ಸೃಷ್ಟಿಯಲ್ಲಿರುವದೆಲ್ಲ ಸುಂದರ
ದೇವನೆಂಬ ಕಲಾಕಾರ
🥭
ವಿವಿಧ ಜೈವಿಕ ಉತ್ಪನ್ನಗಳ ಚತುರ
ನಕಲು ಸುಲಭವಲ್ಲದ ವಿಚಾರ
🥭
ಮಾವಿನ ಕಾಯಿಗಳಿಂದ ತುಂಬಿದ ಗೊಂಚಲ ನೋಡಲೇ ಸುಂದರ! *
🥭
ಚೈತ್ರ ಆಗಮಿಸಿದೆ
ಮಾವು ಕೊನರಿ ಕಂಗೊಳಿಸಿದೆ
🥭
ತೆನೆ ತುಂಬಿದ ಗಿಡವದು ನಳನಳಿಸಿದೆ
ಕಣ್ಣಿಗೆ ತಂಪು ಮನಕೆ ಮುದವದು*
🥭
ಹಣ್ಣುಗಳ ರಾಜ ಮಾವು
ಅದೆಷ್ಟು ಬಗೆಗಳು ನೋಡಿ ನೀವು
ಅಪ್ಪೆ ಮಿಡಿ ನೋಡಲೇ ಚಂದ
ರುಚಿಯದು ಮಹದಾನಂದ
🥭
ಜೀರಿಗೆ ಮಾವು, ತೋತಾಪುರಿ ಮಾವಿನ ಅಂದವೇ ಅಂದ
🥭
ಗೊಜ್ಜು, ಪಳುವು ಉಪ್ಪಿನಕಾಯಿ,ಚಟ್ನಿ
ಚಿತ್ರಾನ್ನ ಅದೆಷ್ಟು ವಿಧವು
🥭
ಮಾವಿನಿಂದ ಮಾಡಿದ ಅಡುಗೆ ಅದೆಂಥ ರುಚಿಕರವು!
🥭
ಆರೋಗ್ಯಕರವು ಜೀಣೋ೯ತ್ತೇಜಕವು*
ಲೊಚಗುಟ್ಟುತ ತಿನ್ನುವದೇ ಮಜವು
🥭
✍️ಶ್ರೀಮತಿ ರೇಖಾ ನಾಡಿಗೇರ
ಹುಬ್ಬಳ್ಳಿ