ಅವನರಿವಿನ ಯರವಲಿನ ಋಣಭಾರ ಹೊತ್ತಿದ್ದೇನೆ…
ತೀರಿಸಲಾರದ ಸಾಲವಿದು…

ಅಲ್ಲಮನ ಶಬ್ದ ಸ್ಪೋಟಕ್ಕೆ ಮಾತು ಕಳೆದುಕೊಂಡಿದ್ದೇನೆ… ಭರಿಸಲಾರದ ನೋವಿದು…

ನನ್ನ ಆವರಿದ ಪ್ರೇಮೋನ್ನತಿಗೆ
ಉಸಿರುವುದ ಮರೆತಿದ್ದೇನೆ…
ಹೆಸರಿಸಲಾರದ ಬ್ರೂಣವಿದು…

ಎದೆಯ ಖಾಲಿ ಕೊಣೆಗೆ ನಿನ್ಹೆಸರ
ನಾಮಫಲಕ ಹಚ್ಚಿದ್ದೇನೆ
ಅಳಿಸಲಾರದ ನಂಟಿದು…

ಅಕ್ಕನ ಹುಡುಕಾಟವಿನ್ನು ಮುಗಿದಿಲ್ಲ
ದಕ್ಕದ ಮಲ್ಲನನ್ನೇ ನೆಚ್ಚಿದ್ದೇನೆ
ಅಳಿಸಲಾರದ ಮೋಹವಿದು..

ಬೆಳಕನರಿಸುವ ಧಾವಂತಕೆ
ಬೋಧಿಯಡೆಗೆ ಸಾಗಿದ್ದೇನೆ
ಬುದ್ದನಿಲ್ಲದ ಬದುಕಿದು…..

✍️ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ       ಬೆಳಗಾವಿ