ಉತ್ತರ ಕನ್ನಡದ ಯಲ್ಲಾಪೂರದಲ್ಲಿ ಹುಟ್ಟಿ, ಅಲ್ಲೇ ಬದುಕು ಕಟ್ಟಿಕೊಂಡಿರುವ ಶಿವಲೀಲಾ ಹುಣಸಗಿಯವರು ಬಾಲ್ಯದಿಂದಲೂ ಪ್ರತಿಭಾ ವಂತರೂ ಅದಕ್ಕಿಂತಲೂ ಹೆಚ್ಚಾಗಿ ವಿನಯ ಶೀಲರೂ ಆಗಿ ದ್ದರು. ಶಾಲಾ ಶಿಕ್ಷಕಿ ಯಾದ ಇವರು ಶಾಲೆಯ ಮಕ್ಕಳನ್ನು ಮಮತೆಯಿಂದ ಕಾಣುತ್ತಾ ಅವರೊ ಳಗೊಂದಾಗಿ ಮಾತೃ ಹೃದ ಯದ ಮಗು ಮನವ ನ್ನು ಮೈಗೂಡಿಸಿ ಕೊಂಡಿ ರುವರು. ಇದರಿಂದಾಗಿ ಇವರ ಕವಿತೆಗಳು ‘ಮಗು ಮನದ ತಾಯ್ನುಡಿ‘ ಗಳಾಗಿವೆ.ಬಾಲ್ಯ ದಿಂದಲೂ ಹಸಿವು,ಬಡತನ ಗಳನ್ನು ಕಂಡುಂಡ ಇವರ ಕವಿತೆಗಳಲ್ಲಿ ಬೆವರಿನ ವಾಸನೆಯ ‘ಘಮ’ ದೊಂದಿಗೆ ಸಾಮಾಜಿಕ ಕಾಳಜಿಯ ಹಾಗೂ ಹೆಣ್ಣಿನ ಸ್ವಾಭಿಮಾನದ ತುಡಿತಗಳ ಮಿಡಿತವಿದೆ. ಬರೆದಂತೆ ನುಡಿಯುವ ಮತ್ತು ನುಡಿದಂತೆ ಬದುಕುವ ಶಿವಲೀಲಾರ ಬದುಕು ಮತ್ತು ಬರಹ ದಲ್ಲಿ ಸಮನ್ವಯತೆ ಇದೆ. ಉತ್ತಮ ಶಿಕ್ಷಕಿ, ಸಾಮಾಜಿಕ ಮತ್ತು ಸಾಹಿತ್ಯಿಕ ಸಂಘಟನೆಗಳ ಮೂಲಕ ಮಾನವೀಯ ಸಂಬಂಧದ ನೆಲೆ- ಬೆಲೆ ಗಳನ್ನು ಮೈಗೂಡಿಸಿ ಕೊಂಡ ಇವರಿಗೆ ಪರಿಸರ ಮತ್ತು ಸ್ವಚ್ಛತಾ ಅಭಿಯಾನಗಳೆಂದರೆ ಎಲ್ಲಿಲ್ಲದ ಪ್ರೀತಿ.

ಹುಬ್ಬಳ್ಳಿಯ ಶ್ರೀ ಶಂಕರ ನಾಯಕ ರವರು ಪ್ರಕಾಶಿಸಿದ 88 ಪುಟಗಳ ಈ ಚೊಚ್ಚಲ ಕೃತಿ ಯಲ್ಲಿ 58 ಸರಳ ಸುಂದರ ಕವಿತೆಗಳಿದ್ದು ಇವು ಮುಗ್ಧ ಮಗುವಿನ ಮೋಹಕ ತೊದಲ್ನುಡಿಗಳಾ ಗಿದೆ.
ಗಾಣದೆತ್ತಿನಂತೆ ದುಡಿದು
ಸಂಸಾರ ಸುಖ ದುಃಖ ನನ್ನದೆಂದು
ಆಸೆ ಆಕಾಂಕ್ಷೆ ಬದಿಗೊತ್ತಿ
ಸಂಸಾರ ರಥವ ಎಳೆಯುವ ಅಬ್ಬರದಲ್ಲಿ
ತಮ್ಮ ತಾವ ಮರೆತವರು
ಒಗ್ಗಟ್ಟಿಲ್ಲದ ನಮ್ಮವರು
ಎನ್ನುತ್ತಾ “ಹೆಂಗರುಳೇ ನೀ ಅರಿ” ಕವಿತೆ ಯಲ್ಲಿ ಹೆಣ್ಣಿನ ಮನೋವ್ಯಥೆಗೆ ಕನ್ನಡಿಯಾಗಿ ರುವರು. ನಿಜವಾಗಿಯೂ ಹೆಣ್ಣು ಗಾಣದೆತ್ತೇ. ದುಡಿಯುವ ಅಬ್ಬರದಲ್ಲಿ ತನ್ನ ತಾನೇ ಮರೆತು ಬಿಡುವಳು. ಮುಂಜಾನೆ ಯಿಂದ ಸಂಜೆಯ ತನಕ ತನ್ನ ಕುಟುಂಬದ ನಿರ್ವಹಣೆಗಾಗಿ ತನ್ನೆಲ್ಲಾ ಸುಖ, ಸಂತೋಷ ತ್ಯಾಗ ಮಾಡಿದರೂ ಕೊನೆಗೆ ಅಪ ವಾದ ಮಾತ್ರ ಕಟ್ಟಿಟ್ಟ ಬುತ್ತಿ.ಇಲ್ಲಿ ಹೆಣ್ಣಿಗೆ ಹೆಣ್ಣೇ ಶತ್ರು. ತಾಯಿ, ಅತ್ತೆ, ತಂಗಿ, ಅಕ್ಕ,ಮಡದಿ ಈ ಎಲ್ಲಾ ಪಾತ್ರಗಳೂ ಆಯಾ ಅವಧಿಯಲ್ಲಿ ಕೆಂಡ ದ ಬಿಸಿಯಲ್ಲಿ ಹಾಯ್ದವ ರೇ. ಪುರುಷ ಪ್ರಧಾನ ಈ ವ್ಯವಸ್ಥೆಯಲ್ಲಿ ಹೆಣ್ಣು ಎಷ್ಟೇ ಪ್ರಭಲವೆನಿ ಸಿದರೂ, ಸಂದರ್ಭದಲ್ಲಿ ದುರ್ಬಲಳೇ. ಬೆಂಕಿಯಷ್ಟೇ ಪ್ರಬಲವಾದ ರೂ ಕೊನೆಗೂ ‘ಬುದ್ದಿ ಮೊಣ ಕಾಲು ಕೆಳಗೆ’ ಪ್ರಶಸ್ತಿ ಮಾತ್ರ ತಪ್ಪಿದ್ದಲ್ಲ. ಕೊನೆ ಗೂ ಕವಿ, ಹೆಣ್ಣು ಯಾರ ಶತ್ರುವೂ ಅಲ್ಲ, ದಾಸಿ ಯೂ ಅಲ್ಲ, ಅರಿತು ಬಾಳಿದರೆ ಜೀವನ ಎಂದರೆ ಸಕ್ಕರೆ -ಬೆಲ್ಲ ಎಂಬ ಆಶಾಭಾವನೆ ಹೊಂದಿರು ವರು.
“ಬೇಡಿಕೆ” ಕವಿತೆಯಲ್ಲಿ
ಶಾಂತಿಯ ತವರೂರಾದ ನಾಡು
ಕೋಮು ಗಲಭೆಯಿಂದಲಿ
ಅಶಾಂತಿಯ ಬೀಡಾಗಿಹುದು
ಬಿತ್ತುವುದು ನೀತಿಯ ಮಾರ್ಗ
ತಿನ್ನುವುದು ಮಸಿ ಕೆಂಡ
ಎನ್ನುತ್ತಾ ದೇಶದ ಇಂದಿನ ಪರಿಸ್ಥಿತಿಗೆ ಹೇಸಿ, ನಿವಾರಣೆಗೆ ಯಾವುದಾದರೂ ದೇವರು ಅವತ ರಿಸಿ ಬರಬಹುದೇ ಎಂಬ ಬೇಡಿಕೆ ಇಟ್ಟಿರುವರು. ರಾಮ,ಏಸು,ಪೈಗಂಬರರು ತಮ್ಮ ಶಾಂತಿ ಸಮಾ ಧಾನದಿಂದ ಜಗದ ಜನಮನವ ಗೆದ್ದರು. ಆದರೆ ಇದೇ ನೆಲದಲ್ಲಿ ಈಗ ಧರ್ಮದ ಹೆಸರಿನಲ್ಲಿ ಬಾಂಬು, ಲಾಂಗು ಮಚ್ಚುಗಳು ಮಸೆದಾಡುತಿವೆ. ನೆಮ್ಮದಿ ಕಳೆದು ಹೋಗಿದೆ. ಈಗಿಲ್ಲಿ ಬಿತ್ತುವುದು ನೀತಿಯ ಮಾರ್ಗ; ತಿನ್ನುವುದು ಮಸೀಕೆಂಡದಂ ತಾಗಿದೆ ಎಂದು ಸೌಹಾರ್ದತೆಗೆ ದಾರಿ ಹುಡುಕು ತ್ತಿರುವರು.
ಹಿರಿಯ ಲೇಖಕ ವನರಾಗ ಶರ್ಮಾ ಈ ಸಂಕಲ ನದ ಕುರಿತು ಬರೆಯುತ್ತಾ ” ಇದು ಆಧ್ಯಾತ್ಮಿಕ ಮತ್ತು ಮಾನವೀಯತೆಯ ನೆಲೆಯಲ್ಲಿ ಚಿಂತನೆಗೆ ಹಚ್ಚುವ ಕವಿತಾ ಕುಸುಮಗಳ ಗುಚ್ಛ. ಹಾಗೆಯೇ ಹೃದಯವಂತಿಕೆಗೂ ಒಳ ಬೇಗುದಿಯ ಅನಾವ ರಣಕ್ಕೂ ಸಾಕ್ಷಿಯಾದ ಕೃತಿ. ‘ಬದುಕೆಂದರೆ ಹೀಗೇನಾ’ ಎಂದು ತನ್ನಷ್ಟಕ್ಕೆ ತಾನು ಪ್ರಶ್ನಿಸಿ ಕೊಳ್ಳುತ್ತಲೇ ಎಲ್ಲರ ಪ್ರಶ್ನೆಯೂ,ಸಂವೇದನೆ ಯೂ ಆಗಿಬಿಡುವ ಇವರ ಕವಿತೆಗಳು ಶೋಷಿತ ರ, ಹೆಣ್ಣಿನ ಸ್ವಾಭಿಮಾನದ ತುಡಿತಗಳ, ಸಾಮಾ ಜಿಕ ಕಾಳಜಿಗಳ ದನಿಯಾಗಿ ಹೊರಹೊಮ್ಮಿ ಬಂದಿರುವುದನ್ನು ಇಲ್ಲಿ ಕಾಣುತ್ತೇವೆ. ಎಲ್ಲಾ ಕವಿತೆಗಳೂ ಅದರದ್ದೇ ಆದ ಸೊಗಸನ್ನು ಹೊಂದಿದೆ” ಎಂದಿರುವರು.
ಕರುನಾಡಲಿಲ್ಲ ಅಭಿಮಾನ ?
ಸದಾ ಆಂಗ್ಲರದೇ ಧ್ಯಾನ
ಮಾತೃಭಾಷೆಯ ಗಾಳಿಗೆ ತೂರಿ
ಭಾಷಾಭಿಮಾನ ತಿಜೋರಿಯಲಿ ಸೇರಿಸಿದವರು
ಕನ್ನಡದ ಹಣತೆಯ ಹಚ್ಚಬಲ್ಲರೇ
ಎಂದು “ಎದ್ದೇಳಿ” ಕವಿತೆಯಲ್ಲಿ ಕನ್ನಡತನ ವನ್ನು ಜಾಗ್ರತಗೊಳಿಸಿರುವರು. ಇಂದಿನ ದಿನದ ಲ್ಲಿ ರಾಜಧಾನಿಯಲ್ಲೇ ಕನ್ನಡ ಸೊರಗಿ ಸಣ್ಣದಾಗ ತೊಡಗಿದೆ. ಈ ಐಟಿ-ಬಿಟಿಯ ಹೆಸರಿನಲ್ಲಿ ಕನ್ನಡ ನಮ್ಮ ನೆಲದಲ್ಲೇ ಕ್ಷೀಣ ಸುತ್ತಿದೆ. ಇಲ್ಲಂತೂ ಈಗೀಗ ಆಂಗ್ಲಭಾಷೆಯ ದೇ ಧ್ಯಾನವಾಗಿದೆ. ರಾಜ್ಯೋತ್ಸವದ ವೈಭವ ಕ್ಕಾಗಿ ಮಾತ್ರ ಆಗಾಗ ಕನ್ನಡದ ಕೂಗು ಕೇಳಿ ಬರುತಿದೆ, ಈಗ ನಾವೆಲ್ಲಾ ಜಾಗ್ರತರಾಗಿ ಕನ್ನಡ ಉಳಿಸಬೇಕು, ಬೆಳೆಸಬೇಕು, ಕನ್ನಡವನ್ನು ಕಟ್ಟಬೇಕು. ಮನಸಾರೆ ಕನ್ನಡದ ಹಣತೆ ನಮ್ಮೆದೆ ಯಲ್ಲಿ ಬೆಳಗಬೇಕು, ಎಂದು ಕವಿ ಕರೆ ಕೊಟ್ಟಿರುವರು.
“ಗಂಟು ನಂಟು” ಕವಿತೆಯಲ್ಲಿ
ನೀ ಹೆಣ್ಣು ನಾ ಗಂಡೆಂಬ
ಜೇಡ ಬಲೆ ಕಟ್ಟದಿರಲಿ
ನೋವಿಗೂ, ನಲಿವಿಗೂ
ಶಕ್ತಿಗೂ ಮುಕ್ತಿಗೂ
ಕಂಬನಿ ಮಿಡಿವ ಹೃದಯವಿರಲಿ
ಎನ್ನುತ್ತಾ ಲಿಂಗ ತಾರತಮ್ಯದ ಕುರಿತಾಗಿಯೂ ಶಾಂತವಾಗಿಯೇ ಪ್ರತಿರೋಧ ವ್ಯಕ್ತಪಡಿಸಿರು ವರು. ಎಲ್ಲದರಲ್ಲಿಯೂ ಈಗ ಗಂಡು-ಹೆಣ್ಣಿನ ನಡುವೆ ಮಹಾನ್ ಕಂದಕ ಏರ್ಪಟ್ಟಿದೆ. ಇದಕ್ಕೆ ಮುಖ್ಯ ಕಾರಣಕರ್ತರು ಪಾಲಕರೇ. ಹೆಣ್ಣೆಂದು ತಿಳಿದೊಡನೇ ಗರ್ಭದಲ್ಲೇ ಚಿವುಟಿ ಬಿಡುವರು. ಮುಂದೆ ಹೆಣ್ಣಿನ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳೂ ಕೂಡ ಶೋಚನೀಯ ವಾಗಿದೆ. ಇದಕ್ಕೆ ಆಸ್ಪದ ಕೊಡದೇ ಗಂಡು ಹೆಣ್ಣೆಂಬ ಬೇಧ ಭಾವ ತೊಲಗಲಿ ಎಂದು ಕವಿ ಹಾರೈಸಿ, ಶಕ್ತಿಗೂ ಮುಕ್ತಿಗೂ ಕಂಬನಿ ಮಿಡಿಯುವ ಹೃದಯ ವಿರಲಿ ಎಂದು ಹಂಬಲಿ ಸಿರುವರು.
ಉತ್ತರ ಕನ್ನಡದ ಸಾಂಸ್ಕೃತಿಕ ರಾಯಭಾರಿ ಶ್ರೀ ಪ್ರಮೋದ ಹೆಗಡೆಯವರು ಈ ಪುಸ್ತಕಕ್ಕೆ ಬೆನ್ನುಡಿ ಬರೆಯುತ್ತಾ”ಸಂತ ಶಿಶುನಾಳ ಷರೀಫ್ ಹೇಳುವ ಹಾಗೆ ಬದುಕಿಗೆ ಆಧಾರ ಅಥವಾ ಬೆನ್ನಿಗೆ ಆಧಾರ ಶಿವನ ಬೆನ್ನು ಎನ್ನುತ್ತಾರೆ. ಹೀಗೆ ಶಿವಲೀಲಾ ಹುಣಸಗಿಯ ವರು ಬದುಕಿನ ಹತ್ತಾರು ಭಾವಗಳ ಯಶೋ ಗಾಥೆಯ ಕವನ ಸಂಕಲನ ಪ್ರಕಟವಾಗಿ ದ್ದು ಶಿವಲೀಲೆಯೆಂದೇ ಹೇಳಬೇಕು. ಕಾವ್ಯಗಳಲ್ಲಿ ಮಿಂಚುತ್ತಾ ಊರಿನ ಗೌಜಿಯ ಗಡಿಬಿಡಿಯಲ್ಲಿ ಹುರಿದಂತೆ ಮಾತನಾ ಡುವ ಸದಾ ಹಸನ್ಮುಖಿ ಯಾದ ಶಿವಲೀಲಾರಿಗೆ ಶುಭಕೋರುವೆ” ಎಂದಿ ರುವರು.
ಮಾನವೀಯತೆ ಕೊಂದಂತೆ
ಹೀಗೆ ಮುಂದುವರೆದರೆ
ಮಾನವ ಚುಕ್ಕಾಣ ಇಲ್ಲದ
ದೋಣಿಯಂತಾಗುವನು ಹಾಗೆ
ಎಂದು “ಒಂದಕ್ಕಿಂತ ಒಂದು” ಕವಿತೆಯಲ್ಲಿ ಮನುಷ್ಯನು ಅಂಧಕಾರದಲ್ಲಿ ಮುಳುಗಿರುವ ಕುರಿತು ಚಿತ್ರಿಸಿರುವರು. ಬಡತನ-ಶ್ರೀಮಂತಿಕೆ, ಧಾರ್ಮಿಕ ಮೌಢ್ಯತೆಯ ಪ್ರಭಾವ, ಕತ್ತಲು ಬೆಳಕಿ ನಾಟಗಳಿಂದಾಗಿ ಮನುಷ್ಯನು ತನ್ನತನವನ್ನೇ ಮರೆತು ಸದಾ ಮತ್ತೊಬ್ಬನನ್ನು ಮುಗಿಸುವ ಸಮಯಕ್ಕಾಗಿ ಕಾಯುತ್ತಿರುವನು. ದುಡ್ಡಿನ ದರ್ಪದಲ್ಲಿ ಮನಶ್ಯಾಂತಿ ಹೊರಟು ನಿದ್ದೆಯೇ ಮಾಯ ವಾಗಿ ಬಿಟ್ಟಿದೆ. ಭ್ರಷ್ಟಾಚಾರ ಸ್ವಜನ ಪಕ್ಷ ಪಾತ ಮಿತಿ ಮೀರಿದೆ. ಹಸಿವು ಬಡತನ ತಾಂಡವ ವಾ ಡುತ್ತಿದೆ. ನಂಬಿಕೆಗಳು ಹೊರಟು ಹೋಗಿದೆ. ಒಟ್ಟಾರೆ ಯಾಗಿ ಅಹಂನಿಂದ ಮಾನವೀಯತೆ ಯೇ ಸತ್ತು ಹೋಗಿದೆ. ಮತ್ತೆ ನಾವೆಲ್ಲಾ ಮನುಷ್ಯ ರಾಗಿ ಬದುಕುವಾ ಎಂದು ಕವಿ ಚಟಪಟಿಸುತ್ತಿ ರುವರು.
ಸಂಕಲನಕ್ಕೆ ಮುನ್ನುಡಿ ಬರೆದ ಡಾ.ದತ್ತಾತ್ರೆಯ ಗಾಂವ್ಕರ್ “ತೊದಲ ಮಾತಿನಲ್ಲಿಯೂ ಕುತೂಹ ಲ, ಸತ್ಯ, ರೋಚಕತೆ, ಹಠಮಾರಿತನ, ಪ್ರೀತಿ ಮಮತೆಗಳು ಅಡಗಿರುವಂತೆ ಇಡೀ ಕವನ ಸಂಕಲನವೂ ಮುಗ್ಧ ಮಗುವಿನಂತೆ ಮೋಹಕ ವಾಗಿದೆ. ಬರೆಯುತ್ತ ಅರಿಯಬೇಕು, ಅರಿಯುತ್ತ ಬರೆಯಬೇಕು, ಕೊನೆಗೊಂದು ದಿನ ಬರಹವೇ ಅರಿವಾಗಬೇಕು ಮತ್ತು ಅರಿವೇ ಬರಹವಾಗ ಬೇಕು” ಎಂದಿರುವರು.
“ಸ್ವಪ್ನ” ಕವನದಲ್ಲಿ
ನದಿಯ ಜುಳು ಜುಳು ನಿನಾದದಲಿ
ಮೈವರೆವ ಕನಸ ಬಿತ್ತುತ್ತಿದ್ದೆ
ಮಳೆ ಹನಿಗಳಲಿ ಮಿಂದೇಳುವ
ಸ್ವರ್ಗಸುಖವ ನೆನೆಯುತ್ತಿದ್ದೆ
ಎನ್ನುತ್ತಾ ಬಾಲ್ಯದ ದಿನಗಳನ್ನು ನೆನೆದು ಪರಿಸರ ನಾಶದ ಕುರಿತಾಗಿಯೂ ಎಚ್ಚರಿಕೆ ನೀಡಿರುವುದು. ಮನುಷ್ಯನ ಸ್ವಯಂಕೃತ ಅಪರಾಧದಿಂದಾಗಿ ಇಂದು ಎಲ್ಲವೂ ಅಳಿವಿನ ದಾರಿಗುಂಟ ನಡೆಯು ತ್ತಿದೆ. ಗಿಡಮರಗಳನ್ನು ಕಡೆದು ಪ್ರಾಣ ಪಕ್ಷಿಗಳಿ ಗೂ ನೆಲೆ ಇಲ್ಲದಂತಾ ಗಿದೆ. ಮಳೆಹನಿ ಬತ್ತಿದೆ. ಸುಂದರ ವಾದ ಪ್ರಕೃತಿ ಯನ್ನು ನಾವೀಗ ಕನಸಿ ನಲ್ಲಿಯೇ ನೆನೆಯ ಬೇಕಾಗಿದೆ, ಎಂದು ಕವಿ ತಾನೊಂ ದು ಮರ ವಾಗಿ ಹುಟ್ಟುವ ಹಂಬಲ ವ್ಯಕ್ತಪಡಿಸಿ ರುವರು.
‘ನಿಮ್ಮೊಳಗಿನ ಮಿತ್ರನ ಬಡಿದೆಬ್ಬಿಸಿ ಹೊರತನ್ನಿ ಅಂತಸ್ತುಗಳ ಕಡಲ ದಾಟಿ ಬಾಲ್ಯದಂಗಳದಿ ನಿಲ್ಲಿ’
ಎಂದು ಮನದಾಳದಿ ಹಾರೈಸುವ ಶಿವಲೀಲಾರ ಕವಿತೆಗಳಲ್ಲಿ ಸ್ತ್ರೀ ಸಂವೇದನೆ, ಸಮನ್ವಯತೆ, ಬಡತನ, ಸಾಮಾಜಿಕ ಕಾಳಜಿ, ಮಾನವೀ ಯ ಸಂಬಂಧದ ಸೆಲೆಗಳು, ಮಗು ಮನ ಹೀಗೆ ಎಲ್ಲವೂ ನೆಲೆಗೊಂಡರೂ, ಕಂಡ ಕಂಡ ವಸ್ತುಗ ಳನ್ನೆಲ್ಲಾ ಕವಿತೆ ಮಾಡ ಹೊರಟಿದ್ದರಿಂದ ವಾಚ್ಯತೆ ಯ ಬಿರುಗಾಳಿಯಲ್ಲಿ ಸೋತು ಕೆಲ ಕವಿತೆಗಳು ಸ್ವಲ್ಪ ಸೊರಗಿದಂತೆ ಕಾಣುವದು. ಹೊಸ ಹೊಸ ಓದನ್ನು ಮೈಗೂಡಿಸಿಕೊಂಡು, ಕವಿತೆಯ ಕುರಿತು ಅಧ್ಯಯನಶೀಲರಾಗಿ ಶಿವಲೀಲಾರವರು ಸಾಹಿತ್ಯ ಲೋಕದಲ್ಲಿ ಸುದ್ದಿ ಮಾಡಲೆಂದು ಹಾರೈಸಿ ಈ ಮೊದಲನೆಯ ಸಂಕಲನಕ್ಕೆ ಶುಭ ಕೋರುವೆ.

ಶಿವಲೀಲಾರವರ ಎಲ್ಲ ಕಾರ್ಯಗಳಿಗೆ ಬೆಂಬಲ ವಾಗಿ ನಿಂತು ಪ್ರೋತ್ಸಾಹಿಸುವ ಅವರ ಪತಿ ಸ್ನೇಹ ಜೀವಿ ಶಂಕರ ನಾಯಕ್, ಅಮ್ಮನ ಸಾಹಿತ್ಯ ಕೃಷಿಯ ಚಟುವಟಿಕೆಗಳನ್ನು ಬೆರಗು ಗಣ್ಣುಗಳಿಂದ ನೋಡುತ್ತ ವ್ಯಾಸಂಗ ಮಾಡುತ್ತಿ ರುವ ಇಬ್ಬರು ಮಕ್ಕಳಾದ ಸ್ನೇಹಾ ಹಾಗೂ ಸ್ವಾತಿ ಇವರು ಶಿವಲೀಲಾ ಹುಣಸಗಿಯವರ ಜೀವನ ಪ್ರೀತಿಯ ಪ್ರೇರಕ ಶಕ್ತಿಗಳಾಗಿದ್ದು ಅವರಿಗೂ ಕೂಡ ಈ ಸಂದರ್ಭದಲ್ಲಿ ಶುಭ ಹಾರೈಸುವೆ.
✍️ಪ್ರಕಾಶ ಕಡಮೆ, ಹುಬ್ಬಳ್ಳಿ
ಕವಯತ್ರಿ ಶಿವಲೀಲಾ ಹುಣಸಗಿ “ಬದುಕೆಂದ್ರೆ ಹೀಗೇನಾ” ಎಂಬ ಚೊಚ್ಚಿಲು ಕವನ ಸಂಕಲನದ ಕುರಿತು ಮಿತ್ರ ಪ್ರಕಾಶ ಕಡಮೆ ಅವರು ಬಹಳ ಸುಂದರವಾದ ವಿಮರ್ಶೆಯನ್ನು ಬರೆದಿರುತ್ತಾರೆ. ಕಾವ್ಯ ಕನಸಿನ ನಕ್ಷತ್ರಗಳು ಎಂಬ ವಾಟ್ಸಪ್ ಗುಂಪಿನ ಎಡ್ಮಿನ್ ಆಗಿರುವ ಶಿವಲೀಲಾ ಅವರು ಕವಿತೆಗಾಗಿಯೆ ತಮ್ಮನ್ನು ತೆತ್ತುಕೊಂಡವರು. ಅವರಿಗೆ ನನ್ನ ಮನದಾಳದ ಅಭಿನಂದನೆಗಳು.
“Behind every great man there is a woman ” ಎಂಬ ಆಂಗ್ಲ ಸೂಕ್ತಿಯಿದೆ. ಈ ಸಂಕಲನದ ಪ್ರಕಾಶಕರಾದ ಸೌ.ಶಿವಲೀಲಾ ಅವರ ವಲ್ಲಭರಾದ ಶಂಕರ ನಾಯಕ್ ಅವರು ” Behind every creative woman there is a man” ಎಂಬ ಮಾತನ್ನು ಸತ್ಯವಾಗಿಸಿದ್ದಾರೆ.” ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಗೆ” ಎಂಬ ಶರಣರ ನುಡಿಯಂತೆ ಶಿವಲೀಲಾ ದಂಪತಿಗಳ ನುಡಿ ತಾಯಿಗೆ ಹೂ ಮುಡಿಸುವ ಕಾಯಕ ಅನವರತ ಮುಂದುವರಿಯಲಿ. ಡಾ.ಶ್ರೀಪಾದ ಶೆಟ್ಟಿ.
LikeLike
ಕವಯತ್ರಿ ಶಿವಲೂಲಾ ಹುಣಸಗಿ “ಬದುಕೆಂದ್ರೆ ಹೀಗೇನಾ” ಎಂಬ ಚೊಚ್ಚಿಲು ಕವನ ಸಂಕಲನದ ಕುರಿತು ಮಿತ್ರ ಪ್ರಕಾಶ ಕಡಮೆ ಅವರು ಬಹಳ ಸುಂದರವಾದ ವಿಮರ್ಶೆಯನ್ನು ಬರೆದಿರುತ್ತಾರೆ. ಕಾವ್ಯ ಕನಸಿನ ನಕ್ಷತ್ರಗಳು ಎಂಬ ವಾಟ್ಸಪ್ ಗುಂಪಿನ ಎಡ್ಮಿನ್ ಆಗಿರುವ ಶಿವಲೀಲಾ ಅವರು ಕವಿತೆಗಾಗಿಯೆ ತಮ್ಮನ್ನು ತೆತ್ತುಕೊಂಡವರು. ಅವರಿಗೆ ನನ್ನ ಮನದಾಳದ ಅಭಿನಂದನೆಗಳು.
“Behind every great man there is a woman ” ಎಂಬ ಆಂಗ್ಲ ಸೂಕ್ತಿಯಿದೆ. ಈ ಸಂಕಲನದ ಪ್ರಕಾಶಕರಾದ ಸೌ.ಶಿವಲೀಲಾ ಅವರ ವಲ್ಲಭರಾದ ಶಂಕರ ನಾಯಕ್ ಅವರು ” Behind every creative woman there is a man” ಎಂಬ ಮಾತನ್ನು ಸತ್ಯವಾಗಿಸಿದ್ದಾರೆ.” ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಗೆ” ಎಂಬ ಶರಣರ ನುಡಿಯಂತೆ ಶಿವಲೀಲಾ ದಂಪತಿಗಳ ನುಡಿ ತಾಯಿಗೆ ಹೂ ಮುಡಿಸುವ ಕಾಯಕ ಅನವರತ ಮುಂದುವರಿಯಲಿ. ಡಾ.ಶ್ರೀಪಾದ ಶೆಟ್ಟಿ.
LikeLike
ಈ ಬರಹವು ಶಿವಲೀಲಾಳ ವ್ಯೆಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ.👌👌
LikeLike
ಸೊಗಸಾಗಿ ಕವನಗಳ ವಿಮರ್ಶೆಯಾಗಿದೆ ವಿಮರ್ಶಕರಿಗೆ ತುಂಬು ಹೃದಯದ ಧನ್ಯವಾದಗಳು..
ಅದ್ಭುತವಾಗಿ ಮೂಡಿ ಬಂದಿದೆ..
LikeLike
ಕವನ ಸಂಕಲನ ದ ಕುರಿತಾಗಿ ಅಧ್ಬುತ ವಾಗಿ ಹಾಗೂ ಕವಿತೆಯ ಒಳಾರ್ಥವನ್ನು ಚೆನ್ನಾಗಿ ಬರೆದಿರುವ ಹಾಗೂ ಕವಿತಗಳನ್ನು ಓದಲು ಪ್ರೇರಣೆ ನೀಡಿರುವ ಸಾಹಿತಿಗಳಾದ ಶ್ರೀ ಪ್ರಕಾಶ ಸರ್ ಗೆ ಧನ್ಯವಾದಗಳು
LikeLike