ಅನಂತಯ್ಯಂಗೀವತ್ ಕೊನೇದಿನ : ರಿಟೈರ್ಮೆಂಟು

ಅರವತ್ತು ವರ್ಷವಾಯ್ತಲ್ಲ, ಇನ್ಮನೇನೆ ಪರ್ಮನೆಂಟು

ತೋಟ, ಹೊಲ, ಮನೆ, ಚಿನ್ನ, ಬೆಳ್ಳಿ-ಎಲ್ಲಾ ಉಂಟು

ಪಾಪ ಸಾಚಾನೇ, ಚಿಕ್ಮನೇಗೂ ಮಾಡವ್ನೆ ದೊಡ್ಗಂಟು

ಯಾರನ್ನೇ ಕೇಳಿ, ಎಲ್ಲಾರ್ಗೂ ಒಳ್ಳೇವ್ನು ಅನಂತಯ್ಯ

ತೆಲುಗಿನಲ್ಯಾಕೆ, ಕನ್ನಡದಲ್ಲೇ ವಿಶ್ಯ  ಹೇಳ್ತೀನಯ್ಯಾ

ಎಲ್ಲಾರ್ಗೂ ಬೇಕು, ಅವರಿಗ್ಬೇಕು ಇವ್ರಿಗಂತೂ ದೇವ್ರೇ

ಹೆಂಗಸ್ರು, ಮಕ್ಳು, ದೊಡ್ಡವ್ರು ಚಿಕ್ಕವ್ರು ಎಲ್ರೂ ಅಂದವ್ರೆ 

ಅಂತಿಂತವ್ನಲ್ಲಾ, ಅನಂತಯ್ಯ ಬಾರಿ ಹುಷಾರ್ ಮನ್ಸ

ನಿದ್ರೇಲು ಎಚ್ಚರದಲ್ಲೂ ಬೀಳಿಸ್ತಾನೆ  ಕದ್ದ್-ಒಳ್ಳೆ-ಸವಿಗನ್ಸ

ಯಾರ್ನೇ ಕೇಳ್ತಿಳ್ಕೊಳಿ, ಯಾವತ್ಕಳ್ಕಂಡವ್ನೆ ಸ್ವಂತದ್ಕಾಸ

ದಿವಿನಾಗಿ ನವ್ರಾಗಿ ನಯವಾಗೇ  ತೆಗಿಸ್ತಾನ್ಬೇರೇವ್ರ ಪಸ೯

ಟೇಬಲ್ಕೆಳಗಿನ್ ಡೀಲು ಅವರ್ಗೂ ಗೊತ್ತಾಗಂಗಿಲ್ಲಾ

ಮೂಗಿನ್ಮೇಲ್ ಬೆರಳು ಇಟ್ಕಳಂಗೇ  ಮಾಡ್ತಾನೆಲ್ಲಾ

ಕಚ್ಚಿಸ್ಕೋಂಡೋರ್ ಮನೇಗ್ಹೋಗಿ ನೋಡ್ಕತ್ತಾರೆ

minus something  ಗ್ಯಾರಂಟಿ ಆಗಿತಾ೯ರೆ 

ಉರಿಗ್ವೂರಿಗ್ಗೊತ್ತು ಈವಯ್ಯನ್ ನಂಬ್ಕೋಂಡವ್ರೆಲ್ಲಾ

ಆಗವ್ರೆ ಪಾಪರ್ ಖಂಡಿತಾ  ಹೆಸ್ರು ಮಾತ್ರ ಊರೆಲ್ಲಾ

ಆಯಮ್ಮಂದು ಏನೇನೋ–ಈವಮ್ಮಂದು ಅದೇಯ

ಕಳ್ಕೊಂಡ್ರು, ಕಳ್ದ್ಹೋಯ್ತು : ಕೆಲ್ಸ ಅನಂತಯ್ಯಂದೇಯ

ಹೇಳೋನು -“ನೀವ್ಬನ್ನಿ, ಇವ್ರನೂ ಕರ್ಕಂಡುಬನ್ನೀ-

ನೀವೇಳ್ದಂಗೆಲ್ಲಾ  ಮಾಡಿಸ್ಕೊಡ್ತೀನಿ, ‘ಒಂದಿಷ್ಟ’-ಕೊಟ್ಬಿಡಿ  

ನಿಮ್ಮಾಶೀರ್ವಾದ ಒಂದ್ಸಾಕ್ನನ್ಗೆ, ನನಗೆ ಇನ್ನೇನ್ಬೇಡಿ” 

ಆ ‘ಒಂದಿಷ್ಟ’-ರಲ್ಲೆ ಇವ್ನ-ದೂ ಐತೆ, ಈ ಮಾತ್ನಂಬೇಡಿ.

ಕೆಲವ್ರದ್ದುಡ್ಡು ಕೆಲವರ್ದು ಏನೇನೊ, ಹೇಳ್ಬಾರದನ್ನೂ

ಅವ್ರುದ್ ಹೋಯ್ತು ಇವ್ರದೂನೂ, ನಂಬಬಾರದಿನ್ನು

ಏನೇ ಆಗಿರ್ಬೋದು,ಆದ್ರೂ ಅನಂತಯ್ಯಂನನ್ನಾಂಗಿಲ್ಲಾ

ಎಲ್ಲರ್ಗೂ ತಿಳಿಯೋಂಗ್ಮುಂಚೇನೆ ವಿಷ್ಯ ಹೇಳ್ಬಿಟ್ಟವ್ನಲ್ಲಾ-

“ಆದ್ರೆ ಒಳ್ಳೇದ್- ಆಗದಿದ್ರೆ  ನಿಮ್ದೇ ಜವಾಬ್ದಾರಿ ಕಣ್ರೀ  

ಎದ್ರೇ ok, ಬಿದ್ದೋದ್ರಂತೂ,ನನ್ನತ್ರ  ಬರ್ಲೇಬೇಡ್ರಿ”

ಈ  ನಸುಗುನ್ನಕಾಯೀನ್ ಹೊಡೆದು ಬಡಿಯಂಗಿಲ್ಲಾ

ಯಾಕಿಂಗ್ಮಾಡ್ದೆ  ಅನ್ನೊ ಪ್ರಶ್ನೆಗಳ್ನಂತೂ  ಕೇಳ್ಹಂಗೇ  ಇಲ್ಲಾ 

ಕಳ್ಕೋಂಡೋರ್ಬಿಟ್ರೂ  ನಿಟ್ಟುಸಿರು/ಕೊನೆ-ಉಸಿರು

ಯಾಬ್ರೇಸಿ ಅನಂತಯ್ನ ಜಮೀ೯ ಮಾತ್ರ ಸದಾ ಹಸಿರು

ಹೇಳವ್ರಲ್ಲಾ : -“a friend to all is a friend to none”-

ನಿಲ್ಸಿ ಮುಂದೆ, ಕರ್ಕಂಬನ್ನಿ ಯಾರ್-ಅವ್ನು ಹೇಳ್ದೋವ್ನು

ಅನಂತಯ್ಯ ಹಂಗೂ ಹಿಂಗೂ ಹೆಂಗಾದ್ರೂ ಗೆಲ್ಲೋವ್ನು

ಅವ್ನು ರಿಟೈರಾದ್ದಿನ ಕೊಟ್ರು ಎಲ್ಲಾ ಸೇರಿ  ಒಂದ್ಪಾರ್ಟಿ

ಎತ್ತಿದ್ರೂ ಎಲ್ರೂ ಸಾಲಾಗ್ನಿಂತು ಒಬ್ಬೊಬ್ಬರಾಗಿ ಆರತಿ

ಹೊಗಳೇ  ಹೊಗಳಿದ್ರು ಬಾಯ್ಪೂರ್ತಿ ಅವ್ನ-ಷಷ್ಠಿ-ಪೂರ್ತಿ 

ಕಾಫೀ-ತಿಂಡಿಗಂತ್ಹೋದ್ರೆ ವಾಪ್ಸು ಬರ್ತಿರ್ಲಿಲ್ಲಾ, ಕಣ್ರೀ

ಬಂದ್ರೂ ಕೂತ್ಕಂಡು ಮೈಬಗ್ಸಿ  ಕೆಲ್ಸ ಮಾಡ್ತಿರ್ಲಿಲ್ಲಾರಿ

ಮಾಡಿದ್ಕೆಲ್ಸ-ಎಲ್ಲಾ-ಯಡವಟ್, ಯಾರ್ಗು ತೃಪ್ತಿ ಇರ್ತಿಲ್ರೀ

ಎಲ್ಲಾ papers pending  ತಿಂಗ್ಳೂ- ತಿಂಗ್ಳಾನುಗಟ್ಲೆ

ಎಲ್ಲಾ ಆಫೀಸರ್ಸಗೆ ಹೋಗೋದ್ಮನೇಗೆ direct  ಸಪ್ಲೆ

ಸ್ವಾಮಿ-ಕಾರ್ಯ ಸ್ವ-ಕಾರ್ಯ ಇವನ್ರೂಲು ಯಾವಾಗ್ಲೂ

ಸುಮ್ಮ-ಸುಮ್ನೆ ಬರ್ಸೋನ್ ಅವ್ನೆಸ್ರು ಎಲ್ಲ ಪೇಪರ್ಲೂ

ಏನಾದ್ರೂ ಇವತ್ಗ್ಯಾರಂಟೀ ಇವ್ನೀಗ್ಗೆಪ್ಪತ್-ಎಂಬತ್-ಶಾಲು 

ಅನಂತಯ್ಯ, ಅವನಂತೋರ್ ಕೇರೀ-ಊರ್-ಎಲ್ಲೆಲ್ಲೂ

ಇದೇ ಕತೆ-ವ್ಯಥೆ-ಹರಿಕತೆ ಎಲ್ಲಾ ದೇಶ-ಪೂರ್ತಾ-ಇಳೆಯಲ್ಲೂ

ನಾಕ್ಜನ ಸೇರಿದ್ರೆ ಗುಂಪು, ಎಲ್ಲಾ ಗುಂಪ್ನಲ್ಲೊಬ್ಬ ಅನಂತಯ್ಯ

ಅನಂತಯ್ಯರ್ಗಳಲ್ ದೊಡ್ಡನಂತಯ್ಯ ಆಗ್ತಾನೊಬ್ಬನಾಯ್ಕ

ಉಳ್ದೆಲ್ಲಾ ಅನಂತಯ್ಯರ್ಗಳ ತುಳ್ಯೋದೇ ಅವನ್ಕಾಯಕ

ಗೆದ್ದವ್ನು ಆಗ್ತಾನೆ ಒಬ್ಬ ಲೀಡರ್, ಕಾರ್ಪೊರೇಟರ್, ಶಾಸಕ

ನಾವೆಲ್ರೂ ಕುರಿಗಳೇ ಸರಿ, ಅನಂತಯ್ಯನೊಬ್ಬ ನಮ್ಕುರುಬ

ನಾವ್ಗೆಲ್ಲಿಸಿದವನು ಅನಂತಯ್ಯನೇ ಸರಿ, ಒಬ್ಬ ಕಾಡ್ಕಿರುಬ 

     ✍️ಶ್ರೇಯಸ್ ಪರಿಚರಣ್