ಗೋಕಾಕ ತಾಲೂಕಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ಶಿವಾನಂದ ಉಳ್ಳಿಗೇರಿಯವರ ಜೀವನ,ಹುಟ್ಟು ಹೋರಾಟ ದ ಕಥೆಯಾಗಿದೆ. ಬಾಲ್ಯದಿಂದಲೂ ಬಡತನದ ಲ್ಲಿ ಬೆಂದು ಬೆಂಕಿಯಲ್ಲಿ ಅರಳಿದ ಹೂ ಇವರು. ಚಿಕ್ಕಂದಿನಿಂದಲೇ ಅಪ್ಪನನ್ನು ಕಳೆದು ಕೊಂಡ
ಇವರಿಗೆ ಅವ್ವನೇ ಸರ್ವಸ್ವ .’ಅಪ್ಪನ ಕಂಡಿಲ್ಲ; ಅವ್ವನೇ ನನಗೆಲ್ಲಾ’ ಎಂಬಾಗ ಆ ಮುಖದಲ್ಲಿ ಯ ವಿಷಾದದ ಛಾಯೆ, ಬದುಕಿನಲ್ಲಿ ಎಷ್ಟೇ ಕಷ್ಟ ಬಂದರೂ ಕೂಲಿ ಮಾಡಿ ಶಿಕ್ಷಣ ನೀಡಿದ ತಾಯಿ ಯ ಪರಿಶ್ರಮ, ತ್ಯಾಗ,ಮಮತೆ, ಬದುಕಿ ಸಾಧಿಸ ಬೇಕೆನ್ನುವ ಛಲಗಳೇ ಶಿವಾನಂದರ ಕವಿತೆಗಳ ಮೂಲ ದ್ರವ್ಯಗಳಾಗಿದೆ. ಅವ್ವ ಮತ್ತು ಕವಿತೆಗ ಳೇ ಬದುಕಲ್ಲಿ ಕೈ ಹಿಡಿದು ನನ್ನ ಮುನ್ನಡಿಸಿದವು ಎನ್ನುವಾಗ ಇವರ ಕಣ್ಣಲ್ಲಿ ಮಿಂಚಿನ ಸುಳಿ ಹರ ಡುವುದು. ಇವರ ಅವ್ವನೇ ಇವರಿಗೊಂದು ಮಹಾಕಾವ್ಯ.ಇಲ್ಲಿಯ ಕವಿತೆಗಳೇ ಇವರ ಕಷ್ಟದ ಬದುಕಿನಲ್ಲಿ ಕೈಹಿಡಿದೆತ್ತಿ ಸಾಂತ್ವನ ನೀಡಿದ ಸಂಜೀವಿನಿಯಾ ಗಿದೆ.

ಇವರಿಗೆ ಕವಿತೆ ಮತ್ತು ಅವ್ವ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕಣ್ಮರೆಯಾಗುತ್ತಿರು ವ ಮಾನವೀಯ ಮೌಲ್ಯಗಳ ಕುರಿತಾಗಿಯೂ ಇವರಿಗೆ ಆತಂಕ ಕಾಡುತ್ತಿದೆ.

“ಹೆತ್ತು, ಹೊತ್ತು, ತುತ್ತು ಉಣಿಸಿ ಸಲುಹಿದ ಅವ್ವನಿಗೆ “ ಅರ್ಪಿಸಿದ ಈ ಕವನ ಸಂಕಲನ 74 ಪುಟಗಳನ್ನು ಒಳಗೊಂಡಿದ್ದು, 54 ಕವನ ಗಳಿಂದ ಕೂಡಿದ ಈ ‘ಅವ್ವ ಮತ್ತು ಆಲದ ಮರ‘ ವನ್ನು ಸವದತ್ತಿಯ ತೇಜಸ್ವಿ ಪ್ರಕಾಶನ ಪ್ರಕಟಿಸಿದೆ.

ಮಮತೆ ತುಂಬಿದ ಮಡಿಲು
ಆ ಸ್ವರ್ಗಕ್ಕಿಂತಲೂ ಮಿಗಿಲು
ಎಂದಿಗೂ ತೀರದ ಒರತೆ ಅವಳ ಪ್ರೀತಿ
ಸದಾ ತಣ್ಣೆಳಲನೀಯುವ ಆಲದ ಮರದ ರೀತಿ

ಎಂದು “ಅವ್ವನ ಮುಗಿಯದ ಪ್ರೀತಿ” ಯಲ್ಲಿ ತಾಯಿಯ ಮಹಿಮೆಯನ್ನು ಕೊಂಡಾಡಿರು ವರು. ಅಪ್ಪನ ಕಂಡಿಲ್ಲ ; ಅವ್ವನೇ ನನಗೆಲ್ಲಾ ಎಂದು ಕವಿ ತನ್ನ ಬದುಕಿನ ಎಲ್ಲವೂ ನನ್ನವ್ವನೇ ಎಂದು ಹೇಳುತ್ತಾ ನನ್ನವ್ವ ತಂಪಾದ ನೆರಳು ನೀಡುವ ಆಲದಮರ ಎಂದಿರುವರು. ಅಪ್ಪನಿಲ್ಲ ದ ಕೊರತೆಯನ್ನು ಸ್ವಲ್ಪವೂ ಕಾಡದಂತೆ ಸಲುಹಿದ ಅವ್ವನೇ ನನ್ನುಸಿರು, ತನ್ನ ಬದುಕಿನ ಮೊದಲ ಗುರುವೂ ಸಹ ಅವಳೇ ಎಂದು ಸ್ವರ್ಗಕ್ಕಿಂತಲೂ ಮಿಗಿಲಾಗಿದೆ ಅವಳ ಮಡಿಲು ಎನ್ನುತ್ತಾ ಅವ್ವ ಎಂದರೆ ನನಗಿಷ್ಟ; ನಾನೆಂದಿಗೂ ಕೊಡಲಾರೆ ಕಷ್ಟ ಎಂದಿರುವರು. ಕೂಲಿ ನಾಲಿ ಮಾಡಿ ಬದುಕು ಸವೆಸುತ್ತಾ ಶಿಕ್ಷಣ ಕೊಡಿಸಿ, ಬದುಕಲ್ಲಿ ಬೆಳಕಾದ ಆ ದೇವತೆಯ ಋಣ ಈ ಜನ್ಮದಲ್ಲಿ ತೀರಿಸಲು ಅಸಾಧ್ಯ ಎಂದು ಈ ಜಗದಲಿ ಅವ್ವನ ಸಮಾನ ಯಾರೂ ಇಲ್ಲ ಎಂದಿರುವರು.

“ಮೊಬೈಲ್ ಎಂಬ ಮಾಯೆ” ಕವನದಲ್ಲಿ,

ಮುಂಜಾನೆ ಎದ್ದೊಡನೆ ಜೊತೆಯಾಗಿ ಬಂದು, ರಾತ್ರಿ ಮಲಗುವಾಗಲೂ ಪಕ್ಕದಲಿ ಬಿದ್ದು, ಸದಾ ಜೊತೆಯಾಗಿ ದೇಹದ ಅಂಗದಂತಾಗಿ ರುವೆ, ನಿನ್ನ ಬಿಟ್ಟಿರಲಾಗದಾಗಿದೆ ನಮಗೆ ಎನ್ನುತ್ತಾ ಇತ್ತೀಚಿಗೆ ಮನುಷ್ಯ ಜನಾಂಗವನ್ನೇ ಆವರಿಸಿಕೊಂಡಿರುವ ಮೊಬೈಲಿನ ಮಹಿಮೆ ಯನ್ನು ಮನಸಾ ವರ್ಣಿಸಿ ರುವರು. ಸಮಯ ನೋಡ ಲೂ ಇದೇ ಬೇಕು, ಫೋಟೋಗಳನ್ನೂ ಸಹ ತೆಗೆಯುತ್ತಾ, ಲೆಕ್ಕಾಚಾ ರವನ್ನೂ ಮಾಡುತ್ತಾ ಈ ಮೊಬೈಲ್ ಎಂಬ ಮಾಯಾವಿ ಸಂಗೀತದ ಸಾಧನವೂ ಹೌದು ಎಂದು ಮಾರ್ಮಿಕವಾಗಿ ನುಡಿದಿರುವರು. ಅಬಾಲ- ವೃದ್ಧರ ಆಕರ್ಷಿಸುತ್ತಾ,ದೂರದಲ್ಲಿವವ ರನ್ನ ಹತ್ತಿರವಾಗಿಸುತ್ತಾ, ಹತ್ತಿರವಾಗಿರುವವರನ್ನ ದೂರವಾಗಿಸುವ ಈ ಮೊಬೈಲ್ ಎಂಬ ಮಹಾಜಾಲದೊಳಗೆ ಒಮ್ಮೆ ಬಿದ್ದರೆ ಏಳುವು ದೇ ಬಲುಕಷ್ಟ ಎಂದು ಇದೂ ಸಹ ಮನುಷ್ಯನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ ಎಂಬ ಸತ್ಯದ ವಿಷಯಕ್ಕೆ ಸ್ಪಷ್ಟನೆ ನೀಡಿರುವರು.

ಶಿವಾನಂದ ಉಳ್ಳಿಗೇರಿ

ಶಿವಾನಂದ ಉಳ್ಳಿಗೇರಿಯವರ ಬದುಕಿನ, ಕವಿತೆ ಯ ಮತ್ತು ಶೈಕ್ಷಣಿಕ ಗುರುಗಳಾದ ಸವದತ್ತಿಯ ನಾಗೇಶ್ ಜೆ. ನಾಯಕ ‘ಕಷ್ಟದ ಬದುಕಿಗೆ ಕೈ ಹಿಡಿದು ಬರೆಸಿದ ಕವಿತೆಗಳು’ ಎಂಬ ಈ ಸಂಕಲ ನದ ಮುನ್ನುಡಿಯಲ್ಲಿ “ತುಳಿತಕ್ಕೊಳಗಾದವರ ಪರ ದನಿಯಾಗಿ ನಿಂತು, ಅವರ ನೋವಿಗೆ ಸಾಂತ್ವನ ತುಂಬುವ ಅಗತ್ಯತೆ ಕವಿತೆ ಮೂಲಕ ಆಗಬೇಕಿದೆ. ಇಂತಹ ಎಲ್ಲಾ ಸಾಮಾಜಿಕ ಬದ್ಧತೆ ಗಳನ್ನು ಇರಿಸಿ ಕೊಂಡೇ ಕವಿ ಬರೆಯಬೇಕಿದೆ, ಸಮಾಜದ ಆಗುಹೋಗುಗಳಿಗೆ ಸ್ಪಂದಿಸಬೇಕಿದೆ. ಕವಿಯಾದವನು ಕಲ್ಪನಾಲೋಕದಲ್ಲಿ ವಿಹರಿ ಸದೇ ವಾಸ್ತವದ ನೈಜತೆಯನ್ನು ಕಾವ್ಯದ ಸಾಲು ಗಳಲ್ಲಿ ನಗ್ನಗೊಳಿಸಬೇಕಾದ ಜರೂರ ತ್ತಿದೆ. ಅತ್ಯಂತ ಸಂಕೋಚ ಸ್ವಭಾವದ ಶಿವಾನಂದ ನನ್ನ ವಿದ್ಯಾರ್ಥಿ ಎಂಬುದು ನನಗೆ ಹೆಮ್ಮೆ” ಎಂದಿರುವರು.

ಮಾನವನ ಕೃತ್ಯದಿಂದಲೇ
ಬಿಸಿಯಾಗುತ್ತಿದೆ ನಮ್ಮ ನೆಲೆ
ಭುವಿಯು ಧಗಧಗಿಸುತಿದೆ
ಸುಡುವ ಕೆಂಡದಂತಾಗಿದೆ

ಎಂದು “ಜಾಗತಿಕ ತಾಪಮಾನ” ಕವಿತೆಯಲ್ಲಿ ಮನುಷ್ಯ ನಿರ್ಮಿತ ಜಾಲದಿಂದಲೇ ಮಾನವ ಕುಲ ಅವಸಾನದತ್ತ ಸಾಗುತಿದೆ ಎಂಬ ಎಚ್ಚರಿ ಕೆಯ ಮಾತನ್ನೂ ಎಸೆದಿರುವರು. ಮನುಷ್ಯನು ತನ್ನ ದುರಹಂಕಾರ ಮತ್ತು ಅಭಿವೃದ್ದಿಯ ಹೆಸರಿನಲ್ಲಿ ಗಿಡಮರಗಳನ್ನು ಕಡಿಯುತ್ತಾ ಭೂ ತಾಯಿ ಯನ್ನು ಬೋಳಾಗಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವನು. ಇದರಿಂದಲೇ ಕ್ರಮೇಣ ಮಳೆಯ ಪ್ರಮಾಣ ಕಡಿಮೆಯಾಗುತ್ತಾ ಭೂಮಿ ಬರಡಾಗಿ ಸುಡುವ ಕೆಂಡವಾಗಿ ಧಗಧಗಿಸುತ್ತಿದೆ. ನಿಸರ್ಗ ಸೊರಗು ತ್ತಿದೆ; ಹಿಮರಾಶಿ ಕರಗುತ್ತಿದೆ. ಜಾಗತಿಕ ತಾಪ ಮಾನ ಹೆಚ್ಚಾಗಿ ಜೀವ ಸಂಕುಲಗಳು ಅವನತಿ ಯತ್ತ ಸಾಗುವುದು. ಅದಕ್ಕಾಗಿ ಹಸಿರು ಬೆಳೆಸಿ ಉಳಿಸುವಾ ಎಂಬ ಆಶಾ ಭಾವದ ಮಾತನ್ನೂ ತಿಳಿ ಹೇಳಿರುವರು.

“ಬದುಕಿನ ಗೋಳು” ಕವಿತೆಯಲ್ಲಿ

ಸ್ವಾರ್ಥಿಗಳೇ ಸುತ್ತಲಿರುವಂತೆ ಭಾಸವಾಗುತಿದೆ
ನಿಸ್ವಾರ್ಥಿಗೆ ನೆಮ್ಮದಿ ಇಲ್ಲವಾಗಿದೆ
ವಿಧಿಯಾಟವಿದೆಂದು ಅನಿಸುತಿದೆ
ಎಲ್ಲವನೂ ಸಹಿಸುತ ತಾಳಲೇಬೇಕಿದೆ

ಎಂದು ಮನುಷ್ಯನ ಸ್ವಾರ್ಥ ಬದುಕಿಗೆ ಕನ್ನಡಿ ಯಾಗಿರುವರು ಈಗ ಎಲ್ಲೆಡೆಯೂ ತಾನು ತನ್ನ ದೆಂಬ ಮಮಕಾರದಿಂದ ಮನುಷ್ಯ ಸಂಬಂಧ ವೇ ಕರಕಲಾಗುತ್ತಿದೆ.ದುಡ್ಡಿಗಾಗಿ ಹಪಾಹಪಿತನ ಮುಗಿಲು ಮುಟ್ಟಿದೆ. ನಮ್ಮೊಳಗಿನ ಮನಸ್ಸು- ಮನಸ್ಸಿನ ಸ್ವಾರ್ಥತನದ ಬೇಲಿ ಗಟ್ಟಿಯಾಗು ತ್ತಿದೆ. ಇವುಗಳ ನಡುವೆಯೂ ಏನೇ ಬಂದರೂ ಸಾಧಿಸುವ ಛಲದಿಂದ ಬದುಕಿ ಇದ್ದು ಜೈಸುವಾ ಎಂದು ಕವಿ ಆಶಾಭಾವ ವ್ಯಕ್ತಪಡಿಸಿದ್ದಾರೆ.

ತಬ್ಬಲಿಯ ಮಾಡಿ
ಮೌನದಿ ಮರೆಯಾಗಿ ಹೋದನಲ್ಲ
ಅಪ್ಪನಿಲ್ಲದ ಬದುಕಿನಲ್ಲಿ
ಕೊರತೆಯೊಂದು ಕಾಡಿತಲ್ಲ

ಎಂದು “ಅಪ್ಪ” ಕವಿತೆಯಲ್ಲಿ ಅಪ್ಪನ ಪ್ರೀತಿ ಕಾಣದ ಅನಾಥ ಪ್ರಜ್ಞೆಗೆ ಮನ ಮಿಡಿದಿರು ವರು. ಎಲ್ಲರ ಬದುಕಿನಲೂ ಅವ್ವನಂತೇ ಅಪ್ಪನ ಪ್ರೀತಿ ಯೂ ಅಷ್ಟೇ ಮುಖ್ಯ. ಆದರೆ ದುರದೃಷ್ಟವಶಾತ್ ಈ ಎರಡೂ ಪ್ರೀತಿಯ ಅಪ್ಪುಗೆ ಎಲ್ಲರಿಗೂ ಸಿಗು ವುದಿಲ್ಲ. ಕವಿ ಇಲ್ಲಿ ‘ಅಪ್ಪಾ ಅಪ್ಪಾ ಅಂತ ಕೂಗಿ ದರೂ ಆಲಿಸಲು ಆತನಿಲ್ಲ’ಎಂದು ತನ್ನ ಬವಣೆ ತೋಡಿಕೊಂಡಿ ರುವನು ; ತನ್ನ ತಬ್ಬಲಿತನಕ್ಕೆ ಕಣ್ಣೀರಾಗಿರು ವರು.

“ಮಳೆ ಬಿದ್ದು ನೆಲ ಹಸನಾದಂತೆ ಕವಿಯ ಕಾವ್ಯ ಪರಂಪರೆಯ ಇಲ್ಲಿನ ಸಾಲುಗಳಿಂದ ನಿಮ್ಮೆಲ್ಲರ ಮನದ ಖುಷಿಗೆ ಕಾರಣವಾಗಲಿ, ಅವರ ಕವನ ಸಂಕಲನಕ್ಕೆ ಶುಭ ಕೋರುವೆ” ಎಂದು ಗಜಲ್ ಕವಿ ಅಲ್ಲಾಗಿರಿರಾಜ್ ತಮ್ಮ ಬೆನ್ನುಡಿಯಲ್ಲಿ ಹಾರೈಸಿರುವರು.

“ಹಣದ ಆರ್ಭಟ” ಕವಿತೆಯಲ್ಲಿ

ಏನೇ ಇದ್ದರೂ ಅದು ಶೂನ್ಯ
ಹಣವೊಂದೇ ಇಲ್ಲಿ ಮಾನ್ಯ
ಎಲ್ಲಕೂ ಮಿಗಿಲು ಹಣವಾಗಿದೆ
ಅದರ ಮುಂದೆ ಎಲ್ಲವೂ ಹೆಣೆವಾಗಿದೆ

‘ಜಗಕೆ ಅನ್ನವ ನೀಡುವ ರೈತರಿಗೆ, ದೇಶವ ರಕ್ಷಿಸುವ ಸೈನಿಕರಿಗೆ ನಮಿಸೋಣ, ನಾವು ನಮಿಸೋಣ’ ಎಂಬ ಮನೋಭಾವನೆಯ ಕವಿ ಶಿವಾನಂದ ಉಳ್ಳಿಗೇರಿ ಅವರ ಕವಿತೆಗಳ ಜೀವಾಳ ಮನುಷ್ಯ ಪ್ರೀತಿ ಮತ್ತು ತಾಯಿಯ
ಮಮತೆ. ಇನ್ನಷ್ಟು ಓದು ಮತ್ತು ವಿಷಯ ವೈವಿಧ್ಯತೆಗಳೊಂದಿಗೆ ಸತ್ವಯುತ ಭಾಷೆ ಮತ್ತು ವಸ್ತುನಿಷ್ಠ ವಿಷಯಗಳೊಂದಿಗೆ ವಾಚ್ಯತೆಯ ಸುಂಟರಗಾಳಿಯಿಂದ ಹೊರ ಬಂದು ಇದೇ ಮನ ಸ್ಸಿನಿಂದ ಶಿವಾನಂದ ಕವಿತೆ ಬರೆಯಲಿ ಎಂದು ಹಾರೈಸಿ ಇವರ ಮೊದಲ ಕವನ ಸಂಕಲನಕ್ಕೆ ಅಭಿನಂದಿಸುವೆನು.

ಎಂದು ಈಜಗದಲಿ ಹಣಕ್ಕಿರುವ ಪ್ರಾಮುಖ್ಯ ತೆಗೆ, ಅದರ ಮುಂದೆ ಮನುಷ್ಯತ್ವದ ನಾಶಕ್ಕೆ ಕವಿಯ ಮನಸ್ಸು ರೋಸಿ ಹೋಗಿದೆ. ಹಣದ ಆರ್ಭಟದ ಮುಂದೆ ಬಡವನ ಮನಸು – ಕನಸು ಗಳು ಮುರುಟಿ ಹೋಗಿದೆ. ಇಲ್ಲಿ ಹಣ ಇದ್ದವರಿಗೆ ಮಾತ್ರ ಸ್ಥಾನ-ಮಾನ. ಬಡತನದ ಕಾರಣ ಎಷ್ಟೋ ಪ್ರತಿಭೆಗಳು ಅರಳುವ ಮೊದಲೇ ಕರಕಲಾಗಿ ಹೋಗಿರುತ್ತದೆ. ಎಲ್ಲಕ್ಕೂ ಮಿಗಿಲು ಹಣ; ಅದರ ಮುಂದೆ ಎಲ್ಲವೂ ಹೆಣ ಎಂದು ಮನನೊಂದು ಕವಿ ನಿತ್ಯ ಸತ್ಯದ ಮಾತಿಗೆ ಕಣ್ಣಾಗಿರುವರು.

✍️ ಪ್ರಕಾಶ ಕಡಮೆ
ನಾಗಸುಧೆ, ಹುಬ್ಬಳ್ಳಿ