ಆನ್ಲೈನ್ ದಾರಿಯಲ್ಲಿ ರಂಗಭೂಮಿ ಸಂಘಟ ನೆಯೊಂದು ಹೇಗೆ ವಿನೂತನವಾಗಿ ಸೃಜನ ಶೀಲತೆಯಿಂದ ಕಾರ್ಯಮಾಡಬಹುದು ಅನ್ನುವ ವಿಚಾರಧಾರೆಗೆ ಒಂದಿಷ್ಟು ಐಡಿಯಾ ಗಳು ಹೀಗೆ ಇವೆ. ಇವುಗಳನ್ನು ಬಿಟ್ಟು ಇನ್ನೂ ಬುದ್ಧಿವಂತರು ಅನಿಸಿಕೊಂಡವರಿಗೆ ಹೊಳೆಯ ಬಹುದು. ಅವೆಲ್ಲ ಅವರಿಗೆ ಗೊತ್ತಿರುವ ತಂತ್ರ ಜ್ಞಾನ, ಕೌಶಲ್ಯಗಳ ಮೇಲೆ ಅವಲಂಬಿತವಾಗಿ ರುತ್ತವೆ. ನಿಮಗೆ ಆಶ್ಚರ್ಯ ವಾಗಬಹುದು ಇಂದು ರಂಗದ ಮೇಲೆ ವ್ಯಕ್ತಿ (ನಟ ಅಥವಾ ನಟಿ)ಯೊಬ್ಬನನ್ನು ಸುಲಭ ವಾಗಿ ವೇದಿಕೆಯ ಮೇಲೆ ಸೃಷ್ಟಿಸಬಹುದಾಗಿದೆ, ಆ ವ್ಯಕ್ತಿಯಿಂದ ಯಾವದೇ ಭಾಷೆಯ ಲ್ಲಿ ಸಹ ಮಾತಾಡಿಸ ಬಹುದಾಗಿದೆ, ಅಭಿನಯ ವನ್ನೂ ಸಹ ಭ್ರಮಾತ್ಮಕವಾಗಿ ಮಾಡಿಸಬಹುದಾಗಿದೆ. ಹೀಗಾದಾಗ ಪಾತ್ರಧಾರಿ ಇಲ್ಲದೆಯೇ ನಾಟಕ ಮಾಡಬಹುದು ಅನ್ನುವ ಸಾಧ್ಯತೆಗಳೂ ಈಗ ಹೆಚ್ಚಾಗಿವೆ. ಲೇಖಕನೇ ಸ್ವತಃ ಅಂತಹ ಸಾಧ್ಯತೆ ಗಳನ್ನು IIT ಚೆನೈ ತಯಾರು ಮಾಡಿದ, ಘಟಿ- ಕೋತ್ಸವದ ಸಮಾರಂಭದಲ್ಲಿ ಕೊರೊನಾ ದಿಂದಾ ಗಿ ಬರಲಾರದ ವಿದ್ಯಾರ್ಥಿ ಗಳ ಭ್ರಮಾತ್ಮಕ ಸೃಷ್ಟಿ ಮಾಡಿ ಅವರ ಇಮೇಜ್ ಗೆ ಪದವಿ ಪ್ರದಾನ ಮಾಡಿದ ವಿಡಿಯೋ ವೈರಲ್ ಆಗಿತ್ತು.

ಹಾಗೇಯೇ ಆನ್ಲೈನ್ ನಲ್ಲಿ ಟಿಕೇಟು ಮಾರಾಟ OTT (ಓವರ್ ದಿ ಟಾಪ್) ಮೂಲಕ ಜಗತ್ತಿನ ತುಂಬೆಲ್ಲ ಜನ ಆ ಸಮಯದಲ್ಲಿ ತಾವು ಇದ್ದ ಲ್ಲಿಂದ ನೋಡಬಹುದಾಗಿದೆ. ಇದು ಈಗ ಸದ್ಯಕ್ಕೆ ಸಿನಿಮಾಗಳಿಗೆ ಸೀಮಿತವಾಗಿದ್ದರೂ ಮುಂಬ ರುವ ದಿನಗಳಲ್ಲಿ ನಾಟಕ ರಂಗಕ್ಕೂ ಹಬ್ಬಿದರೆ ಆಶ್ಚರ್ಯವಿಲ್ಲ. ಇನ್ನೂ ನಾಟಕದ ಪ್ರಚಾರವನ್ನು ಸಾಕಷ್ಟು ಪ್ರಮಾಣದಲ್ಲಿ ಆನ್ಲೈನ್ ನಲ್ಲಿ, ಇನ್ ಸ್ಟಾಗ್ರಾಮ್, ಟ್ವಿಟರ್ ಗಳ ಮೂಲಕ ಮಾಡಬ ಹುದು. ಯಾರು ನೋಂದಾಯಿತರಾಗಿರುತ್ತಾ ರೋ ಅವರಿಗೆ ನೆನಪು ಮಾಡುವ ಹಾಗೆ ಪ್ರಚಾರ, ಮಾಹಿತಿ, ಟೀಸರ್ ಎಲ್ಲವನ್ನು ನೀಡಬಹುದಾ ಗಿದೆ.

ಆನಲೈನಿನಲ್ಲಿ ನಾಟಕವನ್ನು ಸಹ ಬರೆಯ ಬಹುದಾಗಿದೆ ಅಂದರೆ ಒಬ್ಬ ಬರೆದ ನಂತರ ಮತ್ತೊಬ್ಬ ಅದನ್ನ ಮುಂದುವರಿಸಿಕೊಂಡು ಅವನ ನಂತರ ದವರಿಗೆ ವರ್ಗಾಯಿಸುತ್ತ ಸಾಮೂಹಿಕ ಸೃಜನಶೀಲತೆ ತೋರಿಸಬಹು ದಾಗಿದೆ. ನಾಟಕದ ವಾಚಿಕ ರಿಹರ್ಸಲ್ ಸಹ ಮಾಡಬಹುದು, ಸಂಗೀತ ಸಂಯೋಜನೆ ಸಹ ಇದ್ದಲ್ಲಿಂದ ಹಾಡುವದನ್ನ ಸಹ ಇದ್ದಲ್ಲಿಂದ ಮಾಡಬಹುದು. ಇವೆಲ್ಲದರ ಲಾಭಗಳೆಂದ್ರೆ ಸಮಯ, ಸಾರಿಗೆ ಚರ್ಚೆಯ ಮೂಲಕ ಮತ್ತಿಷ್ಟು ಹೊಂದಾಣಿಕೆ ಮಾಡಿಕೊಳ್ಳ ಲೂ ಸಹಾಯಕ, ಭಾಷಾಂತರ ಸಹ ಸಾಧ್ಯ. ಆದರೆ ಅದಕ್ಕೆ ಕೊಂಚ ಕೊಂಚ ಭಾಷೆ ಅರಿವು ಮತ್ತು ಸರಿಯಾದ ಬಳಕೆಯ ಸಾಮರ್ಥ್ಯವಿರಬೇಕಾ ದುದು ಆನಿವಾರ್ಯ.

✍️ಅರವಿಂದ ಕುಲಕರ್ಣಿ
ರಂಗಭೂಮಿ ಚಿಂತಕರು,ಧಾರವಾಡ