ರಾಜ್ಯದ ದೇವಾಲಯದ ಶಿಲಾ ಲೋಕದಲ್ಲಿ ಹಲವು ಊರಿನಲ್ಲಿ ದೇವಾಲಯಗಳ ವೈಭವ ಗಳು ಸಾಗಿ ಬಂದಿದೆ. ಹಲವೆಡೆ ಶೈವ ದೇವಾಲ ಯಗಳು,ವೈಷ್ಣವ ದೇವಾಲಯಗಳ ನಿರ್ಮಾಣ ವಾಗಿದ್ದರೆ ಹೊಯ್ಸಳರ ಕಾಲದಲ್ಲಿ ಹಲವು ಊರಿ ನಲ್ಲಿ ಎರಡು ಪ್ರತ್ಯೆಕ ದೇವಾಲಯಗಳ ನಿರ್ಮಾ ಣದ ಪರಿಕಲ್ಪನೆ ನೋಡಬಹುದು. ಇಂತಹ ಸುಂದರ ದೇವಾಲಯಗಳಲ್ಲಿ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನಲ್ಲಿರುವ ಜೋಡಿ ದೇವಾಲಯಗಳು ಪ್ರಮುಖ ಎನಿಸು ತ್ತದೆ.  ಇಲ್ಲಿನ ಸೋಮೇಶ್ವರ ಹಾಗು ಲಕ್ಷ್ಮೀ ನರಸಿಂಹ ದೇವಾಲಯಗಳಲ್ಲಿ ಶ್ರೀಲಕ್ಷ್ಮೀ ನರಸಿಂಹ ದೇವಾಲಯದ ಪರಿಚಯ.

ಹೊಯ್ಸಳರ ಕಾಲದಲ್ಲಿ ಪ್ರಮುಖ ಅಗ್ರಹಾರ ವಾಗಿದ್ದ ಇದರ ಪ್ರಾಚೀನ ಹೆಸರು ಹಾರ್ವನ ಹಳ್ಳಿ. ಇದು ಕ್ರಮೇಣ ಹಾರನಹಳ್ಲಿಯಾಗಿ ಬದ ಲಾಗಿದೆ. ಶಾಸನಗಳಲ್ಲಿ ಲಕ್ಷ್ಮೀ ನರ ಸಿಂಹಪುರ ಎಂದು ಕರೆಯಲ್ಪಡುತ್ತಿದ್ದ ಈ ಗ್ರಾಮವು ಸುಮಾರು 1882ರವೆರೆಗೂ ತಾಲ್ಲೂಕು ಕೇಂದ್ರ ವಾಗಿತ್ತು. ಸುಮಾರು 1234 ರಲ್ಲಿ  ಹೊಯ್ಸಳ ದೊರೆ ಎರಡನೇ ನರಸಿಂಹನ ಆಳ್ವಿಕೆಯಲ್ಲಿ ನಿಜೇಶ್ವರ ಭಟ್ಟ, ಸಂಕಣ್ಣ, ಮತ್ತು ಗೋಪಣ್ಣ ತಮ್ಮ ತಂದೆಯ ನೆನಪಿನಲ್ಲಿ ನಿರ್ಮಿಸಿದ ಈ ಲಕ್ಷ್ಮೀ ನರಸಿಂಹ ದೇವಾಲಯ ಹೊಯ್ಸಳರ ನಿರ್ಮಾಣ ಸುಂದರ ದೇವಾಲಯಗಳಲ್ಲಿ ಒಂದು. ಇಲ್ಲಿ  ಲಕ್ಷ್ಮೀನರಸಿಂಹ ದೇವಾಲಯದ ಸಮೀಪ ದಲ್ಲಿ  ಚಿಕ್ಕದಾದ ಆದಿ ನರಸಿಂಹ ದೇವಾಲಯ ವಿದ್ದು ಇದರಿಂದಲೇ ಲಕ್ಷ್ಮೀನರಸಿಂಹಪುರ ಎಂಬ ಹೆಸರು ಬಂದಿರಬಹುದು ಎಂಬ ಊಹೆ ಇದೆ. 

ಅವರ ಬಹುತೇಕ ದೇವಾಲಯಗಳಂತೆ ನಕ್ಷತ್ರಾ ಕಾರದ ಜಗತಿಯ ಮೇಲೆ ನಿರ್ಮಾಣ ವಾದ ಈ ದೇವಾಲಯ ಮೂಲತ: ತ್ರಿಕುಟಾಚಲ ದೇವಾ ಲಯ. ಮೂರು ಗರ್ಭಗುಡಿಗಳಲ್ಲಿ ಪ್ರಧಾನ ಗರ್ಭ ಗುಡಿಯಲ್ಲಿ ಸುಂದರವಾದ ಶ್ರೀ ಕೇಶವನ ಶಿಲ್ಪ ವಿದೆ. ಸುಂದರವಾದ ಈ ಮೂರ್ತಿಯ ಪ್ರಭಾವಳಿ ಯಲ್ಲಿ ದಶಾವತಾರದ ಕೆತ್ತೆನೆಯಿದೆ.

ಶ್ರೀದೇವಿ ಭೂದೇವಿಯ ಕೆತ್ತೆನೆ ಇದ್ದು, ದ್ವಾರ ದಲ್ಲಿ ನಾಟ್ಯ ಲಕ್ಷ್ಮೀಯ ಕೆತ್ತೆನೆ ಇದೆ. ಉತ್ತರದ ಗರ್ಭ ಗುಡಿ ಯಲ್ಲಿ ಶ್ರೀಲಕ್ಷ್ಮೀನರಸಿಂಹನ ಶಿಲ್ಪ ವಿದ್ದು ಇಲ್ಲಿನ ದ್ವಾರದಲ್ಲಿನ ಪ್ರಹ್ಲಾದ ಹಾಗು ಗರುಡನ ನಡುವ ಇರುವ ಲಕ್ಷ್ಮೀನರಸಿಂಹ ಕೆತ್ತೆನೆ ಕಲಾತ್ಮ ಕವಾಗಿದೆ.ಇಲ್ಲಿನ ವಿತಾನದಲ್ಲಿ ಯೋಗ ನರಸಿಂಹ ಕೆತ್ತೆನೆ ಇದೆ.ದಕ್ಷಿಣದಲ್ಲಿ ಶ್ರೀ ವೇಣುಗೋಪಾಲನ ಕೆತ್ತೆನೆ ಇದೆ. ಇಲ್ಲಿನ ಪ್ರಭಾವಳಿಯ ಲ್ಲಿ ಸಹ ದಶಾ ವತಾರದ ಕೆತ್ತೆನೆ ಇದ್ದು ವಿತಾನದಲ್ಲಿನ ಅಷ್ಟದಿಕ್ಪಾ ಲಕರು ಹಾಗು ಗೋಪಾಲ ಕೃಷ್ಣನ ಕೆತ್ತೆನೆ ಇದೆ. 

ಇನ್ನು ನವರಂಗದಲ್ಲಿ ಹೊಯ್ಸಳ ಶೈಲಿಯ ನಾಲ್ಕು ಕಂಬಗಳಿದ್ದು ವಿತಾನದಲ್ಲಿನ ಕೆತ್ತೆನೆ ಕಲಾತ್ಮಕವಾ ಗಿದೆ. ನವರಂಗ ಒಟ್ಟು ಹನ್ನೆರಡು ಅಂಕಣ ಹೊಂದಿದ್ದು ಮಧ್ಯದ ವಿತಾನದಲ್ಲಿ ಸುಂದರ ಕೇಶವನ ಕೆತ್ತೆನೆ ಇದ್ದರೆ ಸುತ್ತಲಿನ ಒಂಬತ್ತು ವಿತಾನಗಳಲ್ಲಿ ಕಲಾತ್ಮಕ ಕೆತ್ತೆನೆ ಗಮನ ಸೆಳೆಯು ತ್ತದೆ. ಇಲ್ಲಿ ಕೃಷ್ಣ, ಕಾಳಿಂಗ ಮರ್ದನ, ಕಮಲದ ಮೊಗ್ಗಿನ ಕೆತ್ತೆನೆ, ಕೀರ್ತಿ ಮುಖಗಳು ಮುಂತಾದ ಸೂಕ್ಷ್ಮ ಕೆತ್ತೆನೆಗಳು ನೋಡಲೇ ಬೇಕಾದದ್ದು. ಮುಖ್ಯ ಗರ್ಭಗುಡಿಗೆ ಸುಂದರವಾದ ಶಿಖರವಿದ್ದು ಊಳಿದ ಎರಡು ಗೋಪುರಗಳು ನಂತರ ಕಾಲದ ಸೇರ್ಪಡೆ. 

ಇನ್ನು ಹೊರಭಿತ್ತಿಯಲ್ಲಿ ಹೊಯ್ಸಳರ ವೈಭವದ ಕೆತ್ತೆನಗಳಿದ್ದು ಆನೆ, ಕುದುರೆ, ಬಳ್ಳಿಗಳು, ಮಕರ, ಹಂಸ ಇದ್ದರೆ ಮೇಲಿನ ಸರಣಿಯಲ್ಲಿನ ಮಹಿಷಾ ಸುರ ಮರ್ಧಿನಿ, ಬ್ರಹ್ಮ, ಸರಸ್ವತಿ, ದಶಾವತಾರ ಗಳ ಶಿಲ್ಪಗಳು, ಚತುರ್ವಿಂಶತಿ ವಿಷ್ಣುವಿನ ಕೆತ್ತೆನೆ ಗಳು, ಗೋವರಧನಗಿರಿ ಧಾರಿ ವಿವಿಧ ರೂಪದ ನರಸಿಂಹ (ಉಗ್ರ, ಸ್ಥಾನಿಕ, ಯೋಗ), ಅರ್ಜುನ ನ ಮತ್ಸ್ಯಭೇದ, ಪರವಾಸುದೇವ ಹಾಗು ಲಕ್ಷ್ಮೀ ನಾರಾಯಣ ಮುಂತಾದ ಶಿಲ್ಪಗಳ ಕೆತ್ತೆನೆ ಸುಂದರವಾಗಿದೆ. ದೇವಾಲಯದ ದಕ್ಷಿಣ, ಉತ್ತರ ಹಾಗು ಪಶ್ಚಿಮ ಭಾಗಗಳಲ್ಲಿ ಗೋಪುರ ಮಾದರಿ ಯ ಚಿಕ್ಕ ಶಿಖರಗಳಿದ್ದು ಇಲ್ಲಿನ ಕೋಷ್ಟಕಗಳ ಲ್ಲಿನ ಯೋಗನರಸಿಂಹ, ವರಹಾಮೂರ್ತಿ ಹಾಗು ಲಕ್ಷ್ಮೀನಾರಯಣ ಶಿಲ್ಪಗಳಿವೆ. ಹೊಯ್ಸಳರ ಮೇರು ಶಿಲ್ಪಿ ಮಲ್ಲಿ ತಿಮ್ಮನ ಕೆತ್ತೆನೆಗಳಲ್ಲಿ ಈ ದೇವಾಲಯವೂ ಒಂದು.ದೇವಾಲಯ ಅತ್ಯಂತ ಸೂಕ್ಷ ಕೆತ್ತೆನೆಯಂದ ಕೂಡಿದ ಹೊಯ್ಸಳರ ಸುಂದರ ದೇವಾಲಯ ಎಂಬುದ ರಲ್ಲಿ ಸಂಶಯ ವಿಲ್ಲ. 

ತಲುಪುವ ಬಗ್ಗೆ : ಅರಸಿಕೆರೆ – ಹಾರನಹಳ್ಲಿ – ಹಾಸನ ರಸ್ತೆಯಲ್ಲಿ ಸುಮಾರು 8 ಕಿ.ಮೀ ದೂರ ದಲ್ಲಿ ಈ ದೇವಾಲಯವಿದೆ.ಇಲ್ಲಿನ ಸೋಮೇಶ್ವರ ದೇವಾಲಯ ಸಹ ಅಷ್ಟೇ ಮನಮೋಹಕ. 

✍️ಶ್ರೀನಿವಾಸಮೂರ್ತಿ ಎನ್.ಎಸ್. ಬೆಂಗಳೂರು