ರಂಗ ಸಂಘಟನೆ ಮತ್ತು ಸ್ರಜನಶೀಲತೆ ಯ ಈ ಅಂಕಣದಲ್ಲಿ ಸಂಘಟನೆಗೆ ಮಹತ್ವದ ಅಂಶ ವೆಂದರೆ ಯಾವ ಯಾವವು ಆಗಬಹುದು ಅಂತ ವಿಚಾರ ಮಾಡ್ತಾ ಇದ್ದಾಗ ಹೊಳೆದ ವಿಚಾರ; ಲಾಯಲ್ಟಿ ಮತ್ತು ರಾಯಲ್ಟಿ ಓದುಗರಿಗಾಗಿ ಪ್ರಾಸಬದ್ಧತೆ ಉಳಿಸಿಕೊಳ್ಳುವ ದಕ್ಕಾಗಿ ಇಂಗ್ಲಿಷ್ ಶಬ್ದ ಇಟ್ಟುಕೊಂಡಿದ್ದೇನೆ.

ಲಾಯಲ್ಟಿ ಅಂದರೆ ಒಂದು ರಂಗ ಸಂಸ್ಥೆ/ ಸಂಘಟನೆಗೆ ಬಹಳ ವರ್ಷಗಳ ಕಾಲ ವಿಧೇಯ, ಮತ್ತು ಅದರ ಉದ್ದೇಶಗಳಿಗನು ಗುಣವಾಗಿ ಯಾವದೇ ಹೆಚ್ಚಿನ ಆಶೆ,ಸ್ಥಾನ, ಮಾನಕ್ಕಾಗಿ ಹಪಾಪಿಸದೆ ಮತ್ತಾವದೇ ಪ್ರಲೋಭಣೆಗಳಿಗೆ ಒಳಗಾಗದೆ ಸಂಸ್ಥೆಗೆ ಅಂಟಿ ಕೊಂಡು ಕ್ರಿಯಾಶೀಲತೆ ತೋರಿಸುತ್ತಿರುವ ಗುಣಧರ್ಮಕ್ಕೆ ಲಾಯಲ್ಟಿ ಅಥವಾ ನಿಷ್ಠೆ ವಿಶ್ವಾಸಗಳಿಂದ ಇರುವದು. ಇನ್ನೂ ರಾಯಲ್ಟಿ ಅಂದರೆ ಗೌರವಧನ ಅಥವಾ ಗುತ್ತಿಗೆ ಹಣ ಅಥವಾ ಸಂಬಳ ಯಾವದೇ ಹೆಸರಿನಿಂದ ಕರೆದರೂ ಅಸ್ಟೆಮಾಡಿದ ಕೆಲಸಕ್ಕೆ ಹೆಚ್ಹೋ ಕಡಿಮೆಯೊ ಸಂಭಾವನೆ ಪಡೆಯುವದು. ಒಂದು ಸಂಸ್ಥೆಯಲ್ಲಿ ಆ ಸಂಸ್ಥೆಗಾಗಿ ಯಾವದೇ ಕೆಲಸ ಮಾಡುತ್ತಿದ್ದರೆ ಅದಕ್ಕೆ ಒಪ್ಪಿಕೊಂಡ ಗೌರವ ಧನ ಪಡೆಯುತ್ತಿ ದ್ದಾಗ ಮತ್ತೊಂದು ಸಂಸ್ಥೆ ಹೆಚ್ಚಿನ ಗೌರವ ಧನದ ಆಶೆಯನ್ನು ತೋರಿಸಿದಾಗ ಮೊದಲಿನ ಸಂಸ್ಥೆಯನ್ನು ಬಿಟ್ಟು ಎರಡನೇ ಸಂಸ್ಥೆಗೆ ಹೋಗುವದು ಲಾಯಲ್ಟಿ ಅನಿಸಿಕೊಳ್ಳುವದಿಲ್ಲ ಅನ್ನುವದಂತೂ ಸತ್ಯ. ಆದರೆ ಈಗ ಪ್ರಶ್ನೆ ಬಂದಿರುವದು ಹೆಚ್ಚಿನ ಹಣಕ್ಕಾಗಿ ಮೊದಲಿನ ಸಂಸ್ಥೆ ಬಿಟ್ಟು ಹೋಗು ವದು. ಎಸ್ಟರ ಮಟ್ಟಿಗೆ ಸರಿ ಅಥವಾ ತಪ್ಪು? ಹೆಚ್ಚು ಗೌರವಧನ ಆಪೇಕ್ಷೆ ಪಟ್ಟು ಬೇರೆ ಕಡೆ ಹೋಗುವದು ಮನುಷ್ಯನ ಅಥವಾ ಕಲಾವಿದ ನ ಗುಣ ಹೇಳುತ್ತದೆಯೇ ಅವನ ವ್ಯಕ್ತಿತ್ವ ಏನನ್ನು ಹೇಳುತ್ತದೆ? ಎಲ್ಲರೂ ಹೀಗೆ ಮಾಡುತ್ತ ಹೋದರೆ ಹೇಗೆ ಸಂಘಟನೆ ಅಥವಾ ಸಂಸ್ಥೆ ಬೆಳೆಯುವದು?

ಇದರ ಇನ್ನೊಂದು ಮುಖ ಕಲಾವಿದ ಹೆಚ್ಚಿನ ಗೌರವ ಧನ ಅಪೇಕ್ಷೆಸಿದರೆ ತಪ್ಪೇನು? ಅವನಿಗೂ ಸಂಸಾರ ಇಲ್ಲವೇ? ವೇತನ ಹೆಚ್ಚಳ ಬೇಡವೆ? ಅವರಿಗೂ ಸಾಮಾಜಿಕ ಸ್ಥಾನಮಾನ ಬೇಡವೇ? ಪ್ರತಿ ಶೋ ಹೆಚ್ಚಿನ ಆದಾಯ ತರುತ್ತಿದ್ದರೆ ಹೇಗೋ ಗೌರವ ಧನದ ಬೇಕು- ಬೇಡಿಕೆ ನಿರ್ವಹಿ ಸಬಹುದು. ಆದಾಯ ಹೆಚ್ಚಿಗೆ ಹೇಗೆ ಮಾಡು ವದು? ಸುಲಭವಾಗಿ ಹೇಳುವ ದಾದರೆ ಎಲ್ಲ ಸಂಭವನೀಯ ವೆಚ್ಚಗಳನ್ನು ಟೀಕಿಟ್ ಮಾರಾಟ ಹೆಚ್ಚಿಸುವದು ಇಲ್ಲಾ ಹೆಚ್ಚು ಹೆಚ್ಚು ಪ್ರಾಯೋಜ ಕತ್ವ ಹುಡುಕುವದು ಇವೆಲ್ಲಕ್ಕೂ ಬೇರೆ ಬೇರೆ ತಂತ್ರೋಪಾಯಗಳ ನ್ನು ಮಾಡುವ ಚಿಂತನೆಯ ಗುಣಮಟ್ಟದ ಧುರಿಣತ್ವ ಬೇಕು. ಆದರೆ ನಮ್ಮ ಮುಂದಿರುವ ಸಮಸ್ಯೆ ಅದಲ್ಲ, ಗೌರವಧನ ಅಥವಾ ರಾಯಲ್ಟಿ ಮತ್ತು ಲಾಯಲ್ಟಿಯದ್ದು ಆಗಿರುತ್ತ ದೆ.ಇವೆರಡರ ಸಂಬಂಧ ಒಂದು ರೀತಿ ಯಿಂದ ಮದುವೆಯ ಬಂಧನಕ್ಕೆ ಒಳಗಾಗಿ ರುವ ಗಂಡ ಹೆಂಡತಿ ಇದ್ದಂತೆ. ಬೇಂದ್ರೆ ಅವರು ಹೇಳಿ ದಂತೆ “ನಾನು ಬಡವ ನೀನು ಬಡವಿ ಒಲವೇ ನಮ್ಮ ಬದುಕು” ಅಂತ ಉಭಯತರರು ಹೇಳು ವಂತೆ ಇರಬೇಕು. ಸಂಘಟನೆ ಮತ್ತು ಕಲಾವಿದ ಇವರುಗಳ ಸಂಬಂಧವೂ ಕೂಡಾ ಹೀಗೆ ಇರ ಬೇಕು. ಒಂದು ಕಾಲದಲ್ಲಿ ನಾಟಕ ಕಂಪನಿಗಳ ಮಾಲೀಕರು ಉತ್ತಮ ನಟಿಯರನ್ನು ನಟರನ್ನು ಯಾವಯಾವದೋ ಆಮಿಷಗಳನ್ನು ತೋರಿಸಿ ಯಾದರೂ ಪರಸ್ಪರ ಸಂಬಂಧಗಳನ್ನು ಇಟ್ಟು ಕೊಳ್ಳಲು ಪ್ರಯತ್ನ ಪಟ್ಟಾಗ ಅಂತಹ ನಾಟಕ ಕಂಪೆನಿಗಳಲ್ಲಿ ನಟ- ನಟಿ ಹೆಚ್ಚು ವರ್ಷ ಕಾಲ ಇರುತ್ತಿದ್ದರು. ರಾಯಲ್ಟಿ,ಲಾಯಲ್ಟಿಗಳ ಸಂಬಂಧ ಈಗ ಹೇಳಿದ ಆಯಾಮಗಳನ್ನು ಮೀರಿ ಇರುತ್ತವೆ.

ಅಂತಹ ವಿಷಯಗಳೆಂದರೆ ನಾಟಕ ಸಂಸ್ಥೆಯಲ್ಲಿಯ:

1.ಒಟ್ಟು ಸ್ನೇಹಮಯವಾತಾವರಣ.
2.ವ್ಯಕ್ತಿಗತ ಸುಖದುಃಖ ಗಳಿಗೆ ಸ್ಪಂದನೆ ಮತ್ತು ಸಹಕಾರ.
3.ಕಲಾವಿದರಿಗೆ ಸಿಗಬೇಕಾದ ಪ್ರೋತ್ಸಾಹ ಮತ್ತು ಆಕರ್ಷಣೆಗಳು.
4.ಆದಾಯವೆಚ್ಚ ನಿರ್ವಹಣೆಗಳಲ್ಲಿ ಪಾದರ್ಶಕತೆ
5. ಪ್ರಚಾರ,ಮಾಧ್ಯಮಗಳಲ್ಲಿ ಪಾತ್ರ.
6.ನಿಗದಿತ ಸಮಯಕ್ಕೆ ಸರಿಯಾದ ಗೌರವ ಧನ/ ಸಂಬಳ ವ್ಯವಸ್ಥೆ.
7.ಅಂತರ್ಗತ ಸ್ಪರ್ಧಾ ಮನೋಭಾವನೆ ಕಡಿಮೆ/ ಹೆಚ್ಚು ಇರುವದು.
8.ಯಾವ ಕಲಾವಿದ/ದೆ ಯಿಂದ ಸಭಾಗ್ರಹ ತುಂಬುವದು.
9.ಕಲಾವಿದರ ಒಳಗಿನ ಸಂಭಂದ, ಆಕರ್ಷಣೆ ಗಳು.
10. ಮತ್ತೊಬ್ಬರಿಗೆ ಹುರುಪು ನೀಡುವ ವಾತಾವರಣ.

ಲಾಯಲ್ಟಿಗೆ ನಾನು ಕೆಲವು ಉದಾಹರಣೆ ನೀಡಲೇಬೇಕಾಗುತ್ತದೆ. ಮಹಾಭಾರತದ ಭೀಷ್ಮ ಕುರು ವಂಶಕ್ಕೆ, ಪಾಂಡವರು ಕೃಷ್ಣಗೆ, ಲಕ್ಷ್ಮಣ ರಾಮನಿಗೆ, ಚಾಣಕ್ಯ ಚಂದ್ರಗುಪ್ತಗೆ, ಕರ್ಣ ದುರ್ಯೋಧನನಿಗೆ, ಇಂದಿನ ಕಾಲದಲ್ಲಿ ಸಾಹಿತಿ ಗಿರೀಶ್ ಕಾರ್ನಾಡ್ ಹಾಗೂ ಕೀರ್ತಿನಾಥ ಕುರ್ತಕೋಟಿ ಮನೋಹರ ಗ್ರಂಥಮಾಲೆಗೆ, ಕಾದಂಬರಿಕಾರ ಎಸ್.ಎಲ್. ಭೈರಪ್ಪ ಹಾಗೂ ನಾರಾಯನಾಚಾರ್ಯ ಸಾಹಿತ್ಯ ಭಂಡಾರಕ್ಕೆ ಹೀಗೆ ಪಟ್ಟಿ ಸೀಮಿತವಾ ದರೂ ಬೆಳೆಯುತ್ತದೆ.

✍️ಅರವಿಂದ ಕುಲಕರ್ಣಿ
ರಂಗಭೂಮಿ ಚಿಂತಕರು,ಧಾರವಾಡ