ಮಕ್ಕಳು ತಮ್ಮ ಹೆಚ್ಚಿನ ಸಮಯವನ್ನು ಶಾಲೆ ಯಲ್ಲಿ ಕಳೆಯುತ್ತಾರೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶಾಲೆಗಳ ಪಾತ್ರ ಮುಖ್ಯ. ಶಾಲೆಗ ಳಲ್ಲಿ ಮಕ್ಕಳಿಗೆ ಆರೋಗ್ಯ ಶಿಕ್ಷಣವನ್ನು ನೀಡು ವಂತದ್ದು ಬಹಳ ಮುಖ್ಯವಾಗಿದೆ “ಆರೋಗ್ಯ” ಎಂಬ ಪದ ಕೇಳಿದೊಡನೆ ಸಾಮಾನ್ಯವಾಗಿ ನಮ್ಮ ಮನಸ್ಸಿನಲ್ಲಿ ಮೂಡುವುದು “ರೋಗ ಗಳಿಂದ ದೂರವಾಗಿರುವುದು”. ಆದರೆ ರೋಗ ರಹಿತ ಸ್ಥಿತಿಯನ್ನು ನಾವು ಸಂಪೂರ್ಣ ಆರೋಗ್ಯವೆಂದು ಹೇಳಲು ಸಾಧ್ಯವಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಆರೋಗ್ಯ ಎಂದರೆ “ದೈಹಿಕ-ಮಾನಸಿಕ-ಸಾಮಾಜಿಕ ಸ್ವಾಸ್ಥ್ಯ ವನ್ನು ಒಳಗೊಂಡಿರುವಂತಹ ಒಂದು ಸ್ಥಿತಿ”. ಹಾಗಾಗಿ ದೈಹಿಕ-ಮಾನಸಿಕ ಹಾಗೂ ಸಾಮಾಜಿಕ ಸ್ವಾಸ್ಥ್ಯವನ್ನು ನಾವು ಆರೋಗ್ಯ ಎಂದು ಪರಿಗಣಿಸುತ್ತೇವೆ. ಮಕ್ಕಳು ಹಾಗೂ ಹದಿಹರೆ ಯದವರಿಗೆ ಮಾನಸಿಕ ಆರೋಗ್ಯ ಶಿಕ್ಷಣವನ್ನು ನೀಡುವಂತದ್ದು ಪ್ರತಿಯೊಂದು ಶಾಲೆಯಲ್ಲಿ ನಡೆಯಬೇಕಾಗಿದೆ.

ಬಹಳಷ್ಟು ಜನರು “ಮಾನಸಿಕ” ಎಂಬ ಪದ ವನ್ನು ಕೇಳಿದೊಡನೆ ಮಾನಸಿಕ ಅಸ್ವಸ್ಥತೆಯ ಒಂದು ಚಿತ್ರವನ್ನು ಹಾಕಿಕೊಂಡು ಬಿಡುತ್ತಾರೆ. ಮಾನಸಿಕ ಆರೋಗ್ಯವು ಕೇವಲ ಮಾನಸಿಕ ಅಸ್ವಸ್ಥತೆಯ ಅನುಪಸ್ಥಿತಿಯಲ್ಲ, ಇದು ಯೋಗ ಕ್ಷೇಮದ ಸ್ಥಿತಿಯನ್ನು ಒಳಗೊಂಡಿರುತ್ತದೆ, ಈ ಶಿಕ್ಷಣದಿಂದ ಒಬ್ಬ ವ್ಯಕ್ತಿಯು ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸಬಹುದು, ಸಾಮಾನ್ಯ ಒತ್ತಡಗಳನ್ನು ನಿಭಾಯಿಸಬಹುದು, ಅವರ ಸ್ನೇಹಿತರ ಸಮುದಾಯದೊಂದಿಗೆ ಸಂಪರ್ಕ ಹೊಂದಬಹುದು, ಆತನ ಅಥವಾ ಆಕೆಯ ನಡವಳಿಕೆಯಲ್ಲಿ ಬದಲಾವಣೆಯನ್ನು ಹೊಂದ ಬಹುದು, ದುಃಖದಿಂದ ದೂರವಾಗ ಬಹುದು ಹಾಗೂ ದುಶ್ಚಟಗಳಿಂದ ಮುಕ್ತಿಯನ್ನು ಪಡೆಯಬಹುದು.

ಅಮೆರಿಕದಲ್ಲಿ ಶೇಕಡಾ 40ರಷ್ಟು ಹದಿಹರೆಯ ದವರು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿ ದ್ದಾರೆ. ಭಾರತದಲ್ಲೂ ಇದರ ಪ್ರಕರಣಗಳು ಹೆಚ್ಚಾಗುತ್ತಿದೆ. ಇದಕ್ಕೆ ಅನೇಕ ಕಾರಣಗಳಿವೆ: ಸಾಮಾಜಿಕ ಜಾಲತಾಣಗಳ ವ್ಯಸನ, ಅತಿಯಾದ ವ್ಯಕ್ತಿಪೂಜೆ, ಸಹವಾಸ ದೋಷ, ಕೌಟುಂಬಿಕ ಸಮಸ್ಯೆಗಳು ಹೀಗೆ ಹತ್ತು ಹಲವು ಕಾರಣಗ ಳಿಂದ ಮಕ್ಕಳು ಹಾಗೂ ಹದಿಹರೆ ಯದವರು ಮಾನಸಿಕ ಸಮಸ್ಯೆಗೆ ಒಳಗಾಗು ತ್ತಿದ್ದಾರೆ.

ಶಾಲೆಗಳಲ್ಲಿ ಮಾನಸಿಕ ಆರೋಗ್ಯ ಕಾರ್ಯಕ್ರ ಮಗಳನ್ನು ಆಗಿಂದಾಗ್ಯೆ ಹಮ್ಮಿಕೊಳ್ಳುವುದ ರಿಂದ ಮಕ್ಕಳ ಮಾನಸಿಕ ಸಮಸ್ಯೆಗಳನ್ನು, ಆರಂಭಿಕ ಚಿನ್ಹೆಗಳನ್ನು, ರೋಗಲಕ್ಷಣಗಳನ್ನು, ನಾವು ಗುರುತಿಸಬಹುದು ಹಾಗೂ ಅದಕ್ಕೆ ಪರಿ ಹಾರವನ್ನು ಸೂಚಿಸಬಹುದು. ಶಾಲೆಗಳಲ್ಲಿ ಶಿಕ್ಷಕರಿಗೂ ಮಾನಸಿಕ ಆರೋಗ್ಯದ ಕಾರ್ಯ- ಕ್ರಮಗಳನ್ನು ಹಾಗೂ ತರಬೇತಿಗಳನ್ನು ಹಮ್ಮಿ ಕೊಳ್ಳುವುದು ಶಿಕ್ಷಕರ ವೃತ್ತಿ ಸಂಬಂಧ ಒತ್ತಡ ವನ್ನು ನಿರ್ವಹಿಸು ವುದನ್ನು ಹಾಗೂ ಮಕ್ಕಳ ಸಮಸ್ಯೆಗಳನ್ನು ಗುರುತಿಸಿ ಸೂಕ್ತ ಪರಿಹಾರ ವನ್ನು ನೀಡುವುದಕ್ಕೂ, ಅಗತ್ಯಬಿದ್ದರೆ ವೃತ್ತಿಪರ ಸಹಾಯವನ್ನು ಪಡೆಯುವುದಕ್ಕೂ ಸಹಕಾರಿ ಯಾಗಲಿದೆ.

ಶಾಲೆಗಳ ರೂಪ ಹಾಗೂ ಅದರ ಕಾರ್ಯಚಟು ವಟಿಕೆಗಳು ಆಗಿಂದಾಗಲೇ ಬದಲಾವಣೆಯನ್ನ ಹೊಂದುತ್ತಿದೆ. ಈಗ ಶಾಲೆಗಳಲ್ಲಿ ಆಪ್ತಸಮಾ ಲೋಚಕರ ಪಾತ್ರವೂ ಹೆಚ್ಚಿನ ಮಹತ್ವವನ್ನು ಪಡೆಯುತ್ತಿದೆ. ಅನೇಕ ಶಾಲೆಗಳು ಮನೋ- ವೈದ್ಯಕೀಯ ಸಮಾಜ ಕಾರ್ಯಕರ್ತರನ್ನು ಅಥವಾ ಮನ:ಶಾಸ್ತ್ರಜ್ಞ ರನ್ನು ನೇಮಕ ಮಾಡಿ ಕೊಳ್ಳುತ್ತಿದೆ. ಅನೇಕ ಮಕ್ಕಳಿಗೆ ಮಾನಸಿಕ ಒತ್ತಡಗಳು ಕುಟುಂಬದ ಸಮಸ್ಯೆಯಿಂದಾಗಿ ಅವರ ಶೈಕ್ಷಣಿಕ ಸಾಧನೆಯ ಲ್ಲಿ ಕುಂಠಿತವಾಗು ತ್ತಿರಬಹುದು, ಓದಿದ್ದು ಮರೆತುಹೋಗುತ್ತಿರ ಬಹುದು ಅಥವಾ ಕಲಿಕಾ ನ್ಯೂನ್ಯತೆಗಳಾದ ಡಿಸ್ಲೆಕ್ಸಿಯಾ, ಡಿಸ್ಗ್ರಾಫಿಯಾ ಅಥವಾ ಡಿಸ್ಕ್ಯಾಲ್ಕ್ಲಿಯಾ ಇರಬಹುದು. ಅನೇಕ ಸಂದರ್ಭಗಳಲ್ಲಿ ಶಿಕ್ಷಕರಿಗೆ ಪಾಠ ಮಾಡುವು ದರ ಜೊತೆಗೆ ಪ್ರತಿಯೊಂದು ಮಗುವಿಗೂ ವೈಯಕ್ತಿಕ ಗಮನ ಕೊಡಲು ಸಾಧ್ಯವಾಗದೇ ಇರಬಹುದು. ಅಂತಹಾ ಸಂದರ್ಭದಲ್ಲಿ ಆಪ್ತ ಸಮಾಲೋಚಕರ ಪಾತ್ರ ಬಹಳ ಮಹತ್ವವನ್ನು ಪಡೆದಿರುತ್ತದೆ. ಮಕ್ಕಳ ಸಮಸ್ಯೆಯನ್ನು ಆಧರಿಸಿ ಸೂಕ್ತ ಮಾರ್ಗದರ್ಶನವನ್ನು ನೀಡುವುದು ಆಪ್ತ ಸಮಾಲೋಚಕರ ಕರ್ತವ್ಯ ವಾಗಿರುತ್ತದೆ.

ಶಾಲೆಗಳಲ್ಲಿ ಮಕ್ಕಳ ಹಾಗೂ ಹದಿಹರೆಯ ದ ವರ ವಿಚಾರಗಳಲ್ಲಿ ಮಾಹಿತಿಯನ್ನು ನೀಡಲು ಹಾಗೂ ಅವರ ಸಮಸ್ಯೆಗಳನ್ನು ಆಲಿಸಲು ಪೂರಕ ವಾತಾವರಣವನ್ನು ಸೃಷ್ಟಿಸುವ ಅಗತ್ಯ ಇದೆ. ದೈಹಿಕ ಮತ್ತು ಮಾನಸಿಕ ಆರೋಗ್ಯದ ನಡುವಿನ ಸಂಬಂಧದ ಬಗ್ಗೆಯೂ ಒತ್ತು ನೀಡ ಬೇಕು. ಮಾನಸಿಕ ಯೋಗಕ್ಷೇಮವನ್ನು ಖಚಿತ ಪಡಿಸಿಕೊಳ್ಳಲು ದೈಹಿಕವಾಗಿ ಸದೃಢವಾಗಿರಲು ವ್ಯಾಯಾಮದ ಬಗ್ಗೆ ಒತ್ತು ನೀಡಬೇಕು. ಹದಿ ಹರೆಯದವರಲ್ಲಿ ಸಾವಧಾನತೆ ತರಬೇತಿಯನ್ನ ಪರಿಚಯಿಸುವುದು, ಅವರಿಗೆ ಒತ್ತಡವನ್ನು ನಿಭಾಯಿಸಲು ಈ ಆರೋಗ್ಯ ಶಿಕ್ಷಣ ತರಬೇತಿ ಗಳು ಸಹಾಯಕವಾಗಿರುತ್ತದೆ. ಮಾನಸಿಕ ಆರೋಗ್ಯ ತರಬೇತಿಗಳು ಅರಿವನ್ನು ಮೂಡಿ ಸುವ ಜೊತೆಗೆ ಆತ್ಮವಿಶ್ವಾಸವನ್ನು ಹೆಚ್ಚಿಸಲೂ ಸಹಾಯಕವಾಗಿರುತ್ತದೆ.

ಮಾನಸಿಕ ಆರೋಗ್ಯ ಸಮಸ್ಯೆಗಳು ದಿನೇದಿನೇ ಹೆಚ್ಚುತ್ತಿದ್ದು, ವಿಶೇಷವಾಗಿ ಮಕ್ಕಳು ಮತ್ತು ಹದಿಹರೆಯದವರಲ್ಲಿ ಹೆಚ್ಚುತ್ತಿರುವುದು ಆತಂಕದ ಸಂಗತಿಯಾಗಿದೆ. ನಮ್ಮ ದೇಶದ ಉತ್ತಮ ಮತ್ತು ಆರೋಗ್ಯಕರ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಆರಂಭಿಕ ಪತ್ತೆ ಮತ್ತು ಸೂಕ್ತ ಮಾರ್ಗದರ್ಶನದಿಂದ ಸಮಸ್ಯೆಗಳನ್ನು ಬಗೆಹರಿಸಿ, ಆರೋಗ್ಯವಾಗಿರಲು ಸಾಧ್ಯವಾಗು ತ್ತದೆ. ಇಂತಹ ಅತ್ಯಗತ್ಯವಾದ ಮಾನಸಿಕ ಆರೋಗ್ಯ ಶಿಕ್ಷಣಗಳನ್ನು ಒದಗಿಸುವುದು ಶಾಲೆಯ ಜವಾಬ್ದಾರಿಯಾಗಿದೆ.
✍️ಯತೀಶ್ ಭಾರದ್ವಾಜ್ ವೈದ್ಯಕೀಯಸಮಾಜ ಕಾರ್ಯಕರ್ತರು ಜೆ.ಎಸ್.ಎಸ್ ವೈದ್ಯಕೀಯ ಕಾಲೇಜು