ಕಾರುಣ್ಯ ತೋರಲು ವನವಾಸಕ್ಕೆ ತೆರಳಿದೆಯೇನು ಶ್ರೀರಾಮ 
ಲಾವಣ್ಯ ಬೀರಲು ಅಸುರೆ ಮೊಗ ತಿರುವಿದೆಯೇನು ಶ್ರೀರಾಮ 

ಮರ್ಯಾದಾ ಪುರುಷೋತ್ತಮನೆಂಬ ಬಿರುದು ನಿನಗೇ ಅಲ್ಲವೇನು? 
ಮಾದರಿ ಆಗಲು ಲೋಕೋತ್ತರ ಆದರ್ಶ ತೋರಿದೆಯೇನು ಶ್ರೀರಾಮ 

ಮಾತೃ ವಾತ್ಸಲ್ಯದಿ ಸೋದರರನೆಲ್ಲ ಪಾಲಿಸಿದೆಯಂತೆ ನೀನು 
ವಿಧೇಯ ಪುತ್ರನಾಗಿ ಪಿತೃ ಭಕ್ತಿ ಮೆರೆದೆಯೇನು ಶ್ರೀರಾಮ

ಸುಗ್ರೀವ ಗುಹರನು ಸ್ನೇಹಭಾವದೆ ಆದರಿಸಿದಂತ ಸಖನು
ಪವನ ಪುತ್ರನನು ಸ್ವಾಮಿಯಾಗಿ ಸಲಹಿದೆಯೇನು ಶ್ರೀರಾಮ  

ದುಷ್ಟರನ್ನು ಸಂಹರಿಸಿ ಧರ್ಮ ಸಂಸ್ಥಾಪಕ ಎನಿಸಿಕೊಂಡವನು 
ಸುಜಿಯನು ಸಂರಕ್ಷಿಸಿ ಸದಾಕಾಲ ಪೊರೆವೆಯೇನು ಶ್ರೀರಾಮ 

✍️ ಸುಜಾತಾ ರವೀಶ್ 
ಮೈಸೂರು