ಹೂ ನಗಲು ಎಷ್ಟು ರೊಕ್ಕ ಕೊಡಬೇಕೆಂದು ಕೇಳುತ್ತೀಯಲ್ಲ ಸಖಿ
ನಗು ಹೂವಿಗೆ ಕೊಟ್ಟ ವರದಾನ ಹೇಗೆಂದು ಕೇಳುತ್ತೀಯಲ್ಲ ಸಖಿ

ಅದು ನಿನ್ನ ಮುಡಿಗೇರಿ ನಗುತಿರಲು ನೋಡದ ಕಣ್ಣುಗಳೇ ನಿಜದಲಿ ಪಾಪಿಗಳು
ಅಳುವ ದೇವರ ನೀ ಕಂಡಿರುವೆಯಾ ಹುಡುಕಬೇಕೆಂದು ಕೇಳುತ್ತೀಯಲ್ಲ ಸಖಿ

ನಗುವ ದೇವರ ಮುಂದೆ ನಗುವ ಹೂಗಳನೇ ಅರ್ಚನೆಗೈಯ್ಯುತ್ತಾರೆ
ನೋಡಿಯೂ ಹೂವಿನ ಮೃದುತ್ವ ಗಾಯಾಳು ಯಾರೆಂದು ಕೇಳುತ್ತೀಯಲ್ಲ ಸಖಿ

ಅಪರಾಧ ಮನಸು ಅಪರಾಧಿಗೇ ಇಲ್ಲ ಎಂದ ಮೇಲೆ ಹೇಗಾಯಿತು ಅಪರಾಧ
ನೋವ ತಿಂದು ಬೆಳೆದ ಗುಲಾಬಿಗೆ ಸೌಂದರ್ಯವೇನೆಂದು ಕೇಳುತ್ತೀಯಲ್ಲ ಸಖಿ

ಭಾವನೆಗಳಿಗೆ ಯಾರೂ ಮಾಲೀಕರಿಲ್ಲ ಬಡವ ಬಲ್ಲಿದ ವ್ಯತ್ಯಾಸ ಗೊತ್ತಿಲ್ಲ ಜಾಲಿ
ಹರಿವ‌ ನೀರಿಗೆ ಒಡ್ಡು ಹಾಕಿಯೂ ನೀ ಯಾರವರೆಂದು‌ ಕೇಳುತ್ತೀಯಲ್ಲ ಸಖಿ

✍️ವೇಣು ಜಾಲಿಬೆಂಚಿ
ರಾಯಚೂರು.