ಜೀವನಕ್ಕೊಂದು ಸರಿಯಾದ ಮಾರ್ಗವನ್ನು ತೋರುವುದೇ ಸದ್ದು. ಸದ್ದು ಮಾಡಿದಾಗಲೇ ಜೀವನಕ್ಕೊಂದು ಅರ್ಥ ಬರುವುದು. ಸದ್ದಿಲ್ಲದೇ ಆಗುವ ಕಾರ್ಯಗಳು ತಕ್ಕಮಟ್ಟಿಗೆ ಫಲಕಾರಿ ಯಾದರೂ ಸಹ, ಅದರಲ್ಲಿ ತೃಪ್ತಿ ಇರುವುದಿಲ್ಲ. ಅಲ್ಪತೃಪ್ತನಾದವನು ಯಾವತ್ತೂ ಮುಂದೆ ಬರುವ ಯೋಚನೆಯೇ ಮಾಡುವು ದಿಲ್ಲ. ಪ್ರಮುಖ ಯೋಜನೆಗಳು ಫಲಕಾರಿಯಾ ಗಲು ಸದ್ದು ಅತ್ಯವಶ್ಯ. ಮಾತನಾಡುವ ಸದ್ದು, ನಗೆಯ ಸದ್ದು,ನಡೆದಾಡುವ ಸದ್ದು, ಹೊಡೆಯು ವ ಸದ್ದು. ಹೀಗೆ ಹತ್ತು ಕಾರ್ಯಚಟುವಟಿಕೆ ಗಳು ನಡೆದು ಹೋಗಿವೆ ಎನ್ನಲಿಕ್ಕೆ ಸದ್ದೇ ಸಾಕ್ಷಿ.

ಇನ್ನು, ಜೀವನದುದ್ದಕ್ಕೂ ಎಲ್ಲರಿಗೂ ಸದ್ದು ಅತ್ಯವಶ್ಯ. ಕಿವಿಗೆ ಸಿಕ್ಕಿಸುವ ಇಯರ್ ಫೋನಿನ ಸದ್ದಿಂದ ಹಿಡಿದು, ಪಾರ್ಲಿಮೆಂಟಿ ನಲ್ಲಿ ಸದ್ದು ಮಾಡಿದರೇ, ಅವರವರ ಕೃತ್ಯಕ್ಕೊಂದು ಅರ್ಥ. ದೃಶ್ಯ ಮಾಧ್ಯಮಕ್ಕೆ ಹಿನ್ನೆಲೆ ಸಂಗೀತವನ್ನೇ ಕೊಡದೇ ಹೋದಾಗ ಆಗುವ ಹಾಸ್ಯ ಎಲ್ಲರಿಗೂ ಅನುಭವಕ್ಕೆ ಬಂದಿರುವಥದ್ದು. ಭಾರತದ ಸಿನಿಮೀಯ ಇತಿಹಾಸಕ್ಕೆ ಹೋಗಿ ನೋಡಿದರೆ, ತೆರೆಗೆಬಂದ ಮಾತುಗಳುಳ್ಳ ಮೊದಲ ಚಿತ್ರವೇ ಆಲಂ ಆರಾ. ದೃಶ್ಯ ಮಾಧ್ಯಮವನ್ನಷ್ಟೇ ನೋಡಿ, ಆಗಿನ ಕಲಾ ನಿಪುಣತೆಗೆ ತಕ್ಕಮಟ್ಟಿನ ಚಿತ್ರ ಮಾಡಿದ ಆ ಮಹಾನುಭಾವರ ಕಲೆಗೆ ಸಲಾಂ ಎನ್ನಲೇ ಬೇಕು. ಯಾವುದೋ ಒಂದು ಗಲಾಟೆಯಲ್ಲಿ ಸದ್ದನ್ನೇ ಮಾಡದೇ, ತಮ್ಮ ನಿಲುವನ್ನು ಮೌನದ ಮುಖೇನ ತೋರ್ಪಡಿಸು ವುದು ಕೂಡ ಒಂದು ಸದ್ದೇ. ಮೌನ ಮಾಡುವ ಸದ್ದನ್ನು ಇನ್ಯಾವ ಗ್ರ‍್ಯಾಮಿ ಅವಾರ್ಡ್ ಪಡೆದ ಸಂಗೀತಗಾರ ಸಹ ಮಾಡಲಾರರು.

ಮನೆಯಲ್ಲಿನ ವಾತಾವರಣಕ್ಕೆ, ಸದ್ದೇ ಮುಖ್ಯ. ಹೆಂಡತಿಯ ಮುಖಭಾವನೆಗೆ ತಕ್ಕಂತೆ ಕುಣಿಯು ವ ಗಂಡನಿಗೆ, ಹೆಂಡತಿ ಮಾತೇ ಆಡದೇ ಮೌನಕ್ಕೆ ಶರಣಾದ ಹೊತ್ತಲ್ಲಿ ಮಾಡುವ ತೊಳಲಾಟ ಅಷ್ಟಿಷ್ಟಲ್ಲ. ಮಕ್ಕಳ ಬೇಡಿಕೆಗೆ ಸ್ಪಂದಿಸದೇ ಇರುವ ಅಪ್ಪ, ಮಾತನ್ನೇ ಆಡದೇ ಮಕ್ಕಳು ಮೌನವ್ರತ ಕೈಗೊಂಡಾಗ ಮನದಲ್ಲಿ ದುಗುಡ- ದುಮ್ಮಾನಗಳು ಹೆಚ್ಚಾಗಿ ಬೇಡಿಕೆಯನ್ನು ಪೂರೈ ಸುವ ಮನೋಭಾವ ತನ್ನಿಂತಾನೇ ಹುಟ್ಟುತ್ತದೆ. ಶ್ರವ್ಯ ಮಾಧ್ಯಮ ಜೀವನಕ್ಕೆ ಅತ್ಯವಶ್ಯ. ಕೆಲಸ ಗಳು ಆಗುವುದು ಕೂಡ ಸದ್ದಿನಿಂದಲೇ ಹೊರತು ಬರಿಯ ದೃಶ್ಯ ಮಾಧ್ಯಮದಿಂದ ಅಲ್ಲ.

ಹೊಡೆದಾಗ ಆಗುವ ಸದ್ದಿನ ಮರ್ಮಕ್ಕೆ ಕಟ್ಟುಬಿದ್ದ ನಾವೆಲ್ಲ, ಸದ್ದೇ ಇರದೇ ಹೊಡೆದಾಗ ನಗುತ್ತೇವೆ.ಮಳೆ ಹನಿಗಳ ತಟಪಟ ಸದ್ದಿನೊಡ ನೆ ಆಗುವ ತಾಳದ ವೈಭವ, ಕಿವಿಗಳನ್ನು ಮುಚ್ಚಿ ಬರಿಯ ಹನಿಗಳನ್ನೇ ನೋಡುತ್ತ ಕುಳಿತರೆ, ಅದರಲ್ಲೇನು ಸಂತಸ? ಮಾತನಾಡಲು ಬಂದ ಪ್ರೇಯಸಿಯ ಮಾತುಗಳೇ ಕೇಳದಿದ್ದಾಗ ಆಗುವ ನೋವು, ಯಾರಿಗೂ ಅರ್ಥವಾಗದು. ಗಂಟೆ – ಜಾಗಟೆ ಗಳು ಎಬ್ಬಿಸುವ ಭಕ್ತಿಯ ರಸ, ಬರಿಗಣ್ಣ ಲ್ಲಿ ಅವುಗಳನ್ನು ನೋಡಿದಾಗ, ಕಸಿವಿಸಿ ಆಗುತ್ತದೆ. ಹೃದಯ ತಳಮಳಗೊಳ್ಳುತ್ತದೆ. ಕಳ್ಳನಿಗೂ ಸದ್ದೇ ಜೀವಾಳ. ಮನೆಯಲ್ಲಿ ಯಾರೋ ಇದ್ದಾರೆ ಎಂಬ ಸುದ್ದಿಯನ್ನೂ ಸಹ ಅವನು ಆಗುತ್ತಿರುವ ಸದ್ದನ್ನೇ ಅನುಸರಿಸಬೇಕು. ಸದ್ದಿಲ್ಲದೇ ಕಳ್ಳತನ ಮಾಡುವ ಕೆಲಸ ಕೂಡ ಸಮಾಜದಲ್ಲಿ ದೊಡ್ಡ ಸದ್ದನ್ನು ಮಾಡುತ್ತದೆ.

ಇತಿಹಾಸದ ಪುಟ ತಿರುವಿ ನೋಡಿದರೆ, ಸದ್ದು ಮಾಡಿದ ಕೆಲಸಕ್ಕಿಂತ ಹೆಚ್ಚಾಗಿ, ಮೌನ ಮಾಡಿದ ಸದ್ದೇ ಹೆಚ್ಚು. ಮಹಾತ್ಮಾ ಗಾಂಧೀಜಿ ಯವರ ಉಪವಾಸ ಹಾಗೂ ಮೌನ ಪ್ರತಿಭಟನೆಗಳು ಇಂಗ್ಲೀಷರ ಮೇಲೇ ಪ್ರಭಾವ ಬೀರಿ, ಅವರನ್ನು ಗೊಂದಲಕ್ಕೀಡಾಗುವಂತೆ ಮಾಡುತ್ತಿದ್ದವು.

ದೃಶ್ಯ ಮಾಧ್ಯಮಕ್ಕೂ ಶ್ರವ್ಯ ಮಾಧ್ಯಮಕ್ಕೂ ಇರುವ ವ್ಯತ್ಯಾಸ ಇಷ್ಟೇ. ದೃಶ್ಯ ಮಾಧ್ಯಮ ನಮ್ಮ ಸೃಜನಶೀಲ ಚಿಂತನೆಯನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ತೋರಿಸಿ ಮನರಂಜಿ ಸುತ್ತದೆ. ಆದರೆ, ಶ್ರವ್ಯ ಮಾಧ್ಯಮ ಇದಕ್ಕೆ ಹೊರತಾದದ್ದು. ಶ್ರವ್ಯ ಮಾಧ್ಯಮ ಕೊಡುವ ಸೃಜನಾತ್ಮಕ ಪರಿಕಲ್ಪನೆಗಳಿಗೆ ಮಿತಿಯಿಲ್ಲ. ರೇಡಿಯೋ ಮತ್ತು ಟಿವಿಗಳಲ್ಲಿ ಬರುವ ಧಾರಾವಹಿಗಳು, ಕಾರ್ಯಕ್ರ ಮಗಳು, ಮಾತುಕತೆಗಳು ಎಲ್ಲ ಕೊಡುವ ಸಂದೇಶ ಒಂದೇ ಆದರೂ, ಅವುಗಳನ್ನು ನಾವು ಗ್ರಹಿಸುವ ದಾರಿಗಳು ಅನೇಕಾನೇಕ.

ಕೃತಿಗಳು ಕೊಡುವ ಆನಂದ, ಸಂತಸ ಎಂದೆಂದಿಗೂ ಜೀವಂತ. ಬಾಲ್ಯದಲ್ಲಿ ಕೇಳಿದ ಅಜ್ಜಿಯ ಕಥೆಗಳು ಎಂದಿಗೂ ಶಾಶ್ವತ. ಅಜ್ಜಿಯ ಮುಖ ನೆನಪಿಲ್ಲದೇ ಇದ್ದರೂ, ಅವಳು ಹೇಳಿದ ಒಂದೊಂದು ಕಥೆಗಳು ಅಪರಿಮಿತ. ಶ್ರವ್ಯ ಮಾಧ್ಯಮ ಕೊಡುವ ನವ್ಯ ವಿಚಾರಗಳು, ಮನಸ್ಸಲ್ಲಿ ಜೀವಂತವಾಗಿಯೇ ನೆಲೆಯೂರು ತ್ತವೆ. ನೋಡುವ ನೋಟಕ್ಕೆ, ಕೇಳುವ ಸಂಗೀತ ವೊಂದಿದ್ದರೆ ಸಾಕು ಅದೇ ಸ್ವರ್ಗ.

✍️ವಿನಯಕುಮಾರ ಪಾಟಿಲ್
ಎಸ್.ಡಿ.ಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರ,ಉಜಿರೆ