ಕೋಮಲ ಕೈಯ ಸ್ಪರ್ಶಿಸಿ
ಮೈ-ಮನಗಳನು ಆವರಿಸಿ
ಹೃದಯದಲ್ಲಿ ಭದ್ರವಾಗಿ ನೆಲೆಸಿ
ನೆಲೆಯೂರಿ ನಿಲ್ಲುವೆಯಾ ಪ್ರೇಯಸಿ..? ||೧||
ವನಪುಳ್ಳ ವೈಯ್ಯಾರಿ
ಸಿಡುಕಿನ ನನ್ನ ಸಿಂಗಾರಿ
ಮಲೆನಾಡಿನ ಮಯೂರಿ
ಬರಲಾರೆಯಾ ಮುದ್ದು ಬಂಗಾರಿ..? ||೨||
ಒಂದಾದ ಒಲವೇ
ಚೆಂದುಳ್ಳಿಯ ಚೆಲುವೆ
ನನ್ನೊಲುಮೆಯ ನೈದಿಲೆ
ನನ್ನವಳಾಗಲಾರೆಯಾ ಓ ನವಿಲೆ…? ||೩||
ಬಳುಕಾಡುವ ಬಾಲೆ
ಆ ಸೃಷ್ಟಿಕರ್ತನ ಲೀಲೆ
ಒಂದಾಗೋಣವೆಂದ ಮೇಲೆ ನೀ ಹಾಕಲಾರೆಯಾ ಹೂಮಾಲೆ|೪||
✍️ಶ್ರೀನಿವಾಸ.ಎನ್.ದೇಸಾಯಿ, ಶಿಕ್ಷಕರು