ಸಾಕಿ……
ನರಳುತ್ತಿದ್ದೇನೆ
ಮಾತು ವ್ಯಥೆಯಾಗಿ
ಮೌನ ಕವಿತೆಯಾಗಿದ್ದಕ್ಕೆ

ಸಾಕಿ….
ರೋಧಿಸುತ್ತಿದ್ದೇನೆ
ನಿರ್ದಯದ ಪ್ರೀತಿ
ಬದುಕ ಕಥೆಯಾಗಿದ್ದಕ್ಕೆ

ಸಾಕಿ…
ವ್ಯಥೆ ಪಡುತ್ತಿದ್ದೇನೆ
ಕಣ್ಣಂಚಿನ ಬಿಸಿ ಹನಿ
ವಿರಹಾಗ್ನಿ ಮಹಾಕಾವ್ಯವಾಗಿದ್ದಕ್ಕೆ

ಸಾಕಿ….
ಚಡಪಡಿಸುತ್ತಿದ್ದೇನೆ
ಓದಲಾರದ ಭಾವ
ಕಣ್ಣ ಕಾದಂಬರಿಯಾಗಿದ್ದಕ್ಕೆ

ಸಾಕಿ…..
ತಳಮಳಿಸುತ್ತಿದ್ದೇನೆ
ಒಲವ ಕಥನವು
ಇನ್ನೂ ಅರ್ಥವಾಗದಿರುವುದಕ್ಕೆ

✍️ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ
ಬೆಳಗಾವಿ