ಮಹಿಳೆಗಾಗಿ ಒಂದು ದಿನ!!
ಇಳೆಯ ತೂಕದವಳಿಗಾಗಿ
ಸನ್ಮಾನ!!
ಸಕಲ ರಂಗದಲ್ಲಿ ಸವ೯ ಪಾತ್ರ ನಿಭಾಯಿಸುವ ತ್ಯಾಗಮಯಿ,
ಮಡಿಲ ಅಕ್ಕರೆಯಲಿ ಸದಾ ನಕ್ಕು
ನೋವು ಮರೆಮಾಚುವ ಮಹಾತಾಯಿ
ಹಲವಾರು ಪ್ರಶ್ನೆಗಳಿಗೆ ಉತ್ತರ
ಹುಡುಕುವ ಆಪ್ತ ಸಮಾಲೋಚಕಿ
ಹೆತ್ತವರ ಕಿರುತಿಗಾಗಿ, ಆರತಿಯಾಗಿ ಬಂದು ಗೃಹ ಪ್ರವೇಶ ಮಾಡಿದ ತವರಿನ ಭಾಗ್ಯವನ್ನೇ ಹರಸುವ ಭಾವುಕಿ
ಹಸಿದ ಹೊಟ್ಟೆಯಿರಿಸಿಕೊಂಡು
ಅನ್ಯರ ಹಸಿವನ್ನು ಹಿಂಗಿಸಲು
ಹೆಣಗುವ ಅನ್ನಪೂಣೆ೯
ನವಮಾಸ ನಾನಾ ತರಹದಿ ಸಹಿಸಿ
ಹಗಲಿರುಳೆನ್ನದೆ ಸೇವೆಗೈದು
ತಾಯ್ತನದಿ ಅವಳಲ್ಲಿ ತೃಪ್ತೆ
ಬ್ರಹ್ಮನ ಸೃಷ್ಟಿಯಲ್ಲೇ ಅಥ೯ಕಂಡು
ತನ್ನ ಜೀವನಕ್ಕೊಂದು, ಆತ್ಮಗೌರವಕ್ಕಾಗಿ ಪರದಾಡುವ ಕೌಟುಂಬಿಕ ವಕೀಲೆ
ಸುಂದರಿ,ಸುಗುಣೆ, ಸಂಸ್ಕಾರದ ಬಳುವಳಿಯನ್ನು ಪಡೆದು
ಪೀಳಿಗೆಯಿಂದ ಪೀಳಿಗೆಗೆ ರವಾನಿಸುವ ಸುಶೀಲೆ
ಇವಳಿಗೆ ಒಂದು ದಿನವೇ? ಸಾಲದು ಸಾಲದು…
ಹವಳ,ಮುತ್ತು ಗಳಿಗೆ ಬೆಲೆ ಕಟ್ಟಬೇಕೆ ಹಾರದಲಿ ಬಳಸಿದಾಗ ಮಾತ್ರ ಅವಕಲ್ಲಿ ಶೋಭೆ!!
ನಗುವರಿಸಿ,ಕಣ್ಣೀರ ವರೆಸಿ
ಕೈಮಾಡಿ ಕರೆವ ಜಗದ ತೊಟ್ಟಿಲ
ತೂಗುವ ತಾಯೆ
ನೀನಿರುವೆಲ್ಲಡೆ ನಗುವಿನ ಛಾಯೆ
ಅದಕ್ಕಲ್ಲವೆ ನೀನಗನ್ನುವರು ಮಾಯೆ ಮಹಾ ಮಾಯೆ!!
✍️ಸವಿತ
(ಸವಿತಾ.ಲಿಂಗಾರೆಡ್ಡಿ ಹುಬ್ಬಳ್ಳಿ)