ಇಂದಿನ ವೈಶಾಖ ಶುಕ್ಲ ತದಿಗೆ
ಸಂಭ್ರಮ ತರಲಿ ಮನಗಳಿಗೆ
ಚಂದ್ರಮ ಸೂರಜರ ದೀವಿಗೆ
ಇಂದು ಬಲು ಹೊಳಪಂತೆ ಬಾನಿಗೆ

ಮಹಾಭಾರತ ರಚನೆಗಾಯಿತು ಆದಿ
ಪರಶುರಾಮರ ಅವತಾರವಾಯಿತು
ಜನಿಸಿದ್ದರಿಂದೇ ಬಲರಾಮ ಬಸವಣ್ಣ
ಅಕ್ಷಯ ಪಾತ್ರೆ ಅನುಗ್ರಹ ಗಂಗಾವತರಣ

ಸೌಭಾಗ್ಯ ಗೌರಿಯ ಉಪಾಸನೆಯಿಂದೇ
ನಾಂದಿ ಧಾರ್ಮಿಕ ಆಧ್ಯಾತ್ಮಿಕ ಸಾಧನೆಗೆ
ಮಂಗಳ ಸುಮುಹೂರ್ತ ಶುಭ ಅಮೃತಗಳಿಗೆ
ಜೀವನೋತ್ಕರ್ಷಕ ಸಾಕಾರ ಸಂಕಲ್ಪಗಳಿಗೆ

ಮನೆ ಮನದಲಿ ಸಂತೃಪ್ತಿಯು ಬೆಳಗಲಿ
ಸಿರಿ ಸಂಪತ್ತಿನೊಡನೆ ಬಾಳಿನಲಿ
ವಿದ್ಯಾ ಬುದ್ಧಿಯು ಅಕ್ಷಯವಾಗಲಿ
ಸರ್ವರಲ್ಲೂ ಸಾಮರಸ್ಯ ನೆಲೆಯಾಗಲಿ

ಎಲ್ಲರಿಗೂ ಅಕ್ಷಯ ತೃತೀಯ ಮತ್ತು ಬಸವ ಜಯಂತಿಯ ಶುಭಾಶಯಗಳು

  ✍️ಸುಜಾತಾ ರವೀಶ್,ಮೈಸೂರು