ರಂಗ ಸಂಘಟನೆ ಮತ್ತು ಸೃಜನಶೀಲತೆ ಬಗ್ಗೆ ಈ ಬಾರಿ ಕಾಡುತ್ತಿರುವ ಅಂಶ ಎಂದರೆ ಒಂದು ಸಂಘಟನೆಯ ಆನ್ಲೈನ್ ಮತ್ತು ಆಫ್ಲೈನ್ ದಾರಿ ಗಳಲ್ಲಿ ಸೃಜನಶೀಲತೆಯ ಮಾದರಿಗಳ ಆವಿ ಷ್ಕಾರಗಳನ್ನ ಹುಡುಕುವದು.

ಇದರಲ್ಲಿ ವಿಶೇಷ ಅಂದರೆ ಈ ಕೋವಿಡ್19ರ ಪೂರ್ವಕಾಲದಲ್ಲಿ ಆನ್ ಲೈನ್ ಅನ್ನೋದು ಇರಲೇ ಇಲ್ಲ. ಇದ್ದ ರೂ ಸಹ ಅದು ಹೆಚ್ಚಿಗೆ ಉನ್ನತ ಶಿಕ್ಷಣ ದ ಮಟ್ಟಿಗೆ ಅದೂ ಸಹ ಸೀಮಿತ ಕೆಲ ಸಂಸ್ಥೆ ಗಳಿಗೆ, ಕೆಲವು ದೇಶಕ್ಕೆ ಮೀಸಲಾ ಗಿತ್ತು. ಆದರೆ ಕೋವಿಡ್19 ಎಲ್ಲವನ್ನೂ ಕ್ರಾಂತಿ ಕಾರಿ ಬದಲಾವಣೆ ಕಾಣು ವಂತೆ, ಕಾಣಲು ಪರಿ ತಪಿಸು ವಂತೆ ಮಾಡಿತು. ಸುಮಾರು 98 ಪ್ರತಿಶತ ಕಲಾವಿದರಿಗೆ ಅಂತರ್ಜಾಲ ತಂತ್ರಜ್ಞಾನ ಗೊತ್ತಿ ರಲಿಲ್ಲ, ಕೆಲವರಿಗೆ ಯೂಟ್ಯೂಬ್ ಗಳಲ್ಲಿ ತಮ್ಮ ನಾಟಕ ಹೇಗೆ ಮಾಡಿಕೊಳ್ಳಬೇಕೆಂಬು ದರ ಬಗ್ಗೆ ಇತರರನ್ನು ಅಂದರೆ ಗೊತ್ತಿದ್ದ ವರನ್ನ ಅವಲಂಬಿ ಸಿ ಮಾಡಿಕೊಳ್ಳು ವದು ಮಾತ್ರ ಗೊತ್ತಿದ್ದರೂ ಅವರೂ ಸಹ ಅದರ ವಿಸ್ತೃತ ಲಾಭ ಪಡೆಯುತ್ತಿರ ಲಿಲ್ಲ. ಅಲ್ಲಿ ಸಹ ಒಂದು ಶೋಷಣೆಯ ಬವಣೆ ತಪ್ಪುತ್ತಿರಲಿಲ್ಲ. ಬ್ಲಾಗ್ ಲೇಖನ ಗಳು, ಅಂತರ್ಜಾಲ ಸಂಚಿಕೆಗಳು ಮುದ್ರಣ ಸಂಬಂಧಿ ವೆಚ್ಚ ಕಡಿಮೆ ಮಾಡಿದರೂ ಖಂಡಿತ ವಾಗಿಯೂ ಹೆಚ್ಚು ಜನ ಲೇಖಕರು ಪ್ರಕಟವಾದರು.

ಈ ಎಲ್ಲ ಹೆಚ್ಚು ಜನ ಲೇಖಕರಿಗೆ ತಂತ್ರಜ್ಞಾನ ದ ತಳಾ-ಬುಡಾ ಗೊತ್ತಿರ ಲಿಲ್ಲವಾದರೂ ನೋಡಿ, ಕಾಡಿ, ಬೇಡಿ ಓದಿ, ಮಕ್ಕಳು ಮೊಮ್ಮಕ್ಕಳು ಸಹಾ ಯದಿಂದ ಮಾರ್ಜಿನಲ್ ಆಗಿ ಸುಧಾರಿಸಿಕೊಂಡ ರು. ಯಾಕೆಂದರೆ ಅಂತಹ ಕಲಿಕೆ ಅನಿವಾರ್ಯ ವಾಗಿತ್ತು ಬ್ಯಾಂಕ್ ನೌಕರರು ಹೊಂದಿಕೊಳ್ಳಲಾ ರದವರು, ನಿವೃತ್ತಿಗೆ ಸಮೀಪ ಇದ್ದವರು ಬಂಗಾರ ದ ಹಸ್ತಲಾಘವ ಪಡೆದು ಹೊರ ಬಂದರು ಏನೂ ತಿಳಿಯಲಾಗ ದವರು ಉಳಿದು ಅನುಭವಿಸುತ್ತ ಪರಿ ತಪಿಸುತ್ತ ಕಲಿತರು. ಗೊತ್ತಿದ್ದವರು ಹೊಸ ಅವಕಾಶ ಹೊಸ ಲಾಭಕ್ಕಾಗಿ ಹೊರ ಬಂದರು. ಇದೆಲ್ಲಾ ಯಾಕೆ ಅಂದ್ರೆ, ಯೋಗ್ಯತೆ ಇದ್ದವರಿಗೆ ಅಸ್ತಿತ್ವ ಅನ್ನೋ ತತ್ವ. ಆದರೆ ರಂಗಭೂಮಿಯ ಲ್ಲಿದ್ದವರಿಗೆ ಹೆಚ್ಚಿನವ ರಿಗೆ ಸಾಂಪ್ರದಾ ಯಿಕ ಜ್ಞಾನ ಬಿಟ್ಟರೆ ಬೇರೆ ತಂತ್ರ ಜ್ಞಾನ ಗೊತ್ತಿರಲಿಲ್ಲ. ಹೀಗಾಗಿ ಕೋವಿಡ್ 19 ಸುನಾಮಿ ಗತಿ ಬಂದೆರ ಗಿದಾಗ, ಕಲಾವಿದರು ತಲೆಮೇಲೆ ಕೈ ಹೊತ್ತು ಕೂತಾಗ ಸೃಜನಶೀಲತೆಯ ಬಲ ಯಾವ ಕಲಾ ವಿದರಿಗೆ ಇದೆಯೋ ಅವರು ಮಾತ್ರ ತಮ್ಮ ಹೃದಯದ ಬಡಿತ ತುಡಿತ ಮಿಡಿತ ಸರಿ ಹೊಂದಿಸಿ ಕೊಳ್ಳುತ್ತ ಸಾಗಿದರು.

ಪ್ರದರ್ಶಕ ಕಲೆಗಳಲ್ಲಿ ಕಲಿಯುವದು, ಅಭಿವ್ಯಕ್ತಿ ಗೊಳಿಸುವದು ಅದಕ್ಕೆ ಗೌರವ, ಧನ ಪಡೆಯು ವದು ದೊಡ್ಡ ಸವಾಲು. ಹೇಗೆ ಗೌರವಧನ ನಿಗದಿ ಪಡಿಸುವದು? ಸರ್ಕಾರದ ಪ್ರಸಾರ ಭಾರತಿ ಮಾಡಿದ ವರ್ಗಿಕರಣದ ಮೇಲೆಯೇ, ಅಥವಾ ಜನಪ್ರಿಯತೆಯ ಮೇಲೆಯೋ, ಅಥವಾ ಕಾರ್ಯ ಕ್ರಮ ಉಚಿತವೋ, ಟಿಕೆಟ್ ಇದ್ದರೆ ಎಷ್ಟು ಬೆಲೆ ಯ ರೇಂಜು? ಸಭಾಗ್ರಹದ ಬಾಡಿಗೆಯ ಮೇಲೋ?

ಇದರಲ್ಲಿ ಆಫಲೈನಿದ್ದರೆ ಒಳ್ಳೆಯದು ಅಂತ ಹೆಚ್ಚು ಜನ ಕಲಾವಿದರು ಬಯ ಸತಾರೆ ಅದಕ್ಕೆ ಅವರು ಕೊಡುವ ಸಮರ್ಥನೆ ಹೇಗಿರಬಹುದು? ಅದು ಜೀವಂತ ಅನುಭವ, ಸ್ಪಂದನೆ, ಮುಖಾ ಮುಖಿ ಆನಂದ, ಮತ್ತು ಪ್ರೇಕ್ಷಕರ ಸಂಖ್ಯೆ, ಅವರು ನೀಡುವ ಚಪ್ಪಾಳೆ, ಹಸ್ತಾಕ್ಷರ, ಸೆಲ್ಫಿ ಹಪಾಪಿಗಳು ತಮಗೆ ಗೊತ್ತಿಲ್ಲದೆ ಸ್ರಷ್ಟಿಸುವ ಭ್ರಮಾಲೋಕ, ಅಹಮಿಕೆ ಮನೋಭಾವ, ಆತಿಥ್ಯ ಮೇಜವಾಣಿ ಗಳು, ವಿಮಾನ, ಟ್ಯಾಕ್ಷಿ ಹಸ್ತಲಾಘವ ಪಾದ ಮುಟ್ಟಿ ನಮಸ್ಕರಿ ಸುವ ಪ್ರೀತಿ- ಸಂಪ್ರೀತಿಗಳು ಹೀಗೆ ಒಂದೇ ಎರಡೇ? ಇವಾವೂ ಆನ್ಲೈನ್ ದಲ್ಲಿ ಸಿಗುವದಿಲ್ಲ. ಅದಕ್ಕಾಗಿ ಆನ್ಲೈನ್ ಕಾರ್ಯಕ್ರಮ ಸೋವಿ ಆಗುತ್ತದೆ, ಕೆಲವೊಮ್ಮೆ ಉಚಿತವೂ ಕೂಡಾ. ಹೀಗಾಗಿ ಸಂಘಟಕರಿಗೂ ಆನ್ಲೈನ್ ಸರಳವಾದರೂ ಕೂಡಾ ಕೆಲವು ಸಂಘಟಕರಿಗೆ ಹೆಚ್ಚು ಖರ್ಚು ಮಾಡು ವದು, ವೇದಿಕೆ ಮೇಲೆ ಸುಕಾಸುಮ್ಮನೆ ವಿಜೃಂಭಿಸುವದು, ಹೊಗಳಿಕೆ ಪತ್ರಿಕಾ ಗೋಷ್ಠಿಗಳು ಎಲ್ಲವೂ ಬೇಕಾಗಿರುತ್ತವೆ. ದೃಶ್ಯ ವೈಭವಗಳು ಮೊಬೈಲ್, ಟೆಲಿವಿಷನ್, ಕಂಪ್ಯೂಟರ್ ಪರದೆಗಿಂತ ದೊಡ್ಡದಾಗಿ ಅನಿಸುವ ರಂಗವೇದಿಕೆ ಚೋಲೋ ಅನಿಸುವದು ಸಹ ಇದರಲ್ಲಿ ಅಡಕವಾಗಿರುತ್ತವೆ.

ಹೀಗಾಗಿ ಸೃಜನಶೀಲತೆಯ ಹೊಸ ಹುಡುಕಾಟ ಗಳು ಆಫ್ ಲೈನ್ ದಲ್ಲಿ ಹೆಚ್ಚು ಅವಶ್ಯಕವಾಗು ತ್ತವೆ. ಇತ್ತೀಚಿನ ದಿನಗಳಲ್ಲಿ ಅಭಿನಯ ಭಾರತಿ 2019ರ ಮೇ 22 ರಿಂದ ಫೇಸ್ಬುಕ್ ಆನ್ ಲೈನ್ ಮಾಧ್ಯಮ ತನಗೆ ಗೊತ್ತಿರುವ ಇತಿ ಮಿತಿಯಲ್ಲಿ ಸೃಜನಶೀಲತೆಯಿಂದಾ ಚಟುವಟಿಕೆ ತನ್ನದೇ ರೀತಿ ಯಲ್ಲಿ ಉಚಿತವಾಗಿ ಆರಂಭಿಸಿದ ನಂತರದ ದಿನ ಗಳಲ್ಲಿ ಪತ್ರಿಕಾ ಮಾಧ್ಯಮದವರು ತಮ್ಮದೇ ಸ್ಟೈಲ್ ದಲ್ಲಿ ಆರಂಭಿಸಿದ್ದು ಈಗ ಹಳೆಯ ಸುದ್ದಿ. ಇನ್ನೂ ಏನೇನು ಹೊಸದು ಆನ್ಲೈನ್ ದಾರಿಯಲ್ಲಿ ಮಾಡ ಬಹುದು ಅಂತ ಮುಂದಿನ ವಾರ ನೋಡೋಣ. (ಸಶೇಷ)
✍️ಅರವಿಂದ ಕುಲಕರ್ಣಿ
ರಂಗಭೂಮಿ ಚಿಂತಕರು,ಧಾರವಾಡ