(ನಿಷ್ಠ ಬದುಕು-ಸಾರ್ವತ್ರಿಕ/ಎಂದೂ ಸ್ವಗತವಲ್ಲಾ!)
ಖಂಡಿತಾ- ಇರೋದ್ಬೇಡ ಬೇರೇವ್ರು ನನ್ನ ಹಾಗೆ
ಅದು ನಿಜವೇ- ಯಾಕಿರ್ರ್ಬೇಕು ಬೇರೇವ್ರಂಗೆ
ಆಯ್ತು ಸರೀಪ್ಪಾ- ಇರಲಿ ಅವ್ರು ಅವರ ಹಾಗೆ
ದೇವ್ರಾಣೆಗೂ- ನಾನೇ ಇರ್ತೀನಿ ಇದ್ಹಾಂಗೆ.
ಕೇವ್ಲ ನಂಗಲ್ಲಾ- ಗೊತ್ತಿದೆ ಇಡೀ ಜಗತ್ತಿಗೆ
ಯಾವುದೇ ಒಂದು ಬೆರಳು ಇಲ್ಲ ಇನ್ನೊಂದ್ರಂಗೆ
ಯಾವ-ಹೋಲ್ಕೆನೂ ಇಲ್ಲ ಯಾವ್ದೇ-ಎರಡಿಗೆ
ಒಂದಿರೋದೇ ಇಲ್ಲ ಇನ್ನೊಂದ್-ಇದ್ದಂಗೆ
ಬೇಕಿಲ್ಲ, ಇರ್ಬೇಕ್ಯಾಕೆ ಮೇಲ್ಬಿದ್ಹಾಂಗೆ
ಇಷ್ಟ-ಪಟ್ಟು ಬೀಳೋಕ್ವರ್ಮೇಲ್ ಹುಚ್ಚಾನನ್ಗೆ
ಅವರ್ಕಂಡ್ರೆ ಇವರ್ಕಂಡ್ರೆ ಇಲ್ಲಾ ಯಾವ್ಹಗೆ
ಇವರ್ಕಂಡ್ರೂ ಅವರ್ಕಂಡ್ರೂ ಹಾಗೇ ನಂಗೆ
ಏನಾದ್ರೂ ಇದ್ರೆ-ತಾನೆ ಒಂದ್ಚೂರು ಹಗೆ-ಬೇಗೆ
ಕೂಡಲೆ ಹುಟ್ಟೋದು ಬೇಡ್ವೇ-ಬೇಡ್ದ ಬೆಂಕಿ-ಹೊಗೆ
ಆಗ್ಲೂ ಈಗ್ಲೂ ಯಾವಾಗ್ಲೂ ನನ್ಬದ್ಕು ಒಂದೇ ಬಗೆ
ಅಂದು-ಇಂದೂ ಎಂದೆಂದೂ ನಂದು ಒಂದೇ ನಗೆ
ಹೌದ್ರಣ್ಣಾ ಹೌದು, ನಾನಿರೋದೇ ಹೀಗ್ಹಿಂಗೇ
ನನ್ಮಟ್ಟಿಗ್ಮಾತ್ರ- ನನ್ಹಾಳತಕ್ಕೆ ಮೇಲಿರೋವ್ನು ಮಡಗ್ದಂಗೆ
ಬಡವಂಗೆ ಎಲ್ರುಸೇರ್-ಸರ್ಯಾಗಿ ನಾಲಕ್ಕು ಮಡ್ಗಿದ್ಹಾಂಗೆ
ನಿಂತ್ಕಾಲಲ್ಲೆ ಏಕಾಏಕಿ ಬದಲಾಗ್ಬೇಕಂದ್ರೆ ಹ್ಯಾಗೆ- ಹೆಂಗೆ
ನೀವೇ ಹೇಳಿ- ನನ್ಪಾಡಿಗ್ನಾನ್ ಇರ್ಬಾರ್ದೇನ್ಹಿಂಗೆ
ಈ ಬಾಳೈತಲ್ಲಾ- ಅದು ಅವ್ರರ್ರು ಕಂಡ್ಕಂಡ್ಹಾಂಗೆ
ನನ್ಜೀವನ, ಬಾಳು ನಾ-ಕಂಡ್ಹಾಗೆ- ನಾನಿದ್ಹಾಂಗೆ
ಅವ್ರವ್ರ ಜೀವ್ನ ಅವ್ರು ಬದುಕ್ದಾಂಗೆ, ನಂಬಿದ್ಹಾಂಗೆ
ನೋಡಿ ಸಾರ್, ಒಂದ್ಮಾತು-ಮೂರ್ನಾಲ್ಕು ಕತೆಗೆ
ಹೇಳಿ, ಇಡೀ ಜೀವ್ನ ತೊಡಗಿಸ್-ಕೊಂಡ್ಬಿಡಬೇಕ ಹೆಂಗೆ
ಆಯ್ತಾ, ಅಷ್ಟೆ ಅಲ್ಲ, ಅದು-ಇದೂ ಖಚಿ೯ಲ್ದ ಚಚೆ೯ಗೆ
ಕಾವ್ಕೊಟ್ಕೊಂಡ್-ಕೇಳ್ದ ಮಳೆಗಾಲ್ಗಳ ಕಂತ್ಕಂತೆ ವ್ಯಥೆಗಳ್ಗೆ
‘ವಿಷ್ಯಾ’-ಧಾರಿತ ಯಾರ್ಯಾರ್ದೊ ಹಾದರ್ದ-ತರ್ಲೆಗಳ್ಗೆ
ಅವ್ರು-ಇವ್ರು-ಹೇಳ್ಕೊಳ್ತಿದ್ದ ತಂತಮ್ಮ ತಕ್ರಾರುಗಳ್ಗೆ
ಕೊಂಚೇಕೊಂಚ ಎಳ್ಳಷ್ಟೇ ಒಪ್ಪಿತ-ಸ್ಥಾಪಿತ ನಿಷ್ಠೆಗಳ್ಗೆ
ಅವ್ರಿವ್ರು ತಗ್ಗಿ-ಬಗ್ಗಿ-ನಡೆದ-ಜೀಹುಜೂರ್ಚೇಷ್ಟೆಗಳ್ಗೆ
ಆಯ್ತು, ತಕೋಳ್ಳಿ, ಒಂದಿಪ್ಪತ್ಮೂವತ್ಜೋಕುಗಳ್
ಇನ್ನೂ ಬೇಕಾ, ಅಲ್ಲಿಲ್ಲಾಡ್ದ ಕುಚೋದ್ಯ-ಕುಹಕ ವ್ಯಂಗ್ಯಗಳ್ಗೆ
ಎಲ್ಲೋ ಹೆಂಗೆಂಗೋ ಕೊಟ್ಬೇಜಾ೯ ಪೋಸ್ಗಳ್ಗೆ
ಅವ್ರಿವ್ರು ಹಿಡ್ಕಂಡಿರೋ ಸೆಲ್ಫಿ-ಗ್ರೂಪ್-ಫೋಟ್ಗೋಳ್ಗೆ
ಪರಸ್ಪರ ನಂಬ್ಕೋಂಡೇ-ಬಿಟ್ಟ ಕುಡಿ-ಕಣ್ಣೋಟಗಳ್ಗೆ
ನಿರಂತರತೆಯ ತೃಣ– ಒಣ ಮಾತುಗಳು
ಅಲ್ಲೊಂದಿಲ್ಲೊಂದು ಎದ್ದೋದ್ಬಿದ್ಹೋದ್ಮಾತಿಗೆ
ವಿಟ-ವ್ಯಾಮೋಹೀ-ಭಗಿನಿಯರ್ಗೆ ಮಾಡ್ದುಪದೇಶಗಳ್ಗೆ
ಹೆಣ್ಬಾಕ-ನಿಷ್ಠ-ಕೃತ-ಕನಿಷ್ಠ-ದರಿದ್ರ-ದುರ್ನಡೆ-ಗಳ್ಗೆ
ಆ ದಿಟ್ಟ-ಹೆಣ್ ಕೇಳ್ಕೊಂಡ exemption-ನ್ನುಗಳ್ಗೆ
debauchery-ಗೆ ರಿಯಾಯ್ತಿ ಬೇಡ್ದ ಆ-ಪಾಪದ್ಹೆಣ್ಗೆ
ಅವಳಕ್ಕ ತೋರಿಸ್ಬಿಟ್ಪ hi-tech-hypocritic-ಟ್ರಿಕ್ಕುಗಳ್ಗೆ
ಸಹಸ್ರನಾಮದೊಡತಿ-‘ಬಳಸ್ಕಂಡ’- ಜಾಣ- ರೀತಿಗಳ್ಗೆ
ಒಣ-ವೇದಾಂತಿ-ಕೇದಾರನಾಥನ ಕೃತ-ಘ್ನ-ತೆಗಳ್ಗೆ
ಕಡು ಒರಟ-ಕಟುಕ-ತಿರುಪ್ತಿ-ವೆಂಕ್ಟನ ಕೃತ್ತಿಮತೆಗಳ್ಗೆ
ಮಧ್ಯಸ್ಥ-ಗೋವಿಂದ-ಪಾದಾರವಿಂದನ ತಪ್ಹೆಜ್ಜೆಗಳ್ಗೆ
ಮಡಕ್ಶಿರ-ವಣಕುದ್ರೆ-ಗೋಣ್ರಾಜನ ಒಣಮಾತ್ಗಳ್ಗೆ
ಸಂತ ಏಸುವಿಗೇ ಮಸಿಬಳ್ದ KGF & Kerala ಕಸಿನ್ಸಗಳ್ಗೆ
stagnant-ಸ್ಟೆನೊ-ಸತ್ಯನ ನಯವಂಚನಾ ಕುಯುಕ್ತಿಗಳ್ಗೆ
‘ಸತ್ಯವೇ-ನಮ್ದೇವ್ರು’-ವೇಶ-ಕೇಶ-ನವನೀತ- ಸವಿನುಡಿಗಳ್ಗೆ
ಖಂಡಿತಾ-100%-ನಂಬಿಯೇಬಿಟ್ಟ ಆ ಕೆಟ್ಟ-ಗಳಿಗೆಗಳ್ಗೆ
ಎಲ್ಲರ್ನು ಗೆದ್ದಾ-collars up-ಆತ್ಮಾನಂದ ಭಾವನೆಗಳ್ಗೆ
ಕಡೆಗೂ ಕಣ್ಬಿಟ್ಟು, ಕಂಡೇ-ಬಿಟ್ಟ ಕರ್ಬೆಕ್ಕುಗಳಾ ಕು-ಕ್ಷಣಗಳ್ಗೆ
ಎಲ್ಲೂ ಎಂದೂ ರಿಜಿಸ್ಟರ್ರಾಗ್ದಿದ್ದ honest ಸನ್ನಡ್ತೆಗಳ್ಗೆ
ಸತ್ತಿದ್ರೂ ಮರೆತ್ರೂ ಇನ್ನೂ burial ಆಗದೆಲ್ಲಾ-ಗಳಿಗೆಗಳ್ಗೆ
‘trust-me’/’ದೇವ್ರಾಣೆ’/ಇತ್ಯಾದಿ grand ಶೋ-ಗಳ್ಗೆ
“ಉರೀತಿರೋ ಸೂರ್ಯನ ಪಾದದಾಣೆಗೆ”-ಎಲ್ಲಾಣೆಗಳ್ಗೆ
ಎಂದೋ ಆಯ್ತು, ಒಂದ್-big bye-ಬೀಳ್ಕೊಡುಗೆ
ಉಸಿರ್ಕೆಡಿಸೋ-ಕೆಟ್ಧೂಳು ಝೂಡ್ಸಾಸ್ಕಿದ್ಹಾಗೆ
ಇನ್ನು ಮತ್ತೆ ಮತ್ತೆ ಎಂದೆಂದೂ ವಾಪ್ಸಾಗದ್ಹಂಗೆ
“ನಮಸ್ಕಾರ, ಇನ್ಮುಂದೆ ಇನ್ಬರ್ಬೇಡಿ ಈ-ಕಡ್ಗೆ
ಮರೆತ್ಬಿಟ್ರಾ, ಬರ್ತಿದ್ರಿ, ನೆನಪಿದ್ಯಾ, ಬೆಳ್ಬೆಳಿಗ್ಗೇ?”
ಏನೂ ಎಂಥದ್ದೂ ಯಾವ್ಬಾಕಿಯಿಲ್ಲ ಈಗ್ನಮ್ಮೊಳ್ಗೆ
ಸಂಪೂರ್ಣ-ಋಣಮುಕ್ತನಾನ್ ಯಾವ್ದೋಗಳ್ಗೆ
ಸಾವಿಗ್ಮುಂಚೇನೆ-ಸ್ನಾನವು, ಸೂತಕವಿನ್ಯಾರಿಗೆ ?
ನಿಜ ಬದುಕು ಸದಾ ಹರಿಯೋ ನೀರು-ನಿಲ್ಲದೇನೆ
you can’t step into the same river again
ಈಗ್ಮುಟ್ಟಿದ್ದು ಒಂದ್ನದಿ, next ಮುಟ್ಟಿದ್ದುಬೇರೇನೆ
ಮೊದಲ್ಮುಟ್ದೊನು ಆಮೇಲಿನವ್ನು ಬೇರ್ಬೇರೇನೆ
ಮೊದಲ್ಮುಟ್ಟಿದ್ನದೀ ಹರಿದ್ಹೋಗಿರತ್ತೆ-ಹಾಗೇ ಪ್ರಜ್ಞೆನೂ
ಮೊದಲ್ಮುಟ್ದೋನು ಈಗ ‘ನೀರ’- ಹೆಚ್ಚು ತಿಳಿದೋನು.
ಹುಟ್ಟು, integration : death, ವಿಘಟನೆ, ಅಷ್ಟೆ ಅಲ್ವೆ
ಹುಟ್ಟಿಗ್ಮುಂಚೆ ಗೊತ್ತಿಲ್ಲ, ಸಾವಿನ್ನಂತರ-ಇಲ್ಲ, ನಿಜ ಅಲ್ವೆ
ಎರಡು “ಗೊತ್ತಿಲ್ಲ” ನಡುವೆ, ಯಾಕ್ಬೇಕು ತಕರಾರ್ಗಳು
“ಪ್ರಜ್ಞೆ ಹರೀತಾಯಿರತ್ತೆ”-ಎಷ್ಟೇ ಏನೇಯಿದ್ರು ಗೋಳ್ಗಳು
ನಾವೆಲ್ಲ mere thoughts, memories ಅಷ್ಟೇ ಕಣ್ರಿ
ಅದ್ರಲ್ಯಾಕೆ ಹಿಡ್ಕೋತೀರಿ ಒಂದೋಂದ್ಬಾವುಟ, ಸರಿ-ಏನ್ರಿ
ಯಾರೋ ಬರೆದ್ನಾಟಕದಲ್ಲಿ ನಮ್ದೆಲ್ಲಾ ಒಂದೊದ್ಪಾತ್ರಾರಿ
ಕೆಟ್ನಾಟ್ಕ- ಒಳ್ಳೆ ಪಾತ್ರ/ಒಳ್ಳೆ ನಾಟ್ಕ- ಕೆಟ್ಪಾತ್ರ–ಬದ್ಕಷ್ಟೇರಿ
ಈ ಮಹಿಮರು ಈ ಮುಂಚೆ ಹೀಂಗೆ ಗುರ್ತಿರಲಿಲ್ಲಾ
ಇನ್ಮುಂದೆಯಂತೂ ಕಡಾ-ಖಂಡಿತಾ ಬೇಕಾಗಿಲ್ಲಾ
ಇವರ್ಜತೆ ಅದು-ಇದು-ಯಾವ್ದೂ ಬದ್ಕೆ ಆಗಿರ್ಲಿಲ್ಲ
ಯಾರ್ಗೂ ಒಂಥರ ಅದ್ಸಂಬಂಧ್ವೆ ಅನ್ಸಿರಲಿಲ್ಲಾ
ಹುಟ್ಟಿದ್ದು ಓದಿದ್ದು ಬೆಳ್ದಿದ್ದು ಅರಳಿದ್ದು ಲೆಕ್ಕಾನೆ-ಅಲ್ಲಾ
ಕಲಿತಿದ್ದು, ಕಲಿಸಿದ್ದು, ಉಳ್ಸಿದ್ದು, ಕಳ್ದಿದ್ದು ಎಲ್ಬರ್ದಂಗೈತೆ
ಇಡೀ ಸರ್ಕಸ್ ನಾನ್ಗೆದ್ದಾಗ ಉರಿ-ಉರಿದೋದಂಗೈತೆ
ನಾನಿಲ್ದಾಗ ಕದ್ದು-ಮುಚ್ಚಿ ಎಲ್ಲಾರ್ಗೂ ಸಿಹಿಹಂಚ್ದಂಗೈತೆ
ಆಯ್ತು ಸಾರ್- ಅವಬಾ೯ಳು ಅವರ ಹಾಗೇ
ಸರಿಯೇ- ನನ್ನ ಬಾಳು ನನ್ನ ಹಾಗೆ, ಅದ್ಹಿಂಗೇ
ಖಂಡಿತಾ- ಅವರೆಂದೂ ನನ್ಹಾಂಗೀರದ್ಬೇಡ
ನಿಜಕ್ಕೂ- ನಾನಿದ್ಹಾಂಗೆ ಇರ್ತೀನಿ ನೋಡ
ಯಾರೇ ಒಪ್ಲಿ ಬಿಡ್ಲಿ- ಇದೇ ನನ್ನ ಪಾಲಿನ-ಪಾಡು
ಕೇಳಿ- ಹಾಡೇಬಿಡ್ತೀನಿ ನಂದೇ-ಧ್ವನೀಲಿ-ನನ್ಹಾಡು
ಯಾಕ್ಬೇಕು ? ಬೇಡ. ಬೇರೇವ್ರು ನನ್ನ ಹಾಗೆ
ಖಂಡಿತಾ, ಇದ್ಮುಗಿದ್ಹೋಗ್ತೀನಿ ಹೆಸ್ರು-ಉಳಿಸ್ಕೋಡ್ಹಾಗೆ
✍️ಶ್ರೇಯಸ್ ಪರಿಚರಣ್