ನೋಡು
ನಾನು ನಿನ್ನೆಯೇ ಪತ್ರ ಬರೆಯಬೇಕೆಂದೆ
ನಿನಗೆ
ಏನು ಹೇಳಲಿ ಸರಿ ಸಮಯಕ್ಕೇನೇ ಪೆನ್ನಿನಲಿ
ಇಂಕು ಆಗಿಹೋಯಿತು

ಕೇಳು
ಮೊನ್ನೆಯೇ ನಿನಗೆ ಫೋನಾಯಿಸಬೇಕೆಂದೆ
ಬಹಳ ಬಹಳ ಪ್ರಯತ್ನಿಸಿದೆ
ಕರೆನ್ಸಿಯೂ ಇತ್ತು
ಡೇಟಾ ಇತ್ತು
ಸರಿಯಾದ ಸಮಯಕ್ಕೇನೇ ನೆಟ್ವರ್ಕ್ ಹೋಯಿತು

ನಾನು ಆ ದಿನ ನಿಜವಾಗಿಯೂ ಫೋನ್
ಡಿಸ್ ಕನೆಕ್ಟ ಮಾಡಿರಲಿಲ್ಲ
ಸ್ವಿಚ್ ಆಫ್ ಮಾಡಿರಲೂ ಇಲ್ಲ
ಸೈಲೆಂಟ್ ಮೋಡ್ ನಲ್ಲೂ ಇರಲಿಲ್ಲ
ನಿನ್ನ ಮೆಸೇಜ್ ಓದಲು ಉತ್ಕಟವಾಗಿಯೇ ಇದ್ದೆ
ಸರಿಯಾದ ಸಮಯಕ್ಜೇನೇ ಬ್ಯಾಟರಿ ಡೌನ್ ಆಯಿತು
ಏನು ಹೇಳಲಿ ಕರೆಂಟೂ ಇರಲಿಲ್ಲ..!

ಮೋಡ ಮಳೆ ಮಿಂಚು ಗುಡುಗು ವಾತಾವರಣ
ಕರೆಂಟು ತೆಗೆದಿರಬೇಕು
ನೆಟ್ವರ್ಕ್ ಹೋಗಿರಬೇಕು

ನಂಬು
ಪ್ರಮಾಣ ಮಾಡಿ ಹೇಳುವೆ
ಇದೆಲ್ಲ ಸತ್ಯ..!!

ತಿಳಿ
ನಿನ್ನಷ್ಟೇ ಹಾತೊರೆವ ನನ್ನ ತಡೆಗಟ್ಟಲು
ಈ ಮೇಲಿನ ಎಲ್ಲವುಗಳು ಏಕೆ ತಡೆ ಒಡ್ಡುತ್ತವೆ
ಮುಷ್ಕರ ಹೂಡುತ್ತವೆ

ತಿಳಿಯುತ್ತಿಲ್ಲ ನನಗೆ
ನಡೆದದ್ದು ಹೇಳಿದ್ದು ಸತ್ಯ..
ಇದೋ ಪ್ರಮಾಣವಿದೆ ನಿನ್ನ ಮೇಲೆಯೇ..!!

ನಂಬು..!!
ಪ್ರಮಾಣ ಮಾಡುವೆ ಹೀಗೆಯೇ..!!

ಶ್ರೀಮತಿ ಅನಸೂಯ ಜಹಗೀರದಾರ 
ಕೊಪ್ಪಳ