ಮಮತೆಯ ಮಡಿಲು ತುಂಬಿದೆ
ಮುದ್ದಿನ ಮಗಳಾಗಿ ನೀ ಬಂದೆ
ಜಗದೆಲ್ಲಾ ಆನಂದ ಸಂಭ್ರಮ ತಂದೆ.
ಅಕ್ಕನಾಗಿ ಅಮ್ಮನ ಸ್ಥಾನ ವಹಿಸಿ
ತಂಗಿಯಾಗಿ ಪ್ರೀತಿಯ ಧಾರೆ ಹರಿಸಿ
ವಾತ್ಸಲ್ಯ ಮೂರ್ತಿಯಾದ ಚೈತನ್ಯದರಸಿ.
ಸ್ನೇಹದ ಕಡಲಯಾನದಿ ಸಹಚಾರಿ
ಗುರುವಾಗಿ ಜ್ಞಾನ ಮಾರ್ಗಕ್ಕೆ ತೋರಿ ದಾರಿ
ಪ್ರತಿ ವಿಧದಿ ಬಾಳ ಸಾಫಲ್ಯಕ್ಕೆ ನೀ ಸಹಕಾರಿ.
ಜೀವ ಒತ್ತೆ ಇಟ್ಟು ನೀನಾಗುವೆ ಅಮ್ಮ
ತಾಯಿ ಮಮತೆಗೆ ಬೇರೆ ಸಾಟಿ ಇದೇಯೇನಮ್ಮ
ಆ ಋಣವ ಜೀವನವಿಡೀ ತೀರಿಸಲಾರೆವಮ್ಮ .
ಕೈಹಿಡಿದು ಸಂಸಾರ ಬಂಡಿಗೆ ಜೊತೆಯಾಗಿ
ನೀನಾಗುವೆ ಸುಖ ದುಃಖಗಳಿಗೆ ಸಮಭಾಗಿ
ಮಕ್ಕಳಿಗೆ ತಾಯಿಯಾಗಿ ,ಇಡೀ ಕುಟುಂಬದ ಕಣ್ಣಾಗಿ.
ಬಾಳಿನ ನಾಟಕದ ವಿವಿಧ ಹಂತದಿ ವಿವಿಧ ರೂಪ
ವಹಿಸಿ ನಿಭಾಯಿಸುವ ನಿನ್ನ ಪಾತ್ರ ಅಪರೂಪ
ಭಗವಂತನ ತುಣುಕು ನೀ ಆಗಿರುವೆ ಅವನದೇ ಪ್ರತಿರೂಪ .
✍️ಸುಜಾತ ರವೀಶ್. ಮೈಸೂರು