ಮತ್ತೆ ಮತ್ತೆ ಬರೆಯುತ್ತೇನೆ
ಮನದಿಂಗಿತ ಹೊರಹಾಕಲು
ಸುತ್ತ ಸುಳಿವ ತಂಗಾಳಿ ನೇವರಿಸಲು
ಬತ್ತದ ಆಶಯ ಹೊರಹೊಮ್ಮಲು.

ಸುಪ್ತ ಮನದ ಪ್ರೇರಣೆ
ಗುಪ್ತ ಗಾಮಿನಿಯ ಧಾರುಣೆ
ಕವಿದ ಕತ್ತಲಿಗೂ ರೂಪಕವಾಗಿಸಿ
ನಲಿದ ಯೌವನಕೊಂದಿಷ್ಟು ಹಾತೊರೆದು.

ಗತ್ತಿನ ನಡಿಗೆಯ ಉಪಮೆಯಂತೆ
ಮತ್ತಿನ ಸಮಾಜಕೆ ಸಲಹೆಯಂತೆ
ಮೆತ್ತಗೆ ಕಾಣುವ ಕನಸಂತೆ
ಮತ್ತೆ ಮತ್ತೆ ಬರೆಯುತ್ತೇನೆ.

ಹಚ್ಚ ಹಸಿರ ಒಡಲು
ಪೈರಿನಂಚಿನ ಕವಲು
ಹರಿದು ಹಂಚುವ ಮನಸು
ವ್ಯಕ್ತ ಪಡಿಸುವ ಸೂಚಕ.

✍️ರೇಷ್ಮಾ ಕಂದಕೂರ
ಶಿಕ್ಷಕಿ,ಸಿಂಧನೂರು