ಮೃದ್ವಂಗಿ-ಕ್ರಿಮೀ ಪರಾಕ್ರಮ-ತಕಧಿಮಿ-ತಕಧಿಮಿ ಕಾಣಿರಪ್ಪಾ!
ತಲೆತಿನ್ನೋ ತಲೆಹರಟೆಯ ತಲ್ಲಣಗಳ ಒಂದಿಷ್ಟು ಅರಿಯರಪ್ಪಾ!
…am as good or bad as u r/ನ್ಯಾಯಕ್ಕೆಂದೂ ಕೂರದಿರಿ
…Court+Justice Is Yours!/ಕಾಂಗರೂತನ ಮೆರೆಯದಿರಿ!
ರಾಯರೇ-ನೀರು-ನೀರತಟಗಳೇ ನನ್ನಾಡುಂಬೊಲ-ಮೈದಾನ
ಮರೆತುಬಿಡಿ-ನೀವಿರುವೆಡೆಯಲ್ಲಾ ನಾವಿರುವುದಾಗಲ್ಲ
ತಿಳಿಯಿರಿ-ಆಮೇಲೆ-ನೀವು ಏನೇನಲ್ಲವೋ ಅದೆಲ್ಲಾ ನಾನು
ಹಾಗೇನೇ-ನಾವುಗಳೇನಲ್ಲವೋ ಅವೆಲ್ಲವೂ ನೀವುಗಳು
ನಾನೊಂದು ಜಲಜಂತು-ಇದರಲ್ಲಿ ಅಂಥಾ ನಾಚಿಕೆ ಏನು ಬಂತು
ಹುಚ್ಚೇ-! ನಂ-ಗೆ ನಿಂ ಎಳೆಯರೇ ಹೆಚ್ಚು ನಚ್ಚು-ಅಚ್ಚುಮೆಚ್ಚು
ನೀವುಗಳು ನಂನ-ಎತ್ಕೋಂಡು ಕಾಡೋದೇ ದೊಡ್ಡ ಹುಚ್ಚು
ಈ-ಇಲ್ಲಿ ಏನೇನೋ-ನೀವು+ನಾವು+ಕೋಟಿ ಜೀವರಾಶಿ
ಯಾವ ಲೆಕ್ಕಕ್ಕೂ ಸಿಗದಂತೆ-ಒಂದಲ್ಲ ಒಂದು ತರಹದ-ಸ್ಥಿತಿಗತಿ
ಏನಂತೆ -ಏಕಂತೆ-ಯಾರಿಗಂತೆ ಈ ಜೋಕು-ಯಾರ ವಿನ್ಯಾಸ?
ಖಂಡಿತ-ನನಗಂತೂ ತೋಚದು-ಕಾಲರಾಯನ ಕೆಟ್ಟ ಸಹವಾಸ
ತಿಳಕೊಳ್ಳೀ!-ನಾನು ಅಂದ್ರೆ ನಾನಲ್ಲ-ನೀವೂ ಅಂದರೆ ನೀವಲ್ಲಾ
ಹೂಂಕಾರ ಬಿಡಿ-ಇವೆಲ್ಲವೂ-ಇಲ್ಲಿರೋದೆಲ್ಲವೂ ಕೇವಲ ನಿಮಗಲ್ಲ
ನಾವ್ನೀವುಗಳೇ ಎಲ್ವೂ ಅಲ್ಲ-ಈ ಭುವಿಗೆ-ಜೀವಿಗಳು ಬೇಕೇ ಇಲ್ಲ!
ಈಗ್ಗೆ-ಕೆಲ ದಿನಗಳ ಹಿಂದೆ ನಿಮ್ಮಲ್ಲೊಬ್ಬ ನನ್ನ ಹಿಡಿದೇ ಬಿಟ್ಟ
ನಗ್ತ ನಗ್ತಾ-ಮತ್ತೆ ಅವನ ಗಾಜಿನ ನೀರ ತೊಟ್ಟಿಗೆ ತಳ್ಳಿಯೂ ಬಿಟ್ಟ
ಮನೆಯವರು-ಎಲ್ಲೆಲ್ಲಿಯವರೋ ಬಂದು ಬಂದು ನೋಡೋರು
ಅನೇಕ ಬಾರಿ ಅದೇನೋ ಪುಡಿ(ವಿಷವೇ-ಸಂದೇಹ?) ಎಸೆಯೋರು
ಆನಂತರ ನನ್ನೇ ನೋಡ್ತಾ-ಜಡಮುಂಡೇವು- ನಿಂತುಬಿಡೋರು
ಮೊದಲೇ ಹೇಳಿದೆನಲ್ಲ-ಎಳೇರ ಬಗ್ಗೆ ನನ್ನ ಯಾವ ತಕರಾರಿಲ್ಲ
ನಿಂ-ದೊಡ್ಡೋರಿಗೆ ಮಾತ್ರ ಕನಿಷ್ಠ ನೀತಿ-ಮಾನ ಮರ್ಯಾದೆ ಇಲ್ಲ
ಹೌದು! ನಿಜ! ಆಯಿತು! ಎಲ್ಲರ ತರಹ ನಾನೂ ಒಂದು ಜೀವತಂತು
ಕೇವಲ ಜೀವ ತುಂಬಿದೋರಿಗೇ ಗೊತ್ತು ಇವೆಲ್ಲಾ ಹೇಗೆ ಬಂತು
ಎಲ್ಲೋ-ಯಾರಿಗೋ ನಂ-ಮೂಲಕ ಏನೋ ಹೇಳೊದಕ್ಕಿರಬೇಕು
ನೋಡಿ-ಗೊಣಗಾಟ ಶುರುವಾಯ್ತು! ಸರಿ-ನಿಂ-ಗಳೆಲ್ಲರ ಮೂಲಕವೂ!
ಎಂಥದೋ ಲೆಕ್ಕಾಚಾರ-ಯಾರದೋ ಪರಿಶುದ್ಧ ಇಂಜಿನಿಯರಿಂಗ್
ಏನೋ ಗಣಿತ-ಸಂಕೇತ-ಗೌಪ್ಯತೆಯ ರಂಪ-ಮ್ಯಾಚ್ ಫಿಕ್ಸಿಂಗ್
ನಂ ನಮ್ಮ ಹಾಳತಕ್ಕೆ ಬಾಳು-ಹಾಡುಹಸೆ-ಆಮೇಲೆ-ಡೈಯಿಂಗ್
ಹೌದ್ರೀ! ಎಲ್ಲರಿಗೂ ಬಚ್ಚಿಟ್ಟುಕೊಳೋಕೆ ಒಂದು ಸ್ಪಷ್ಟ ಜಾಗ ಬೇಕ್ರೀ!
ಜೀವದುಳಿತ/ಕನಸೋಕ್ಕೆ/ಒಂಟಿಯಾಗಿ ಅರ್ಥೈಸಕ್ರಿ/ಸುಮ್ನಿರೋಕ್ರೀ!
ನೀವೆಲ್ಲರೂ ಮನೆ-ಮಠ-ಮಾಲೂ-ಗುಡೀ ಗೋಪುರ-ಕಟ್ಟಿಕೊಂಡ್ರಿ
+ಜೊತೆಗೆ ಕಾರುಬಾರಿಗೆ-ಕುಡಿತಕ್ಕೆ-ಹಾದರಕ್ಕೆ-ಪಿತೂರಿಗೆ ಪ್ರತ್ಯೇಕ ಆಡ್ಡೆ
ನಂ-ಕತೆ?-ಮನೆಯೇ ಬಾಗಿಲು-ಬಾಗಿಲೇ ಮನೆ-ಅದಕೆ-ನಿಂ-ಗೆ-ಅಸಡ್ಡೆ
ಇಲ್ಲೂ ನೀವು ಎಡವಟ್ಟೇ!-ಯಾವೂ ನಿಮ್ಮದಲ್ಲಾ ಬಾಹ್ಯ-ಹೊರಗಿಂದು!
ಮನೆ-ಮನ-ನಿರ್ಮಾಣ ಪೂರ್ಣ ನಂ-ದೇ-ಅಸಲೀ ಅಕಶೇರುಕರೇ ನೀವು!
ಮೃದ್ವಂಗಿ-ಅಷ್ಟಪಾದಿ-ಇತ್ಯಾದಿ ನೂರಾರು ಹೆಸರು ನೀವೆ ಇಟ್ಟಿದ್ದು
ಗಾತ್ರ-ಪಾತ್ರ-ಚೇಷ್ಟೆ-ಹುಡುಕಾಟ-ವಿವಿಧೆಡೆ ಆಯಾ ಜಾಗೆಗೆ ತಕ್ಕದ್ದು
ಕಡಲಿನ ಒಡಲೂ ನಮ್ಮಡಿಲೇ/ನೀರಿದ್ದೆಡೆಯಲ್ಲಾ ಖಾತ್ರಿ ನಂ-ಬದುಕು
ಭಯ-ನಾಚಿಕೆ-ಸಂಕೋಚ ಹೆಚ್ಚು ಅಡಗಿಬಿಡುತ್ತೇವೆ-ಚಿಪ್ಪಮನೆಯೊಳ್ಗೆ
ಪಾಚಿ ತಿಂತೀವೀ ಚಬುಕು ಜಾಸ್ತಿ-ಮುಟ್ಟಿದ್ರೆ ಘಾಸಿ-ಮನೆದೇವರಾಣೆ
ನನ್ನ ಹಿಡಿದು ತೊಟ್ಟಿಯಲಿ ಕೂಡಿದ್ದವನ ಒಂದ್ಸಾರಿ ಕಚ್ಚಲೇಬೇಕಿತ್ತು!
ಆದರೇನು-ಆ ಮನೆಯ ಕೊನೇ ಕೂಸು ನನ್ನಿಲ್ಲಿ ತಂದಿಟ್ಟು ಕಾಪಾಡಿತ್ತು!
ರುಚಿ ರುಚಿ ನಮ್ಮನ್ನ ತಿಂದು ಬಿಡ್ತೀರಿ/ಸದಭಿರುಚೀ ನಾಟಕ ಆಡ್ತಿರತೀರಿ
ಅಲ್ಪಾಯುಗಳಾಟ-ಖತಂ-ನಿಂ ತಾಟಿನಲ್ಲಿ/ತಿಂದು ನಂ-ಶಂಖ ಊದ್ತೀರಿ
only Maker knows what we r for-if there is ONE-really
ನಮ್ಮ ತಿಂದು ಬದುಕೋರು-ಕಡೆಗೆ ನಿಂ-ನೇ ನೀವೇ ತಿಂದುಕೋತಿರಾರಿ!
✍️ಶ್ರೇಯಸ್ ಪರಿಚರಣ್