ರಾಜ್ಯ ಭೋಜನ ಜಾರಿಸಿಲಿಲ್ಲವನ
ಸುತ ಸತಿ ಪ್ರೀತಿ ಕಾಡಿಸಲಿಲ್ಲವನ
ಮಿತಿ ನೀತಿ ಪ್ರೀತಿಗೆ ಭಾಷ್ಯವಾದನು
ಆಸೆದೋಸೆಯ ತೂತು ಮುಚ್ಚಿದನು ॥೧॥
ಎದ್ದು ಬಿದ್ದು ಕದ್ದು ಹೋದವಲ್ಲ
ಬುದ್ಧಿ ಗೆದ್ದು ಗದ್ದುಗೆ ಏರಿಲಿಲ್ಲ
ಜೀವ ಜೀವಿಗೂ ಜೀವವಾದ ನಲ್ಲ
ಎಲ್ಲ ಬಲ್ಲ ಇಲ್ಲದಂತೆ ಎಲ್ಲ ಸೊಲ್ಲ ॥೨॥
ಬುದ್ಧ ಇದ್ಧ ಸದ್ದು ಮೀರಿದ್ಧ
ಜ್ಞಾನ ಪ್ರಾಣ ತಾನೆ ತಾನಾಗಿದ್ಧ
ತನು ಮನ ನಾದಿ ನಾಕವಾಗಿದ್ದ
ಅಂವ ಇಂವ ಭೇದ ಛಧಿಸಿದ್ಧ ॥೩॥
ದಯೆ ಹೃದಯ ತುಂಬಿ ಸಾಧು
ಮಾತು ಮಾತು ಪ್ರೀತಿ ನಾದ
ಗೋತ್ರ ಪಾತ್ರವಿಲ್ಲದ ನೇತ್ರ ಶುದ್ಧ
ಧರ್ಮ ಕರ್ಮಕೆ ಮರ್ಮವಾದ॥೪॥
ಬುದ್ಧನ ಒಂದಂಶ ಹಿಡಿದು ಎಳೆ
ಪಡೆ ಮುಖ ತುಂಬ ಜೀವ ಕಳೆ
ಅಜ್ಞಾನ ಕೊಳೆಯ ತಗಿದು ಬೆಳೆ
ಚೆಂದ ಬುದ್ಧ ಇದ್ದರೆ ನಮ್ಮೋಳ ॥೫॥
✍🏻 ಪರಸಪ್ಪ ತಳವಾರ
ಕನ್ನಡ ಸಹಾಯಕ ಪ್ರಾಧ್ಯಾಪಕರು
ಸ.ಪ್ರ.ದ.ಕಾಲೇಜು
ಲೋಕಾಪೂರ ಜಿ:ಬಾಗಲಕೋಟ