ಆಸೆ ದುಃಖದ ಮೂಲವೆಂದೆಯೋ ಬುಧ್ಧ
ನಿನ್ನನೇ ಗೆದ್ದು ಮಾದರಿಯಾದೆಯೋ ಬುಧ್ಧ

ನನ್ನ ನಾ ಅರಿಯಲು ತುಳಿಯೆಂದೆ
ಬಯಕೆ ಹಾದಿ ಮುಳ್ಳಾಗಿದೆಯೋ ಬುಧ್ಧ

ಬಟ್ಟೆ ಬಯಲೆಂದೆ ಬಯಲ ತೊಟ್ಟೆ
ಮೋಹದ ಬಟ್ಟೆ ಸುಡುತಿದೆಯೋ ಬುಧ್ಧ

ಲಯ ತಪ್ಪುವ ಹೆಜ್ಜೆಗಳ ತೊರೆಯೆಂದೆ
ದಿನವು ಕಪ್ಪಿಟ್ಟು ಕರಗುತಿದೆಯೋ ಬುಧ್ಧ

ಬದುಕಿಗೆ ಹುಣ್ಣಿಮೆ ಒಂದೇ ಎಂದೆ
” ಜಾಲಿ” ಕತ್ತಲಷ್ಟೇ ಕುಣಿಯುತ್ತಿದೆಯೋ ಬುಧ್ಧ

 ✍️ವೇಣು ಜಾಲಿಬೆಂಚಿ 
ರಾಯಚೂರು.