ಗಗನ ಎರಚಿದೆ
ಶರಧಿ ವದನಕೆ
ನೀಲಿ ಬಣ್ಣ..!

ಮೂಡಣದ ರವಿ
ಬೀರಿಹನು ಬಾನಿಗೆ
ಕೆಂಪು ಬಣ್ಣ..!

ನಿಸರ್ಗ ಬಳಿದಿದೆ
ಗಿಡ-ಮರಗಳಿಗೆ
ಹಸಿರು ಬಣ್ಣ.!

ಬೆಳದಿಂಗಳ ಶಶಿ
ಹರಡಿಹನು ಭುವಿಗೆ
ಬಿಳಿಯ ಬಣ್ಣ..!

ವರುಣ ಮೂಡಿಸುವ
ಲೋಕಕಣ್ಣಿಗೆ ಇಂದ್ರಚಾಪ
ಸಪ್ತವರ್ಣ ಬಣ್ಣ..!

ಇಳೆಯ ಕಣಕಣದಿ
ತುಂಬಿ ತುಳುಕಿದೆ
ಬಗೆ-ಬಗೆ ಬಣ್ಣ..!

ಜಗದಲಿ ನಿತ್ಯವೂ
ರಂಗುರಂಗಿನ ಹೋಲಿ.!
ಬಣ್ಣಗಳ ಜೋಕಾಲಿ..!

✍️ಎ.ಎನ್.ರಮೇಶ್. ಗುಬ್ಬಿ