ಕನಕ ಮೌಲ್ಯದ
ನುಡಿಗಳಿರಲು
ಸುವರ್ಣ ತೂಕದ
ನಡೆಗಳಿರಲು
ಅಪ್ಪಟ ಬಂಗಾರದ
ಹೃನ್ಮನಗಳಿರಲು
ಪ್ರತಿದಿನವೂ ಗೆಳೆಯ
ಅಕ್ಷಯತೃತೀಯ
ಪ್ರತಿಕ್ಷಣ ಚಿನ್ನದಾ
ಹೊಳಪು ಹೊಂಬೆಳಕಿಟ್ಟು
ಬೆಳಗಬಲ್ಲೆವು ಇಳೆಯ.!

ಕ್ಷಯವಾಗಲಿ ಬದುಕಿನ
ಸ್ವಾರ್ಥ ದ್ವೇಷಗಳು
ಅಕ್ಷಯವಾಗಲಿ ಬೆಳಕಿನ
ಪ್ರೀತಿ ತ್ಯಾಗಗಳು.!
ನಿತ್ಯ ಜಗ ಬೆಳಗಲಿ
ಸತ್ಯ ಸತ್ವ ತತ್ವಗಳ
ಶ್ರೀಬಸವ ಜ್ಯೋತಿ.!
ಅಡಿಗಡಿಗೂ ಸ್ಫೂರ್ತಿ
ಶಕ್ತಿ ದೀಪ್ತಿಯಾಗಲಿ
ಭಕ್ತಿ ಭಂಡಾರಿಯ ನೀತಿ.!

✍️ಎ.ಎನ್.ರಮೇಶ್. ಗುಬ್ಬಿ.