ಕಾಯಕದ ಕೈಲಾಸಕೆ
ಪ್ರಸಾದಕಾಯ ಮಿಸಲಿರಲಿ
ಬದುಕಿನ ಗುರಿಯ ಮುಟ್ಟಲು
ಗುರು ಕೃಪೆ ನಿರಂತರವಾಗಿರಲಿ
ಬದುಕು ಸಾಧನೆಯ
ಸಾಧನ ಆಗಲಿ
ಕರ್ಮವೇ ಧರ್ಮವು
ಎಂಬ ಮರ್ಮವಿರಲಿ
ಬೇಡಿದವರ ಸೇವೆಗಾಗಿ
ಅಭಯಹಸ್ತಗಳು ಸದಾಸಿದ್ಧವಿರಲಿ
ಆತ್ಮನು ಪರಮಾತ್ಮನ
ಅರ್ಪಣೆಗೆಂದು ಮಿಸಲಿರಲಿ
ಭೂಮಿತಾಯಿಯ ಮಡಿಲು
ಹಸಿರು ರಾಶಿಗಳಿಂದ ತುಂಬಿರಲಿ
ಶಾಂತಚಿತ್ತರಾದ ಭಾರತೀಯರು
ವಿಶ್ವದ ಶಾಂತಿಧೂತರಾಗಿರಲಿ
ದೇಶಪ್ರೇಮವು ನಮ್ಮೆಲ್ಲರ
ಉಸಿರಾಗಿರಲಿ
ಈ ನೆಲದಲ್ಲಿ ಶಾಂತಿಯು,
ಪ್ರೀತಿಯು, ಸ್ನೇಹವು, ಮಮತೆಯು
ಎಂದೂ ಅಕ್ಷಯ ಅಕ್ಷಯವಾಗಿರಲಿ
ಚಿತ್ತ ಚೇತನ ಚೈತನ್ಯವು
ಅಕ್ಷಯವಾಗಿರಲಿ
ಮುಕ್ಕೋಟಿ ದೇವರ ಆಶೀರ್ವಾದವು
ಸದಾ ಅಕ್ಷಯವಾಗಿರಲಿ
✍️ ಕಾವ್ಯಸುತ
(ಷಣ್ಮುಗಂ ವಿವೇಕಾನಂದ)