ಓದಿನ ಹಂಬಲ
ಜ್ಞಾನದ ಆಗರ
ಭರವಸೆಗೆ ಕಿರಣ
ಭೀಮನೆಂಬ ಭಾವ.

ಜಗವ ಸುತ್ತಿ
ಭವವ ತಿಳಿಯುತ
ತಳಮಟ್ಟವ ಎತ್ತಿ
ಕೀಳರಿಮೆ ಮೆಟ್ಟಿ ನಿಂತ.

ಕಾನೂನಿನ ಸಂಗ್ರಹಾಗಾರ
ಹಸಿವು ನಿದಿರೆಯ ಪರಿಧಿ ಮೀರಿ
ಹತಾಶೆಗೆ ತಿರುವು ನೀಡಿ
ಸಂಕಷ್ಟವೆ ಮರುಗುವಂತೆ‌.

ಹಕ್ಕುಗಳಿಗೆ ರೂಪವ ನೀಡಿ
ನ್ಯಾಯ ಸಮ್ಮತ ರೂಪಕವಾಗಿ
ಸಮಾನತೆಯ ಹರಿಕಾರ
ಸಂವಿಧಾನ ಶಿಲ್ಪಿ.

ಧೀಮಂತ ಶಕ್ತಿ
ನೊಂದವರ ಆಶಾಭಾವ
ಚೇತನವೆ ಮನದಿಂಗಿತ
ಕರ್ತವ್ಯಗಳ ತಿಳಿಸಿದಾತ.

ಜಾತಿ ಕಳೆಯ ಕಿತ್ತು
ಭೀತಿ ಕರಗಿಸಿದ
ನೀತಿ ನಿಯಮ ನೀಡಿ
ಭ್ರಷ್ಟತೆಗೆ ಹಿಡಿತ.

✍️ ರೇಷ್ಮಾ ಕಂದಕೂರ
ಶಿಕ್ಷಕಿ,ಸಿಂಧನೂರು