ಅಣ್ಣಾ ಕೇಳಣ್ಣ ನೀ ಯಾಕೆ ಮರಳಿ ಬರಲಿಲ್ಲ
ನಮ್ಮ ಆಶಾ ಕಿರಣ ನೀ ಯಾಕೆ ಮರಳಿ ಬರಲಿಲ್ಲ

ಹೊಸ್ತಿಲಲಿ ಹುಲ್ಲು ಹುಟ್ಟಿ ಮೂಟೆಗಟ್ಟಲೆ ಕತ್ತಲು
ಕಾಲ ಕೊಟ್ಟ ಶರಣ ನೀ ಯಾಕೆ ಮರಳಿ ಬರಲಿಲ್ಲ

ದೈವ ಕಾಡಿದವರೀಗಲೂ ಜೀವಂತ ಪೆಡಂಭೂತ
ಭಕ್ತಿ ಭಂಡಾರಿ ಬಸವಣ್ಣ ನೀ ಯಾಕೆ ಮರಳಿ ಬರಲಿಲ್ಲ

ಮಾತು ಕತ್ತಲ ಹುದಲಲಿ ಸಿಕ್ಕಿಕೊಂಡಿದೆ ಅಡಕತ್ತರಿಯಾಗಿ
ಮುಕ್ತಿ ನೀಡುವ ನಿಜಶರಣ ನೀ ಯಾಕೆ ಮರಳಿ ಬರಲಿಲ್ಲ

ಕಾಳಸಂತೆ ಖಳನಾಯಕರ ಮಧ್ಯೆ ನಿಜದ ಹುಡಿ ಹಾರಿದೆ
ಜಾಲಿ ಕಪಟ ನಾಟಕ ಭಕ್ತಿ ಕಾರಣ ನೀ ಯಾಕೆ ಮರಳಿ ಬರಲಿಲ್ಲ

✍️ವೇಣು ಜಾಲಿಬೆಂಚಿ
ರಾಯಚೂರು.