ಯಕ್ಷಿಣಿ ನಾಚುವ ವೃಕ್ಷದ ಹೂನಗೆ
ನಳನಳಿಸುವ ಹಸಿರಿನ ಜೀವಕಳೆ
ಗಂಧರ್ವ ಲೋಕದ ಸುಗಂಧ ಸುಮೆ
ನಾಕವು ಈ ಧರೆ ಝೆಂಕಾರ ನಾದಕೆ
ಬಸಂತನ ವಿಧವಿಧ ಅಭ್ಯಂಜನಕೆ
ಬಳುಕುವ ಬಣ್ಣದ ಹೂ ಕುಂಚಕೆ
ಸಿದ್ದವು ನವವಧುವಿನ ಸಿಂಗಾರಕೆ
ಪುಳಕವು ಇಳೆಯು ಈ ಮೈಮನಕೆ
ನವರಸದಲಿ ಮಿಂದೇಳುವ ಧರೆಗೆ
ಶೃಂಗಾರದ ಅಮಲೇರಿದೆ ತಲೆಗೆ
ವಿಚಿತ್ರ ವಿಸ್ಮಯವೀ ಅವತರಣಿಕೆ
ಹೊಸ ಮುನ್ನುಡಿ ಇದು ಮನ್ವಂತರಕೆ
✍️ಶ್ರೀಮತಿ.ಗಿರಿಜಾ ಮಾಲಿಪಾಟೀಲ ಸಂಸ್ಥಾಪಕ ಅಧ್ಯಕ್ಷರು
ಶ್ರೀಸಿದ್ದೇಶ್ವರ ಸಾಹಿತ್ಯ ವೇದಿಕೆ ವಿಜಯಪೂರ