ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ
ಅಲ್ಲಿ ಯಶಸ್ಸು, ಸಮ್ರುದ್ಧಿ, ಶಾಂತಿ ಎನ್ನುವ ಮಾತು ಸುಳ್ಳಲ್ಲ ಅದನ್ನರಿತು ನಡೆದ ಪುರುಷರೇ ಸಾರಿಹರಲ್ಲ.
*
ಜಗದ ಜನರೆಲ್ಲರ ಸಲಹುವ ಭೂಮಿ ಹೆಣ್ಣು
ಆಗಸ ಪುರುಷನಾದರೆ ಅವನ ಪಾತ್ರ ಅಲ್ಲಗಳೆಯಲಾಗದಲ್ಲ.
*
ಒಡಲೊಳು ಮಗುವ ಹೊತ್ತೂ ದುಡಿಯಬಲ್ಲವಳೆಂಬುದ ತೋರಿಹಳಲ್ಲ*

ಯಾವ ಪುರುಷನಿಗೆ ತನ್ನ ವಂಶದ ಕುಡಿಯ ಕಾಳಜಿ ಇದೆಯೋ ಆಂವ ಮಡದಿಯ ಬಳಲಿಸಲಾರ*

ಕನಿಷ್ಠ ಗಭ೯ ಹೊತ್ತಾಗಲಾದರೂ ಕೆಲಸಕ್ಕೆ ಕಳುಹಿಸಲಾರ
ತಾನಾಗುವ ದುಡಿಮೆಯ ಧೀರ*

ಆದರೆ ಎಷ್ಟು ಹೆಣ್ಣು ಮಕ್ಕಳಿಗಿದೆ ಆ ಭಾಗ್ಯ
ತಾರತಮ್ಯವೇ ತಂದಿತು ಮಹಿಳಾ ದಿನಾಚರಣೆಯ ದೌರ್ಭಾಗ್ಯ
ಕುಟುಂಬದಲ್ಲಿ ಒಲುಮೆಯಿಂದ ನಡೆದುಕೊಳ್ಳುವದೇ ಯೋಗ್ಯ*

ಬೆಳಗಿನ ಉಷೆ ಯಿಂದಲಾಗಿ ರಾತ್ರಿಯ ನಿದ್ರಾದೇವಿ‘ಯವರೆಗೂ ಹೆಣ್ಣಿನಾಸರೆಯು ಪುರುಷನಿಗೆ*

ಗಂಗೆ- ನೀರು,
ಧಾನ್ಯಲಕ್ಷ್ಮೀ-ಆಹಾರ
ಧನಲಕ್ಷ್ಮಿ -ಸಂಬಳ,ಲಾಭ
ಮಗುವ ಹೊತ್ತು ಹೆತ್ತು ಪಾಲಿಸುವ ಮಾತೆ
ಆಡಿಸುವ ಅಕ್ಕ ತಂಗಿ
ಅನ್ನಪೂರ್ಣೇಶ್ವರಿ
ಊಟಉಪಹಾರ
ಸತಿ ಮನೋಧೈಯ೯ಕ್ಕೆ
ದಾದಿ ಕಾಯಿಲೆಬಿದ್ದಾಗ
ಧನಲಕ್ಷ್ಮಿ ಒಳಗೂ ಹೊರಗೂ ದುಡಿದು ಅಂತಸ್ತು ಕಾಪಾಡುವ ಪತ್ನಿ

ಎಲ್ಲ ರಂಗಗಳಲ್ಲೂ ಬೆಳಗುತ್ತಿರುವ ನಾರೀಮಣಿ
ಶೀಘ್ರದಲ್ಲೇ ಬರಲಿದೆ ಷುರುಷರ ದಿನ
ಹೆಣ್ಣು-ಗಂಡು ಪರಿಸರ ಮಾತೆಯ ಎರಡು ಕಣ್ಣುಗಳೆಂಬುದ ಮರೆಯದಿರೋಣ*

ಗಾಲಿಗಳೆರಡಿಲ್ಲದಿದ್ದರೆ ಎಳೆಯಲಾಗದು ಸಂಸಾರ ಬಂಡಿಯನೆಂಬುದ ತಿಳಿಯೋಣ
ಹೊಂದಿ ನಡೆಯೋಣ*

ಧೈರ್ಯವು ಬೇಕು ಹೆಣ್ಣು-ಗಂಡು ಇಬ್ಬರಿಗೂ ಎನ್ನುವ ಮಾತು ಸುಳ್ಳಲ್ಲ
ಹೆಚ್ಚು-ಕಡಿಮೆ ಎನ್ನುವದಲ್ಲ
ಸಾಮರಸ್ಯಕೆ ಅಹಂ ಸೂತ್ರವಲ್ಲ

ಜಗದ ಮಾತೆಯರೆಲ್ಲರಿಗೂ ಸಹೋದರಿಯರಿಗೂ ನಮನಗಳು
ಮಹಿಳಾ ದಿನ ಬಲ ನೀಡಲೆಂಬ ಹಾರೈಕೆಗಳು*

✍️ ಶ್ರೀಮತಿ ರೇಖಾ ನಾಡಿಗೇರ 
ಹುಬ್ಬಳ್ಳಿ