ಭಾವ ಕಡಲಲಿ ತೀರ ಸೇರದ ಹಳೆಯ ನೆನಪಿದೆ
ಹೃದಯ ಶಾಸನದಿ ಅಳಿಸಿ ಹೋಗದ ನಿನ್ನ ಹೆಸರಿದೆ

ಚಮುಗುಡುವ ಚಳಿಯಲು ಸವಿಗನಸ ತುಂತುರು ಮಳೆಯಿದೆ
ಮನತಣಿಸೊ ಸೌಂದರ್ಯ ರಾಶಿಯ ನಿನ್ನದೆ ಘಮವಿದೆ

ಬಿರು ಬೇಸಿಗೆಗೂ ಅರಳಿ ನಿಂತ ಹೂ ಚಲುವಿದೆ
ನಡೆವ ಹಾದಿಗಿನ್ನು ಕೈ ಬೀಸಿ ಕೆರೆಯುವ ತವಕವಿದೆ

ಕಡು ಮುನಿಸಿನಲು ಬತ್ತಿ ಹೋಗಿದ ಪ್ರೀತಿ ಸೆಲೆಯಿದೆ
ಕುಡಿ ನೋಟದಲೆ ಬಂಧಿಸಿ ಬಿಡುವ ಭಾವ ಜಾಲವಿದೆ

ಕೊರಡಿನಲ್ಲು ಮತ್ತೆ ಮೌನದ ನಿಟ್ಟುಸಿರಿದೆ
‘ಆರಾಧ್ಯ’ ನ ಎದೆಯಲಿ ನಿನ್ನ ಧ್ಯಾನದ ಜಪವಿದೆ

✍️ಶ್ರೀಮತಿ ಗಿರಿಜಾ ಮಾಲಿಪಾಟೀಲ 
ವಿಜಯಪುರ