಂಬಗಳು,ಸಮಾಜ,ಸರ್ಕಾರ, ಎಲ್ಲೆಡೆ ಯಿಂದ ಒತ್ತಡ ತರುವುದು ಉತ್ತಮ. ಗೆಳೆಯ ರು ಮತ್ತು ಹಿತೈಷಿಗಳಿಗೆ ಇಲ್ಲಿ ಅಗ್ರಸ್ಥಾನ. ಇಂಗ್ಲೆಂಡಿನಂತಹ ಮುಂದುವರೆದ ದೇಶಗಳಲ್ಲಿ ಇದರ ಬಗ್ಗೆ ಜಾಗೃತಿ ಎಷ್ಟು ಬೆಳೆದಿದೆಯೆಂದರೆ, ಈಗ ಕೇವಲ 20% ರಷ್ಟು ಗಂಡಸರು ಮಾತ್ರ ಸಿಗರೇಟು ಸೇದುತ್ತಿದ್ದಾರೆ. ಅದರಲ್ಲಿ ಮತ್ತೆ 60% ಗಂಡಸರು ನಿಲ್ಲಿಸಲು ಬಯಸಿ ಸಹಾಯ ಪಡೆಯುವ ಇಚ್ಚೆಯುಳ್ಳವರಾಗಿದ್ದಾರೆ.

ಮಧ್ಯಪಾನ

ಮಧ್ಯಪಾನ ಗಂಡಸು ಕೈಯಾರೆ ಮಾಡಿಕೊಂಡಿ ರುವ ಮತ್ತೊಂದು ಉರುಳು. ಕುಡಿತದಿಂದ ಸುಮಾರು 60 ಖಾಯಿಲೆಗಳು ಬರಬಲ್ಲವು! ಗಂಡಸರ 65% ಭಾಗ ಅಕಾಲಿಕ ಮರಣಕ್ಕೆ ಮಧ್ಯಪಾನದ ಮದ್ಯಸ್ಥಿಕೆಯಿದೆ!

ಗಂಡಸರ ಕೊಲೆಗೆ ಕಾರಣವಾಗಬಲ್ಲ ಕೊಲೆಗ ಡುಕರನ್ನು ದೂರವಿಡುವುದು ಮುಖ್ಯ. ಅವರ ಹೆಸರುಗಳು, ಲಕ್ಷಣಗಳ ಪರಿಚಯವಿದ್ದು, ಏನು ಮಾಡಬೇಕೆಂಬ ತಿಳಿದಿರುವುದು ಮುಖ್ಯ. ಅಗ್ರ ಸ್ಥಾನದಲ್ಲಿರುವ 06 ಖಾಯಿಲೆ ಗಳ ಬಗ್ಗೆ ತಿಳಿಯೋಣ.

1) ಹೃದಯಾಘಾತ 

ಆರೋಗ್ಯಕರವಾದ ಊಟ, ತೂಕ ಮತ್ತು ವ್ಯಾಯಾಮ ಗಂಡಸರ ಆರೋಗ್ಯದ ಸೂತ್ರ ಗಳು. ಧೂಮಪಾನ, ಮದ್ಯಪಾನಗಳಿಂದ ದೂರವಿರುವುದು, ಧಿಡೀರ್ ಎಂದು ಸಂಭವಿ ಸುವ ಹೃದಯಾಘಾತವನ್ನು ದೂರವಿಡಲು ಇರುವ ರಾಮಬಾಣಗಳು.

ಲಕ್ಷಣಗಳು-ಎದೆನೋವು, ನೋವು ದವಡೆ, ಕುತ್ತಿಗೆ, ಬೆನ್ನು, ಕೈಗಳಿಗೆ ಹರಡುವುದು, ಉಸಿ ರಾಟದಲ್ಲಿ ತೊಂದರೆ, ಎದೆಯ ಮೇಲೆ ಕಲ್ಲು ಚಪ್ಪಡಿ ಬಿದ್ದಂತ ನೋವು, ಒತ್ತಡ, ವಾಂತಿ ಇವುಗಳ ಅನುಭವವಾದಲ್ಲಿ ತತ್-ಕ್ಷಣ ಆಸ್ಪತ್ರೆಗೆ ಹೋಗಿ ತೋರಿಸಿಕೊಳ್ಳಿ. ಹೃದಯಕ್ಕೆ ಸಂಬಂಧಿ ಸಿದ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ.

2) ಶ್ವಾಸಕೋಶದ ಕ್ಯಾನ್ಸರ್ 

ದಿನಕ್ಕೆ 15-20  ಸಿಗರೇಟು ಸೇದುವವರಲ್ಲಿ ಈ ಕ್ಯಾನ್ಸರ್ 26ಪಟ್ಟು ಹೆಚ್ಚು ಕಾಣಿಸಿಕೊಳ್ಳುತ್ತದೆ.

ಲಕ್ಷಣಗಳು-ತಿದಿ ಒತ್ತಿದಂತೆ ಬರುವ ಕೆಮ್ಮು, ದಮ್ಮು, ಉಸಿರಾಟದ ತೊಂದರೆ, ಕಫದಲ್ಲಿ ರಕ್ತ, ಸುಲಭವಾಗಿ ಕೆಮ್ಮು ನೆಗಡಿ ಸುಸ್ತು- ಸೋಲು, ಊಟದಲ್ಲಿ ನಿರಾಸಕ್ತಿ, ತೂಕ ಇಳಿಕೆ ಇದ್ದಲ್ಲಿ ವೈದ್ಯರನ್ನು ಸಂಪರ್ಕಿಸಿ. ಸೂಕ್ತವಾದ ತಪಾಸಣೆಗಳನ್ನು ಮಾಡಿಸಿಕೊಳ್ಳಿ.

3) ಕರುಳಿನ ಕ್ಯಾನ್ಸರ್

ಲಕ್ಷಣಗಳು-ಮಲದಲ್ಲಿ ರಕ್ತ, ಮಲವಿಸರ್ಜನೆ ಯ ಅಭ್ಯಾಸದಲ್ಲಿ ತೀವ್ರ ಬದಲಾವಣೆ, ಮಲ ವಿಸರ್ಜ ನೆಯಲ್ಲಿ ಕಷ್ಟ,ನೋವು, ದೇಹದ ತೂಕ ದಲ್ಲಿ ಇದ್ದಕ್ಕಿದ್ದಂತೆ ಇಳಿಕೆ ಇದ್ದಲ್ಲಿ ವೈದ್ಯರ ಸಲಹೆ ನಿಮಗೆ ಬೇಕು.

ತರಕಾರಿ, ಹಣ್ಣು, ನಾರಿನಂಶ ಕೂಡಿದ ಆಹಾರ ಗಳು ದೇಹಕ್ಕೆ ಉತ್ತಮ. ಇವೆಲ್ಲ ಇರುವ ಆರೋಗ್ಯಕರ ಆಹಾರಗಳನ್ನು ಸೇವಿಸಿದಲ್ಲಿ 12%ರಷ್ಟು ಕರುಳಿನ ಕ್ಯಾನ್ಸರಿನ ಸಾವುಗಳನ್ನು ತಡೆಯಬಹುದು.

೪) ತೀವ್ರಕಾಲದ ಪ್ರತಿರೋಧಕ ಉಸಿರಾಟದ ತೊಂದರೆ 

 ಲಕ್ಷಣಗಳು- ಕೆಮ್ಮು,ಉಸಿರಾಟದ ತೊಂದರೆ, ಪದೇಪದೇ ಕೆಮ್ಮು-ನೆಗಡಿಗಳು, ಸುಸ್ತು–ಸೋಲು ಇತ್ಯಾದಿ.

ಈ ಖಾಯಿಲೆಯ 90% ಕಾರಣ ಧೂಮಪಾನ.

೫) ಅನ್ನನಾಳದ ಕ್ಯಾನ್ಸರ್

66% ಭಾಗದ ಖಾಯಿಲೆಗೆ ಧೂಮಪಾನವೇ ಕಾರಣ.  ಆರೋಗ್ಯಕರವಾದ ಪೋಷಕಾಂಶ ಗಳಿಲ್ಲದ ಊಟವಿಲ್ಲದಿದ್ದಲ್ಲಿ ಅದು 46% ಭಾಗ ಖಾಯಿಲೆಗೆ ನಮ್ಮನ್ನು ಒಡ್ಡಬಲ್ಲದು. ಅತಿಯಾದ ತೂಕ ಇನ್ನೊಂದು ಕಾರಣ.

ಲಕ್ಷಣಗಳು- ನುಂಗಲು ಕಷ್ಟವಾಗುವುದು, ನುಂಗಿದ  ಆಹಾರ ಬಾಯಿಗೆ ಬರುವುದು, ತೂಕ ಇಳಿಕೆ, ದ್ವನಿಯಲ್ಲಿ ಬದಲಾವಣೆ, ಪದೇ ಪದೇ ಸುಮ್ಮ ಸುಮ್ಮನೆ ಕೆಮ್ಮು, ಇನ್ನೂ ಉಲ್ಬಣ ಸ್ಥಿತಿ ಯಲ್ಲಿ ವಾಂತಿ ಮತ್ತು ಕೆಮ್ಮಿನಲ್ಲಿ ರಕ್ತ ಇತ್ಯಾದಿ ಕಾಣಿಸುತ್ತದೆ.

೬) ಜನನಾಂಗ ಬೀಜದ ಕ್ಯಾನ್ಸರ್ 

ಐವತ್ತು ವರ್ಷಕ್ಕಿಂತ ಕಡಿಮೆ ಇರುವ  ಗಂಡಸ ರಲ್ಲಿ ಈ ಖಾಯಿಲೆ ಕಡಿಮೆ. 70 ವರ್ಷದ ನಂತರ ಈ ಖಾಯಿಲೆ ಹೆಚ್ಚು ಕಾಣಿಸಿಕೊಳ್ಳು ತ್ತದೆ. ಈ ಖಾಯಿಲೆಗೆ ಇಂತದ್ದೇ ಎಂಬ ನಿರ್ದಿಷ್ಟ ಕಾರಣ ನೀಡಲು ಸಾಧ್ಯವಾಗಿಲ್ಲ. ಆದರೆ ರೋಗ ಇರುವ ಹತ್ತರಲ್ಲಿ ಒಬ್ಬರು ಅತಿ ತೂಕದ ಗಂಡಸಾ ಗಿರುವ ಅಂಶ ಸಾಬೀತಾಗಿದೆ.

ಲಕ್ಷಣಗಳು- ಮಾಡಬೇಕು ಎನಿಸಿದ ಕೂಡಲೇ ತಡೆಯಲಾಗದ ಉಚ್ಚೆ ಮಾಡುವ ತವಕ, ಪೂರ್ತಿ ಮಾಡಿದ ನಂತರವೂ ಮಾಡಿಲ್ಲದ ಭಾವನೆ, ಮೂತ್ರ ಮಾಡುವಾಗ ತೊಂದರೆ, ನಿಂತು-ಹರಿವ ಮೂತ್ರ ಇತ್ಯಾದಿ ಲಕ್ಷಣಗಳನ್ನು ಮನೆಯ ಹಿರಿಯ ಗಂಡಸರು ಮನೆಯಲ್ಲಿ ಎಲ್ಲರೊಡನೆ ಮಾತಾಡಿ, ವೈದ್ಯರ ಸಲಹೆ ತೆಗೆದುಕೊಳ್ಳುವುದು ಒಳಿತು.

ದೈಹಿಕ ಮತ್ತು ಮಾನಸಿಕ ಖಾಯಿಲೆಗಳು ಬಂದಾಗ ಗಂಡಸರು ಸಂಕೋಚವಿಲ್ಲದೆ ಮತ್ತೆ ಲಿಂಗಭೇದದ ಸಂಕೋಲೆಗೆ ಸಿಗದೆ ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ. ವೈದ್ಯರುಗಳು ತಾವು ಕಾಣುವ ರೋಗಿಯ ಬಗ್ಗೆ ಇನ್ಯಾರಿಗೂ ಮಾಹಿತಿ ನೀಡದೆ, ಅವರ ಬಗ್ಗೆ ಸಮಾಜದ ಮುಂದೆ ಮಾತಾಡದೆ ವೈದ್ಯಕೀಯ ವೃತ್ತಿಯ ನೀತಿ ನಿಯಮಗಳನ್ನು ಅಳವಡಿಸಿಕೊಂಡು ಮಾದರಿ ಯಾಗಿ ನಡೆದುಕೊಂಡು ಉತ್ತೇಜನ ನೀಡುವುದು ಕೂಡ ಉತ್ತಮ. ಗಂಡಸರು ನಾವು ಗಂಡಸರು ಎನ್ನುವ ಸಂಕೋಚದಿಂದ ಮುಕ್ತರಾಗಿ ತಮ್ಮ ಅರೋಗ್ಯದ ಬಗ್ಗೆ ಖಾಯಿಲೆ ಯ ಮೊದಲ ಲಕ್ಷಣಗಳು ಕಂಡಕೂಡಲೇ ವೈದ್ಯರನ್ನು ಕಂಡಲ್ಲಿ, ಬದುಕಿನ ಮಾರ್ಗವನ್ನು ಬದಲಿಸಿಕೊಂಡಲ್ಲಿ ಅಕಾಲಿಕ ಮೃತ್ಯುವನ್ನು ತಡೆಯಬಹುದು. 

✍️ಡಾ.ಪ್ರೇಮಲತಾ ಬಿ.
ದಂತ ವೈದ್ಯರು
ಲಂಡನ್,‌ ಇಂಗ್ಲೆಂಡ್